ಅಹಮದಾಬಾದ್ : 2026ರ ಐಪಿಎಲ್ ಪಂದ್ಯಾವಳಿಯ ಪೈನಲ್ ಮ್ಯಾಚ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು RCB ಹಾಗೂ ಗುಜರಾತ್ ಟೈಟಾನ್ಸ್ GT ನಡುವೆ ನಡೆಯಲಿದೆ. ಶುಕ್ರವಾರ ರಾತ್ರಿ ಚಂಡಿಘಡದಲ್ಲಿ ನಡೆದ ಕ್ವಾಲಿಫೈಯರ್ 2 ಪಂದ್ಯದಲ್ಲಿ ಆರ್ ಆರ್ ವಿರುದ್ದ ಜಿಟಿ 7 ವಿಕೆಟ್‌ಗಳ ಭರ್ಜರಿ ಜಯಗಳಿಸಿ ಫೈನಲ್ ಪ್ರವೇಶಿಸಿದೆ.
167 ರನ್ ಜೊತೆಯಾಟ
ಜಿಟಿ ನಾಯಕ ಶುಭ್‌ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ 167 ರನ್ ಜೊತೆಯಾಟ ಆಡುವ ಮೂಲಕ ಆರ್ ಆರ್ ತಂಡದ ಬೌಲರ್‌ಗಳ ಬೆವರಿಳಿಸಿದರು.
ಗುಜರಾತ್ ನಾಯಕ ಶುಭಮನ್ ಗಿಲ್ ಮತ್ತೊಮ್ಮೆ ಪ್ಲೇಆಫ್‌ನಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿ ಸ್ಮರಣೀಯ ಶತಕ ಗಳಿಸಿದರು. ಗಿಲ್ ಕೇವಲ 47 ಎಸೆತಗಳಲ್ಲಿ 15 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ ತಮ್ಮ ಐದನೇ ಐಪಿಎಲ್ ಶತಕವನ್ನು ಪೂರೈಸಿದರು. ಗಿಲ್ ಈ ಹಿಂದೆ 2023 ರ ಪ್ಲೇಆಫ್‌ನಲ್ಲಿ ಶತಕ ಗಳಿಸಿದ್ದರು. ಸಾಯಿ ಸುದರ್ಶನ್ ಮತ್ತೊಮ್ಮೆ ಹಿಟ್ ವಿಕೆಟ್ ಔಟಾದರು. ಈ ಬಾರಿ ಅವರು ಕಟ್ ಶಾಟ್ ನಲ್ಲಿ ಬೌಂಡರಿ ಹೊಡೆಯಲು ಪ್ರಯತ್ನಿಸಿದರು, ಆದರೆ ಅವರ ಬ್ಯಾಟ್ ಕೈಯಿಂದ ಜಾರಿ ಸ್ಟಂಪ್ ಗೆ ಅಪ್ಪಳಿಸಿತು. ಸುದರ್ಶನ್ 58 ರನ್ ಗಳಿಗೆ ಔಟಾದರು, ಇದು ಗುಜರಾತ್ ನ ಮೊದಲ ವಿಕೆಟ್ ಆಗಿತ್ತು.
ವೈಭವ್ ಸೂರ್ಯವಂಶಿಯ ವೈಭವದ ಆಟ
Vaibhav Sooryavanshi ಅವರು 47 ಬಾಲ್‌ಗಳಲ್ಲಿ 96 ರನ್‌ಗಳನ್ನು ಸಿಡಿಸಿದರು. ಈ ಮೂಲಕ Rajasthan Royals 214/6 ರನ್‌ಗಳನ್ನು ಗಳಿಸಿತು. ಸೂರ್ಯವಂಶಿ IPL ಇತಿಹಾಸದಲ್ಲೇ ಅತಿ ವೇಗವಾಗಿ 1,000 ರನ್‌ಗಳನ್ನು ಬಾಲ್‌ಗಳ ಆಧಾರದ ಮೇಲೆ ತಲುಪಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಅವರು ಕೇವಲ 440 ಬಾಲ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಇದರಿಂದ ಅವರು ಈ ಹಿಂದಿನ ದಾಖಲೆ ಹೊಂದಿದ್ದ Andre Russell ಅವರ 545 ಬಾಲ್‌ಗಳ ದಾಖಲೆಯನ್ನು ದೊಡ್ಡ ಅಂತರದಿಂದ ಮೀರಿಸಿದ್ದಾರೆ.
ಇದಲ್ಲದೆ, ಅವರು ಒಂದೇ IPL ಸೀಸನ್‌ನಲ್ಲಿ ಪವರ್‌ಪ್ಲೇನಲ್ಲಿ 500 ರನ್‌ಗಳನ್ನು ಮಾಡಿದ ಮೊದಲ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನೂ ನಿರ್ಮಿಸಿದ್ದಾರೆ. ಬೌಲಿಂಗ್‌ನಲ್ಲಿ ಜೇಸನ್ ಹೋಲ್ಡರ್ ಮತ್ತು ಕಾಗಿಸೊ ರಬಾಡಾ ತಲಾ ಎರಡು ವಿಕೆಟ್ ಪಡೆದರು. ಈ ಪಂದ್ಯದಲ್ಲಿ RR ನಾಯಕ Riyan Parag ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು.

