ಬೆಂಗಳೂರು: ಮಲೆನಾಡಿನ ನಾಲ್ಕು ಜಿಲ್ಲೆಗಳನ್ನು ಸೇರಿಸಿ ಶಿವಮೊಗ್ಗದಲ್ಲಿ ಒಂದು ಸಂಚಾರಿ ನ್ಯಾಯಪೀಠವನ್ನು ಸ್ಥಾಪಿಸಲು ಕೋರಿ ಇಂದು ಶಿವಮೊಗ್ಗದ ನ್ಯಾಯವಾದಿಗಳು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ನ್ಯಾಯವಾದಿಗಳೊಂದಿಗೆ ಮಾತನಾಡಿದ ಸಿ ಎಂ ಸಿದ್ದರಾಮಯ್ಯ ಜಿಲ್ಲೆಯ ಅಹವಾಲನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಕೆ.ಬಸಪ್ಪಗೌಡ, ಜಿ.ಆರ್.ರಾಘವೇಂದ್ರ, ಕೆ.ಪಿ.ಶ್ರೀಪಾಲ, ಲಕ್ಷ್ಮಿಕಾಂತ ಚಿಮನೂರು, ಶ್ರೀನಿವಾಸ, ಹಾಗೂ ಹೈ ಕೋರ್ಟ್ ವಕೀಲರಾದ ಹರೀಶ್, S V ಪ್ರಕಾಶ್, ಚಂದ್ರಕಾಂತ್ ಪಾಟೀಲ್, ಅನಿತಾ ಪಾಟೀಲ್ ಇದ್ದರು

