ಜೈಪುರ : ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡ ಐಪಿಎಲ್ 2026 ರಲ್ಲಿ ತನ್ನ 9ನೇ ಸೋಲನ್ನು ಅನುಭವಿಸಿದೆ. ಪಂದ್ಯದ ನಂತರದ ಸಂದರ್ಶನದಲ್ಲಿ ನಾಯಕ ರಿಷಭ್ ಪಂತ್ ತಮ್ಮ ಹತಾಶೆಯನ್ನು ಹೊರಹಾಕುವಾಗ ಕೆಟ್ಟ ಪದ ಬಳಸಿದ್ದಾರೆ.
ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕಳಪೆ ಪ್ರದರ್ಶನ ಮುಂದುವರಿದಿದ್ದು, ಮತ್ತೊಂದು ಸೋಲನ್ನು ಕಂಡಿದೆ. ಈ ಸೀಸನ್ನಲ್ಲಿ ಎಲ್ಎಸ್ಜಿಗೆ ಇದು 9ನೇ ಸೋಲಾಗಿದ್ದು, ಇನ್ನು ಕೇವಲ ಒಂದು ಪಂದ್ಯ ಬಾಕಿ ಇರುವಾಗ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯುವ ಸಾಧ್ಯತೆ ದಟ್ಟವಾಗಿದೆ. ಇದು ನಾಯಕ ರಿಷಭ್ ಪಂತ್ ಅವರಿಗೆ ತೀವ್ರ ಹತಾಶೆ ತಂದಿಟ್ಟ ಸೀಸನ್ ಆಗಿದೆ. ಈ ಹತಾಶೆಯು ಪಂದ್ಯದ ನಂತರ ಲೈವ್ ಟಿವಿಯಲ್ಲೇ ಹೊರಬಿದ್ದಿದ್ದು, ಅಪರೂಪದ ಕ್ಷಣವೊಂದರಲ್ಲಿ ಅವರು ಸೆನ್ಸಾರ್ ಆಗದ ಪದವೊಂದನ್ನು ಬಳಸಿದ್ದಾರೆ.
ಪಂದ್ಯದ ಮುಕ್ತಾಯದ ನಂತರ ವೆಸ್ಟ್ ಇಂಡೀಸ್ನ ಮಾಜಿ ವೇಗಿ ಹಾಗೂ ಈಗಿನ ಕಾಮೆಂಟೇಟರ್ ಇಯಾನ್ ಬಿಷಪ್ ಅವರೊಂದಿಗೆ ಮಾತನಾಡಿದ ರಿಷಭ್ ಪಂತ್, ತಂಡದ ಸದ್ಯದ ಪರಿಸ್ಥಿತಿ ಮತ್ತು ಪಂದ್ಯದ ಫಲಿತಾಂಶ ಏನೇ ಇರಲಿ, ಎಲ್ಎಸ್ಜಿ ಒಂದು ಅತ್ಯುತ್ತಮ ತಂಡ ಎಂಬುದು ತಮಗೆ ಗೊತ್ತು ಎಂದರು. ಇದನ್ನು ಹೇಳುವಾಗ ಅವರು ಲೈವ್ ಟಿವಿಯಲ್ಲೇ ಕೆಟ್ಟ ಪದವನ್ನ ಬಳಸಿದರು.
“ನಮ್ಮ ಸದ್ಯದ ಪರಿಸ್ಥಿತಿ ಏನೇ ಇರಲಿ, ಒಂದು ತಂಡವಾಗಿ ನಮಗೆ ಹೆಮ್ಮೆಯಿದೆ. ನಮ್ಮಲ್ಲಿರುವ ತಂಡದ ಬಲ ನಮಗೆ ಗೊತ್ತು, ನಾವು ಗೆಲ್ಲಬಲ್ಲೆವು ಎಂಬ ನಂಬಿಕೆಯಿದೆ. ಏನೇ ಆದರೂ, ಒಂದು ತಂಡವಾಗಿ ಮತ್ತು ವೈಯಕ್ತಿಕವಾಗಿ ನಮ್ಮ ಮೇಲೆ ನಮಗೆ ಸಾಕಷ್ಟು ಆತ್ಮವಿಶ್ವಾಸವಿದೆ. ಈ ಬಾರಿ ನಮ್ಮ ಅದೃಷ್ಟ ಕೈಕೊಟ್ಟಿದೆ, ಅದು ಎಲ್ಲರಿಗೂ ಗೊತ್ತು. ಆದರೆ, ಅಷ್ಟಕ್ಕೇ ನಾವು ಅತ್ಯಂತ ಅದ್ಭುತವಾದ ತಂಡ fu****g good team ಅಲ್ಲ ಎಂದು ಪಂತ್ ಹೇಳಿದ್ದಾರೆ.

