ಟಿಎಂಸಿ ಪಕ್ಷ ಬಹುತೇಕ ಇಬ್ಬಾಗ : 20 ಟಿಎಂಸಿ  ಸಂಸದರು ಎನ್‌ಡಿಎಗೆ ಬೆಂಬಲ

ಕೋಲ್ಕತ್ತಾ :  ಬಿಜೆಪಿ ನೇತೃತ್ವದ ಎನ್‌ಡಿಎಗೆ 20 ಟಿಎಂಸಿ ಸಂಸದರು ಬೆಂಬಲ ಘೋಷಿಸಿದ್ದಾರೆ. ಸ್ಪೀಕರ್ ಓಂ ಬಿರ್ಲಾ ಅವರಿಗೆ  ಬೆಂಬಲ ನೀಡುವ ಪತ್ರ ಬರೆಯುವುದಾಗಿ ಮುಖ್ಯ ಸಚೇತಕ ಕಾಕೋಲಿ ಘೋಷ್ ದಸ್ತಿದಾರ್  ತಿಳಿಸಿದ್ದಾರೆ.

ಟಿಎಂಸಿಯ 20 ಸಂಸದರು  ಸೋಮವಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಮೂಲಕ ಟಿಎಂಸಿಯಲ್ಲಿ ಬಿಕ್ಕಟ್ಟು ಇನ್ನಷ್ಟು ತೀವ್ರಗೊಂಡಿದೆ. ಇದು ಪಕ್ಷದ ಸಂಸದೀಯ ಘಟಕದಲ್ಲಿ ವಿಭಜನೆಗೆ ಕಾರಣವಾಗಿದ್ದು, ವಿಧಾನಸಭೆ ಚುನಾವಣೆ ಸೋಲಿನ ನಂತರ ಮಮತಾ ಬ್ಯಾನರ್ಜಿ ಅವರ ನೇತೃತ್ವದ ಟಿಎಂಸಿಯಲ್ಲಿ ಬಿರುಗಾಳಿ ಎದ್ದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಟಿಎಂಸಿ ಹಿನ್ನಡೆ ಅನುಭವಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಪಕ್ಷದ 80 ಶಾಸಕರಲ್ಲಿ 58 ಶಾಸಕರು, ಪಕ್ಷದ ಹೈಮಾಂಡ್ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸೋವಂದೇಬ್ ಚಟ್ಟೋಪಾಧ್ಯಾಯ ಅವರ ನೇಮಕವನ್ನು ವಿರೋಧಿಸಿ, ಉಚ್ಚಾಟಿತ ಶಾಸಕ ರಿತಬ್ರತಾ ಬ್ಯಾನರ್ಜಿ ಅವರನ್ನು ಆ ಹುದ್ದೆಗೆ ಆಯ್ಕೆ ಮಾಡಿದ್ದಾರೆ. ಇದು ಸಹ ಈಗ ವಿವಾದಕ್ಕೆ ಈಡಾಗಿದೆ.

ವಿಧಾನಸಭಾ ಚುನಾವಣೆ ಸೋಲಿನ ನಂತರ ಟಿಎಂಸಿಯಲ್ಲಿ ಉಂಟಾಗಿರುವ ರಾಜಕೀಯ ಪ್ರಕ್ಷುಬ್ಧತೆ ಸೋಮವಾರ, ಟಿಎಂಸಿಯ ಲೋಕಸಭಾ ಸಂಸದರಲ್ಲೂ ಎದ್ದಿದೆ. ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ಸಮಾವೇಶದಲ್ಲಿ ಭಾಗವಹಿಸಿರುವಾಗಲೇ, ಭಿನ್ನಮತೀಯ ಸಂಸದರ ಗುಂಪು ಎನ್‌ಡಿಎಗೆ ಬೆಂಬಲ ಘೋಷಿಸಿದೆ.

ಎನ್‌ಡಿಎಗೆ ಬೆಂಬಲ ನೀಡುವ ತಮ್ಮ ನಿರ್ಧಾರವನ್ನು ಟಿಎಂಸಿ ಸಂಸದರು ಸ್ಪೀಕರ್‌ಗೆ ತಿಳಿಸಿದ್ದಾರೆ ಎಂದು ಘೋಷ್ ದಸ್ತಿದಾರ್ ಹೇಳಿದ್ದಾರೆ. ನಾನು ಸೇರಿದಂತೆ ಸುಮಾರು ಇಪ್ಪತ್ತು ಟಿಎಂಸಿ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಔಪಚಾರಿಕವಾಗಿ ಎನ್‌ಡಿಎಗೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಘೋಷ್ ದಸ್ತಿದಾರ್, ಲೋಕಸಭೆಯಲ್ಲಿ ಟಿಎಂಸಿಯ ಮುಖ್ಯ ಸಚೇತಕರಾಗಿ ಮುಂದುವರೆದಿದ್ದಾರೆ ಮತ್ತು ಪಕ್ಷದ ನಾಯಕತ್ವವು ಘೋಷಿಸಿದ ಯಾವುದೇ ನಂತರದ ಬದಲಾವಣೆಗಳನ್ನು ಅಗತ್ಯ ಸಂಸದೀಯ ಕಾರ್ಯವಿಧಾನದ ಮೂಲಕ ಪೂರ್ಣಗೊಳಿಸಲಾಗಿಲ್ಲ ಎಂದು ಭಿನ್ನಮತೀಯ ಸಂಸದರು ಸ್ಪೀಕರ್ ಮುಂದೆ ವಾದಿಸಲು ಉದ್ದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಘೋಷ್ ದಸ್ತಿದಾರ್ ಅವರನ್ನು ಮುಖ್ಯ ಸಚೇತಕ ಸ್ಥಾನದಿಂದ ತೆಗೆದುಹಾಕಿ ಕಲ್ಯಾಣ್ ಬ್ಯಾನರ್ಜಿ ಅವರನ್ನು ಬದಲಾಯಿಸಲು ನಿರ್ಧರಿಸಿತ್ತು. ಆದರೆ, ಅದನ್ನು ಲೋಕಸಭಾ ಕಾರ್ಯದರ್ಶಿಗೆ ತಿಳಿಸಲಾಗಿಲ್ಲ ಎಂದು ಮತ್ತೊಬ್ಬ ಬಂಡಾಯ ಟಿಎಂಸಿ ಸಂಸದ  ತಿಳಿಸಿದ್ದಾರೆ.

ನಾವು ಎನ್‌ಡಿಎ ಜೊತೆ ಹೋಗಲು ತೀರ್ಮಾನಿಸಿದ್ದೇವೆ.  ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ತಾವು ಮುಂದುವರಿಯುವುದಾಗಿ ಹೇಳಿಕೊಂಡ ಘೋಷ್ ದಸ್ತಿದಾರ್, ಸಹ ಸಂಸದರ ಸಮಾಲೋಚನೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ನಾವು ಜನರ ತೀರ್ಪನ್ನು ಒಪ್ಪಿಕೊಂಡಿದ್ದೇವೆ ಮತ್ತು ನಮ್ಮ ಭವಿಷ್ಯದ ರಾಜಕೀಯ ಹಾದಿಯು ಎನ್‌ಡಿಎ ಯೊಂದಿಗೆ ಹೋಗಬೇಕು ಎಂದು ನಂಬುತ್ತೇವೆ ಎಂದು ಅವರು ಹೇಳಿದ್ದಾರೆ. 

More articles

Latest article

Most read