ನವದೆಹಲಿ : ಭಾರತದ ಕೃಷಿ ಹಾಗೂ ಆರ್ಥಿಕ ಚಟುವಟಿಕೆ ಮೇಲೆ ಪರಿಣಾಮ ಬೀರುವ ನೈರುತ್ಯ ಮುಂಗಾರು ಮಳೆ ಮಾರುತ ಈ ಬಾರಿ ಮೇ 26 ರಂದೇ ಕೇರಳ ಪ್ರವೇಶಿಸಲಿದೆ. ಎರಡು ದಿನಗಳ ಬಳಿಕ ರಾಜ್ಯಕ್ಕೆ ಆಗಮಿಸಲಿದೆ ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಪ್ರವೇಶಿಸುತ್ತಿದ್ದ ಮುಂಗಾರು ಈ ಬಾರಿ ನಾಲ್ಕು ದಿನ ಮುಂಚಿತವಾಗಿ ಪ್ರವೇಶಿಸಲಿವೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.
ಕಳೆದ ವರ್ಷ ಮುಂಗಾರು ಕೇರಳಕ್ಕೆ ಮೇ 24ರಂದು ಪ್ರವೇಶಿಸಿತ್ತು. ಜೂನ್ ವೇಳೆಗೆ ಕೇರಳದ ಮೂಲಕ ಭಾರತ ಪ್ರವೇಶಿಸುವ ಮುಂಗಾರು ಮಳೆ ಮಾರುತಗಳು ಬಳಿಕ ಕರ್ನಾಟಕ ಸೇರಿದಂತೆ ಇಡೀ ಭಾರತವನ್ನು ಆವರಿಸುತ್ತವೆ. ಜೂನ್‌ನಿಂದ ಸೆಪ್ಟಂಬರ್ ವೇಳೆಗೆ ಇಡೀ ಭಾರತವನ್ನು ಸುತ್ತುವರಿದು ಮಳೆ ಸುರಿಸುತ್ತವೆ. ಬಳಿಕ ಮಾರುಗಳು ಹಿಂದಿರುಗುತ್ತವೆ.
ಮುಂಗಾರು ಮಾರುತಗಳು ನಂತರ ಉತ್ತರ ಭಾರತದ ಕಡೆಗೆ ಸಾಗಿ, ದೇಶದ ಇತರ ಪ್ರದೇಶಗಳಿಗೂ ವ್ಯಾಪಿಸುತ್ತವೆ. ಮಳೆ ಮುನ್ಸೂಚನೆ ನೀ ಡಿರುವ ಐಎಂ ಡಿ, ‘ನೈಋತ್ಯ ಮುಂ ಗಾರುಮಾರುತಗಳು ಸಾಮಾನ್ಯಕ್ಕಿಂ ತ ನಾಲ್ಕು ದಿನಗಳ ಮೊದಲು ಅಂ ದರೆ, ಮೇ 26ರಂ ದು ಕೇ ರಳವನ್ನು ಪ್ರವೇ ಶಿಸುವ ಸಾಧ್ಯತೆ ಇದೆ’ ಎಂ ದು ತಿಳಿಸಿದೆ.
ನಾಲ್ಕು ತಿಂಗಳ ಕಾಲ ಮುಂಗಾರು ಮಾರುತಗಳು ದೇಶದ ವಾರ್ಷಿಕ ಮಳೆಯ ಸುಮಾರು ಶೇ.70ರಷ್ಟು ಮಳೆಯನ್ನು ಸುರಿಸುತ್ತವೆ. ಇದು ಕೃಷಿ ಹಾಗೂ ಕುಡಿಯುವ ನೀರಿನ ಮೂಲವಾಗಿದೆ. ಒಟ್ಟಾರೆ ಆರ್ಥಿಕತೆಗೆ ಇಂಬು ನೀಡುತ್ತದೆ.
ಅಂಡಮಾನ್ ಪ್ರವೇಶಿಸಿರುವ ಮುಂಗಾರು: ಮುಂಗಾರು ಮಳೆ ಮಾರುತಗಳು ಉತ್ತಮ ವಾತಾವರಣ ಇರುವ ಹಿನ್ನೆಲೆಯಲ್ಲಿ ಅಂಡಮಾನ್ ಮತ್ತು ನಿಕೋಬರ್ ದ್ವೀಪವನ್ನು ಪ್ರವೇಶಿಸಿವೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಾರುತಗಳು ಕೇರಳದತ್ತ ವೇಗವಾಗಿ ಚಲಿಸುತ್ತಿವೆ. ಹೀಗಾಗಿ ಮೇ 26ರೊಳಗೆ ಪ್ರವೇಶ ಪಡೆಯಲಿವೆ.
ಎಲ್ ನಿನೋ ಬಿಸಿಗಾಳಿ ಮಾರುತ ಪ್ರಭಾವ : ಈ ವರ್ಷ ಎಲ್ ನಿನೋ ಬಿಸಿಗಾಳಿ ಮಾರುತಗಳ ಪ್ರಭಾವ ಅಧಿಕವಾಗಿರುವುದರಿಂದ ಮುಂಗಾರು ಮಳೆ ಕ್ಷೀಣಿಸಲಿದೆ ಎಂದು ಹವಾಮಾನ ಇಲಾಖೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದರ ನಡುವೆ ಅವಧಿಗೆ ಮುನ್ನವೇ ಮುಂಗಾರು ಪ್ರವೇಶ ಮಾಡುತ್ತಿರುವುದು ರೈತರಲ್ಲಿ ಹರ್ಷ ಮೂಡಿಸಿದೆ.
ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಮುಂಗಾರು ಮಳೆಯಾಗಬಹುದು ಎಂದು ಐಎಂಡಿ ಹೇಳಿದೆ. ಈ ಬಾರಿ ದೇಶದಲ್ಲಿ 80 ಸೆಂ.ಮೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಮಳೆ ಕೊರತೆಯಾದರೆ ರಾಜ್ಯದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಲಿದೆ. ರಾಜ್ಯದ ಬಹುತೇಕ ಎಲ್ಲ ಅಣೆಕಟ್ಟೆಗಳ ನೀರು ಬರಿದಾಗುತ್ತಿದೆ.

