ಅನುದಾನದ ಹೆಸರಿನಲ್ಲಿ ನಿರ್ಮಲಾ ಸೀತರಾಮನ್‌ ಕರ್ನಾಟಕವನ್ನು ಒಡೆಯುವ ಯತ್ನ : ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ

ಬೆಂಗಳೂರು : ಕರ್ನಾಟಕದಿಂದ ಸಂಗ್ರಹವಾಗುವ ಜಿಎಸ್‌ಟಿ ಹಣದ ಶೇ.50ರಷ್ಟಾದರೂ ಹಿಂದಕ್ಕೆ ಬರದೇ ಇದ್ದರೆ ಒಕ್ಕೂಟ ವ್ಯವಸ್ಥೆಗೆ ಏನು ಅರ್ಥ? ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಕೇಳಿದ್ದಾರೆ.

”ಕರ್ನಾಟಕ ಹೆಚ್ಚು ತೆರಿಗೆ ನೀಡುತ್ತಿದ್ದು, ಹಾಗಾಗಿ ಇಲ್ಲಿಗೆ ಹೆಚ್ಚು ಅನುದಾನ ನೀಡಬೇಕೆಂಬ ಚಿಂತನೆಯೇ ಸರಿಯಲ್ಲ. ಇದೊಂದು ರೀತಿ ಬೆಂಗಳೂರಿನಲ್ಲಿ ಸಂಗ್ರಹವಾದ ತೆರಿಗೆಯನ್ನೆಲ್ಲ ಬೆಂಗಳೂರಿಗೇ ಬಳಸಬೇಕೆಂದು ವಾದದಂತೆ ಆಗುತ್ತದೆ. ಆಗ ಯಾದಗಿರಿ, ಕಲಬುರಗಿ ಜಿಲ್ಲೆಗಳ ಅಭಿವೃದ್ಧಿಗೆ ಕರ್ನಾಟಕ ಸರಕಾರ ಎಲ್ಲಿಂದ ಅನುದಾನ ಹೊಂದಿಸಬೇಕು ?ʼʼ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿರುವುದಾಗಿ ಮಾಧ್ಯಮ ವರದಿಗಳನ್ನು ಗಮನಿಸಿರುವುದಾಗಿ ನಾರಾಯಣ ಗೌಡರು ತಿಳಿಸಿದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರೇ, ನೀವು ಕಲಬುರಗಿ, ಯಾದಗಿರಿ ಜಿಲ್ಲೆಗಳ ಚಿಂತೆಯನ್ನು ನಮಗೆ ಬಿಡಿ, ನಾವು ಅದನ್ನು ನೋಡಿಕೊಳ್ಳುತ್ತೇವೆ.  ಕರ್ನಾಟಕದಿಂದ ಹೆಚ್ಚಿನ ತೆರಿಗೆ ಪಡೆದು ಕವಡೆ ಕಾಸನ್ನು ಹಿಂದಕ್ಕೆ ಕೊಡುವುದನ್ನು ಮೊದಲು ಬಿಡಿ. ಕಳೆದ 12 ವರ್ಷಗಳಲ್ಲಿ (2014-2026, ಎನ್‌ಡಿಎ ಅವಧಿ) ₹4 ಲಕ್ಷ ಕೋಟಿ ರುಪಾಯಿಗಳನ್ನು ಕರ್ನಾಟಕಕ್ಕೆ ಕೊಟ್ಟಿದ್ದೇವೆ ಎಂದು ಹೇಳಿಕೊಂಡಿದ್ದೀರಿ. ಆದರೆ ನಾವು ವರ್ಷ ಒಂದಕ್ಕೆ ಕೇವಲ ಜಿಎಸ್‌ ಟಿ ಮೂಲಕವೇ ₹4.3 ಲಕ್ಷ ಕೋಟಿ ರಿಂದ ₹4.5 ಲಕ್ಷ ಕೋಟಿ ನೀಡುತ್ತಿದ್ದೇವಲ್ಲ, ಅದು ಎಲ್ಲಿಗೆ ಹೋಗುತ್ತಿದೆ? ಜಿಎಸ್‌ ಟಿ ವ್ಯವಸ್ಥೆ ಇಲ್ಲದ ವರ್ಷಗಳನ್ನೂ ಲೆಕ್ಕವಿಟ್ಟುಕೊಂಡು ನೋಡಿದರೆ ಸುಮಾರು ಸುಮಾರು ₹45 ಲಕ್ಷ ಕೋಟಿ ರಿಂದ ₹55 ಲಕ್ಷ ಕೋಟಿ  ತೆರಿಗೆ ನೀಡಿದ್ದೇವೆ. ನೀವು ಹಿಂದಕ್ಕೆ ಕೊಟ್ಟಿರುವುದು ನಿಮ್ಮ ಪ್ರಕಾರ ಕೇವಲ 4 ಲಕ್ಷ ಕೋಟಿ. ಶೇ.10ರಷ್ಟೂ ಹಣ ನಮಗೆ ಹಿಂದಕ್ಕೆ ಬಂದಿಲ್ಲ. ಇದು ಯಾವ ಸೀಮೆಯ ನ್ಯಾಯ?

ಕರ್ನಾಟಕಕ್ಕೆ ಭಿಕ್ಷೆ ಕೊಡಿ ಎಂದು ನಾವು ಕೇಳುತ್ತಿಲ್ಲ. ನಾವು ಕೊಡುವ ತೆರಿಗೆ ಹಣದ ಶೇ.50ರಷ್ಟಾದರೂ ಹಿಂದಕ್ಕೆ ಬರದೇ ಇದ್ದರೆ ಒಕ್ಕೂಟ ವ್ಯವಸ್ಥೆಗೆ ಏನು ಅರ್ಥ? ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಋಣಪ್ರಜ್ಞೆಯೂ ನಿಮಗೆ ಇದ್ದ ಹಾಗೆ ಕಾಣುವುದಿಲ್ಲ.  ನಿಮ್ಮ ಕೈಯಲ್ಲಿ ಅಧಿಕಾರ ಇದೆಯಲ್ಲ, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಒಂದು ವಿಶೇಷ ಪ್ಯಾಕೇಜ್‌ ಘೋಷಿಸಿ ನೋಡೋಣ ಎಂದಿದ್ದಾರೆ.

ಕರ್ನಾಟಕದ ಯಾವ ಜಿಲ್ಲೆಗೆ ಎಷ್ಟು ಅನುದಾನ ನೀಡಬೇಕು ಎಂಬುದನ್ನು ಕರ್ನಾಟಕ ಸರ್ಕಾರ ನೋಡಿಕೊಳ್ಳುತ್ತದೆ. ಎತ್ತಿಕಟ್ಟಿ ತಮಾಶೆ ನೋಡುವುದನ್ನು ಬಿಟ್ಟುಬಿಡಿ. ಕರ್ನಾಟಕವನ್ನು ಒಡೆಯುವ ಯತ್ನ ಮಾಡಬೇಡಿ. ಅಂಥ ಯತ್ನಗಳು ಆ ಕಾಲದಿಂದಲೂ ವಿಫಲವಾಗಿವೆ. ನಾವು ಕನ್ನಡಿಗರು ಯಾವಾಗಲೂ ಒಂದಾಗಿಯೇ ಇರುತ್ತೇವೆ.

ಕರ್ನಾಟಕದ ತೆರಿಗೆ ಹಣವನ್ನು ಯಾವುದೇ ಮುಲಾಜಿಲ್ಲದೆ, ನಾಚಿಕೆಯೂ ಇಲ್ಲದೆ ಬೇರೆ ರಾಜ್ಯಗಳಿಗೆ ಹಂಚುತ್ತ ಬಂದಿದ್ದೀರಿ. ಮೊದಲು ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ಆಮೇಲೆ ಕರ್ನಾಟಕವನ್ನು ಪ್ರಶ್ನೆ ಮಾಡಿ. ದೇಶದ ಅತ್ಯುತ್ತಮ ಆರ್ಥಿಕತೆಯನ್ನು ಹೊಂದಿರುವ ರಾಜ್ಯವಾದ ಕರ್ನಾಟಕದ ಋಣ ನಿಮ್ಮ ಮೇಲಿದೆ. ಅದನ್ನು ಮರೆಯಬೇಡಿ ಎಂದಿದ್ದಾರೆ.

More articles

Latest article

Most read