ಡೇಲ್ ಸ್ಟೇನ್, ಅಂಬಾಟಿ ರಾಯುಡು ವಾಗ್ದಾಳಿ: ಆಕಾಶ್ ಸಿಂಗ್ ಅವರ ‘ಪಾಕೆಟ್ ನೋಟ್’ ಸಂಭ್ರಮಾಚರಣೆಗೆ ಭಾರಿ ಟೀಕೆ

ಬೆಂಗಳೂರು : ಲಕ್ನೋ ಸೂಪರ್ ಜೈಂಟ್ಸ್ (LSG) ವೇಗಿ ಆಕಾಶ್ ಸಿಂಗ್, ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದರು. ಅವರು 26 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ LSG ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಆದರೆ, ಆಕಾಶ್ ವಿಕೆಟ್ ಪಡೆದ ಪ್ರತಿ ಬಾರಿಯೂ ತಮ್ಮ ಜೇಬಿನಿಂದ ಒಂದು ಚೀಟಿಯನ್ನು ಹೊರತೆಗೆದು ಅದನ್ನು ಮೇಲಕ್ಕೆ ಹಿಡಿದು ಸಂಭ್ರಮಿಸುತ್ತಿದ್ದರು. ಆ ಚೀಟಿಯಲ್ಲಿ ಒಂದು ಪ್ರೇರಕ ಸಂದೇಶವಿತ್ತು ಎಂಬುದು ಆಮೇಲೆ ಬೆಳಕಿಗೆ ಬಂದಿತು.

ಆ ನೋಟ್‌ನಲ್ಲಿ “#Akkionfire – ಟಿ20 ಪಂದ್ಯದಲ್ಲಿ ವಿಕೆಟ್ ಪಡೆಯುವುದು ಹೇಗೆ ಎಂದು ಆಕಾಶ್‌ಗೆ ಗೊತ್ತು,” ಎಂದು ಬರೆಯಲಾಗಿತ್ತು.

ಈ ಚೀಟಿ ಪ್ರದರ್ಶಿಸಿ ಸಂಭ್ರಮಿಸುವ ಶೈಲಿಯು ಐಪಿಎಲ್ 2026 ರಲ್ಲಿ ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಊರ್ವಿಲ್ ಪಟೇಲ್ ಮತ್ತು ರಘು ಶರ್ಮಾ ಸೇರಿದಂತೆ ಹಲವು ಆಟಗಾರರು ಸಹ ಇಂತಹ ಸಂದೇಶವಿರುವ ಚೀಟಿಗಳನ್ನು ಹೊರತೆಗೆದು ತಮ್ಮ ಸಾಧನೆಯನ್ನು ಸಂಭ್ರಮಿಸಿದ್ದಾರೆ.

ಆದರೆ, ಆಕಾಶ್ ಅವರ ಈ ಸಂಭ್ರಮಾಚರಣೆ ಹಲವು ಕ್ರಿಕೆಟ್ ಪಂಡಿತರಿಗೆ ಇಷ್ಟವಾಗಲಿಲ್ಲ. ಅವರು ವೇಗಿಯ ಈ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.

“ಇವತ್ತು ಪಂದ್ಯದ ಯಾವ ಕ್ಷಣದಲ್ಲಿ ಅವರಿಗೆ ‘ಹೇ, ಇದು ಅದ್ಭುತವಾಗಿರುತ್ತೆ, ನಾನು ಇದನ್ನು ಟಿವಿಯಲ್ಲಿ ತೋರಿಸಿದರೆ ಎಲ್ಲರೂ ನನ್ನನ್ನು ಕೂಲ್ ಅಂದುಕೊಳ್ಳುತ್ತಾರೆ’ ಅಂತ ಅನಿಸಿತೋ ನನಗೆ ತಿಳಿಯಬೇಕಿದೆ. ಹಾಗೇ, ‘ಇದು ತುಂಬಾ ಒಳ್ಳೆಯ ಐಡಿಯಾ’ ಎಂದು ಅವರಿಗೆ ಬೆಂಬಲ ನೀಡಿದ ಆ ಸ್ನೇಹಿತರು ಯಾರು ಎಂಬುದನ್ನೂ ನಾನು ತಿಳಿಯಲು ಬಯಸುತ್ತೇನೆ,” ಎಂದು ಅಂಬಾಟಿ ರಾಯುಡು ಗೆ ತಿಳಿಸಿದ್ದಾರೆ.

“ಇದು ಕೇವಲ ಅವರ ಕಲ್ಪನೆ ಅಷ್ಟೆ ಎಂದು ನಾನು ಭಾವಿಸುತ್ತೇನೆ. ಇದು ಬಹಳಷ್ಟು ಜನರಿಗೆ ಇಷ್ಟವಾಗದೇ ಇರಬಹುದು, ಆದರೆ ಇದು ನೋಡಲು ತಮಾಷೆಯಾಗಿದೆ ಮತ್ತು ಸ್ವಲ್ಪ ಮಟ್ಟಿಗೆ ಕಸದಂತೆ ಕಾಣುತ್ತದೆ,” ಎಂದು ರಾಯುಡು ಕಿಡಿಕಾರಿದ್ದಾರೆ.

ರಾಯುಡು ಅವರ ಮಾತುಗಳಿಗೆ ಧ್ವನಿಗೂಡಿಸಿದ ಮಿಚೆಲ್ ಮೆಕ್ಲೆನಾಘನ್

“ಈಗ ಬರುತ್ತಿರುವ ಈ ತಲೆಮಾರಿನ ಕೆಲವರನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿದೆ. ಐಪಿಎಲ್‌ನಲ್ಲಿ ನಿಮ್ಮ ಮೊದಲ ನಿಜವಾದ ಪ್ರದರ್ಶನ ನೀಡಿದ ತಕ್ಷಣವೇ, ಜನರು ನಿಮ್ಮ ಹೆಸರನ್ನು ಈಗಷ್ಟೇ ತಿಳಿದುಕೊಳ್ಳುತ್ತಿರುವಾಗ ಈ ರೀತಿ ಬೆರಳುಗಳನ್ನು ಮೇಲಕ್ಕೆತ್ತಿ ತೋರಿಸುವುದು ಸರಿನಾ? ನೀವು ಆಡಿರುವುದು ಕೇವಲ ನಾಲ್ಕು ಪಂದ್ಯಗಳು, ಅದಕ್ಕಾಗಲೇ ನಿಮಗೆ ಎಷ್ಟು ಜನ ದ್ವೇಷಿಗಳಿದ್ದಾರೆ ಬ್ರೋ? ಇದೆಲ್ಲವೂ ನನಗೆ ತುಂಬಾ ವಿಚಿತ್ರ ಮತ್ತು ಆಸಕ್ತಿದಾಯಕವಾಗಿ ಕಾಣುತ್ತಿದೆ,” ಎಂದಿದ್ದಾರೆ.

ಚೀಟಿ ಸಂಭ್ರಮಾಚರಣೆಗೆ ನಿಷೇಧ  ಹೇರಲು ರಾಯುಡು ಆಗ್ರಹ

ಈ ಚೀಟಿ ಸಂಭ್ರಮಾಚರಣೆಯನ್ನು ಸಂಪೂರ್ಣವಾಗಿ ಮೂರ್ಖತನ ಎಂದು ಕರೆದಿರುವ ರಾಯುಡು, ಇದಕ್ಕೆ ಸಂಪೂರ್ಣ ನಿಷೇಧ ಹೇರಬೇಕೆಂದು ಒತ್ತಾಯಿಸಿದ್ದಾರೆ. “ನನ್ನ ಪ್ರಕಾರ ಈ ಚೀಟಿ ಬಿಸಿನೆಸ್‌ ಅನ್ನು ನಿಷೇಧಿಸಬೇಕು, ಇದು ಸಂಪೂರ್ಣ ಮೂರ್ಖತನ. ಮೊದಲನೆಯದಾಗಿ ಅವರು ಮೈದಾನಕ್ಕೆ ಚೀಟಿಗಳನ್ನು ತರುವಂತೆಯೇ ಇಲ್ಲ,” ಎಂದಿದ್ದಾರೆ.

ಹಿರಿಯ ವೇಗಿ ಡೇಲ್ ಸ್ಟೇನ್ ಕೂಡ ಎಕ್ಸ್ (ಟ್ವಿಟರ್) ಮೂಲಕ ಪ್ರತಿಕ್ರಿಯಿಸಿದ್ದು, ಈ ಚೀಟಿ ಸಂಭ್ರಮಾಚರಣೆ ಇನ್ನು ಮುಂದೆ ಚೆನ್ನಾಗಿ ಕಾಣುವುದಿಲ್ಲ ಎಂದಿದ್ದಾರೆ. “ಈ ಕಾಗದಗಳನ್ನು ಪಕ್ಕಕ್ಕಿಡುವ ಸಮಯ ಬಂದಿದೆ. ಇದು ಇನ್ನು ಟ್ರೆಂಡಿಂಗ್ ಆಗಿ ಉಳಿದಿಲ್ಲ. ನಿಜ ಹೇಳಬೇಕೆಂದರೆ, ಇದು ಎಂದಿಗೂ ಟ್ರೆಂಡಿಂಗ್ ಆಗಿರಲೇ ಇಲ್ಲ,” ಎಂದು ಸ್ಟೇನ್ ಎಕ್ಸ್‌ನಲ್ಲಿ ಬರೆದಿದ್ದಾರೆ.

ಚೀಟಿ ಸಂಭ್ರಮಾಚರಣೆಯ ಹಿಂದಿನ ಕಾರಣ ಬಿಚ್ಚಿಟ್ಟ ಆಕಾಶ್ ಸಿಂಗ್

ಮತ್ತೊಂದೆಡೆ, ಆಕಾಶ್ ಸಿಂಗ್ ಈ ಸಂಭ್ರಮಾಚರಣೆಯ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದು, ಇದು ತಮಗೆ ಉತ್ತಮ ಪ್ರದರ್ಶನ ನೀಡಲು ಪ್ರೇರಣೆ ನೀಡುತ್ತದೆ ಎಂದು ಹೇಳಿದ್ದಾರೆ.

“ಇದು ನನಗೆ ಕೇವಲ ಪ್ರೇರಣೆ ನೀಡುತ್ತದೆ. ಇದರ ಹಿಂದೆ ಬೇರೆ ಯಾವುದೇ ಕಾರಣವಿಲ್ಲ. ಪಂದ್ಯದ ಸಮಯದಲ್ಲಿ ನನಗೆ ಯಾವುದು ಪ್ರೇರಣೆ ನೀಡುತ್ತದೆಯೋ, ಅದನ್ನು ನಾನು ಮುಂದುವರಿಸುತ್ತೇನೆ,” ಎಂದು ಆಕಾಶ್ ಸ್ಪಷ್ಟಪಡಿಸಿದ್ದಾರೆ.

More articles

Latest article

Most read