ಕೋಲಾರ : ಇಲ್ಲಿನ ಚಾಕರಸನಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ಹುಲ್ಲು ತರಲು ಹೋಗಿದ್ದ 70 ವರ್ಷದ ವೃದ್ಧೆಯನ್ನು ಹತ್ಯೆ ಮಾಡಲಾಗಿದೆ.
ಕೊಲೆಯಾದ ದುರ್ದೈವಿ ವೃದ್ಧೆಯನ್ನು ನಾರಾಯಣಮ್ಮ ಎಂದು ಗುರುತಿಸಲಾಗಿದ್ದು, ನಿನ್ನೆ ಸಂಜೆ ಹಸುಗಳಿಗೆ ಮೇವು ತರಲು ಮನೆಯಿಂದ ಕೇವಲ 500 ಮೀಟರ್ ಅಂತರದಲ್ಲಿರುವ ಹೊಲಕ್ಕೆ ಹೋಗಿದ್ದರು. ಆ ಸಂದರ್ಭದಲ್ಲಿ ಈಕೆಯನ್ನು ಕೊಲೆಗೈದು ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಹುಲ್ಲು ತರಲು ಹೋಗಿದ್ದ ತನ್ನ ತಾಯಿ, ಮರಳಿ ಬರದಿದ್ದರಿಂದ ಆತನ ಮಗ ಮಂಜುನಾಥ ಎಂಬಾತನು ಸ್ಥಳಕ್ಕೆ ಹೋಗಿ ನೀಡಿದಾಗ ತಾಯಿ ಶವವಾಗಿ ಬಿದ್ದಿರುವುದನ್ನು ಕಂಡು ಆತಂಕಗೊಂಡಿದ್ದಾನೆ. ರಾತ್ರಿಯೇ ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಕನ್ನಿಕಾ ಸುಕ್ರಿ ಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಇಡೀ ಪೊಲೀಸ್ ಅಧಿಕಾರಿಗಳು ಚಾಕರಸನಹಳ್ಳಿಯಲ್ಲಿ ಬೀಡುಬಿಟ್ಟಿದ್ದಾರೆ.
ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ತೀವ್ರಶೋಧ ನಡೆಸುತ್ತಿದ್ದಾರೆ.

