ತ್ರಿಷಾ ನಟನೆಯ ʼಕರುಪ್ಪುʼ ಸಿನಿಮಾ ನಾಳೆ ಬಿಡುಗಡೆ, ಬೆಳಗ್ಗಿನ ಪ್ರದರ್ಶನಕ್ಕೆ ವಿಜಯ್‌ ಅನುಮತಿ

ಚೆನ್ನೈ :  ಮೇ 14 ರಂದು ತಮಿಳು ಚಿತ್ರ ʼಕರುಪ್ಪುʼ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಮೊದಲ ದಿನದ ಮೊದಲ ಪ್ರದರ್ಶನ ಬೆಳಿಗ್ಗೆ 9 ಗಂಟೆಯಿಂದಲೇ ಆರಂಭವಾಗಲಿದೆ. ಇದಕ್ಕೆ ಮುಖ್ಯಮಂತ್ರಿ ಜೋಸೆಫ್‌ ವಿಜಯ್‌ ಅನುಮತಿ ನೀಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಡ್ರೀಮ್ ವಾರಿಯರ್ ಪಿಕ್ಚರ್ಸ್ ಎಕ್ಸ್‌ ನಲ್ಲಿ  ವಿಜಯ್ ಮುಖ್ಯಮಂತ್ರಿ ಕಚೇರಿಯಲ್ಲಿ ದಾಖಲೆಗೆ ಸಹಿ ಹಾಕುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದೆ.

ಕರುಪ್ಪುವಿನ ಬೆಳಿಗ್ಗೆ 9 ಗಂಟೆಯ ಪ್ರದರ್ಶನಗಳಿಗೆ ವಿಶೇಷ ಅನುಮತಿ ನೀಡಿದ್ದಕ್ಕಾಗಿ ನಮ್ಮ   ಮುಖ್ಯಮಂತ್ರಿ  ಜೋಸೆಫ್ ವಿಜಯ್ ಅವರಿಗೆ ವಿಶೇಷ ಧನ್ಯವಾದಗಳು.  ʼಕರುಪ್ಪುʼ ಸಿನಿಮಾ ಮೇ 14 ರಿಂದ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗುತ್ತದೆ  ಎಂದು  ಪೋಸ್ಟ್‌ ಮಾಡಲಾಗಿದೆ.

ಈಗಾಗಲೇ ಸಿನಿಮಾ ವೀಕ್ಷಿಸಲು ಮುಂಗಡ ಟಿಕೆಟ್‌ಗಳನ್ನು ಖರೀದಿಸಲಾಗಿದೆ. ಸುಮಾರು 3 ಕೋಟಿಗೂ ಹೆಚ್ಚು ಕಲೆಕ್ಷನ್‌ ಆಗಿದೆ ಎನ್ನಲಾಗಿದೆ.

ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಕರುಪ್ಪು ಚಿತ್ರದಲ್ಲಿ ಸೂರ್ಯ ನಾಯಕನಾಗಿ ನಟಿಸಿದ್ದಾರೆ ಮತ್ತು ನಟನನ್ನು ವಿಂಟೇಜ್ ಮಾಸ್-ಆಕ್ಷನ್ ಅವತಾರದಲ್ಲಿ ಪ್ರಸ್ತುತಪಡಿಸಿರುವ ನಿರೀಕ್ಷೆಯಿದೆ.
ಆರ್ ಜೆ ಬಾಲಾಜಿ ನಿರ್ದೇಶನದ ಈ ಚಿತ್ರದಲ್ಲಿ ತ್ರಿಷಾ ಕೃಷ್ಣನ್ ಕೂಡ ನಟಿಸಿದ್ದಾರೆ ಮತ್ತು ಡ್ರೀಮ್ ವಾರಿಯರ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಎಸ್ ಆರ್ ಪ್ರಭು ಮತ್ತು ಎಸ್ ಆರ್ ಪ್ರಕಾಶ್ ಬಾಬು ನಿರ್ಮಿಸಿದ್ದಾರೆ.

More articles

Latest article

Most read