ಮೇ 15ರಿಂದ ಐದು ರಾಷ್ಟ್ರಗಳಿಗೆ ಮೋದಿ ಪ್ರವಾಸ : ಸಾಮಾಜಿಕ ಜಾಲ ತಾಣದಲ್ಲಿ ವಿರೋಧ

ನವದೆಹಲಿ  : ಮಧ್ಯ ಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ತೈಲ ಬಿಕ್ಕಟ್ಟು ಎದುರಾಗಿರುವುದರಿಂದ ಭಾರತೀಯರು ಒಂದು ವರ್ಷ ವಿದೇಶಿ ಪ್ರವಾಸ ಮಾಡುವುದನ್ನು ನಿಲ್ಲಿಸಬೇಕು ಎಂದು ಸಲಹೆ ನೀಡಿದ್ದ ಪ್ರಧಾನಿ ಮೋದಿ ಈಗ ತಾವೇ ಐದು ರಾಷ್ಟ್ರಗಳ ವಿದೇಶಿ ಪ್ರವಾಸಕ್ಕೆ ತೆರಳುತ್ತಿದ್ದಾರೆ.

 ಪ್ರಧಾನಿ ಮೋದಿ ಮೇ 15 ರಿಂದ 20 ರವರೆಗೆ ಯುಎಇ, ನೆದರ್ಲೆಂಡ್ಸ್, ಸ್ವೀ ನ್, ನಾರ್ವೆ ಮತ್ತು ಇಟಲಿ ದೇಶಗಳಿಗೆ  ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

 ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂ ಘರ್ಷ ದಿಂದ ಜಾಗತಿಕ ತೈ ಲ ಪೂರೈಕೆಗೆ ಅಡಚಣೆಯಾಗಿದೆ. ಜಾಗತಿಕ ಅಸ್ಥಿರತೆಯ ಮಧ್ಯೆ ದೇಶದ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪ್ರಧಾನಿ ಮೋದಿ ಅವರ ಈ ಪ್ರವಾಸವು ಹೆಚ್ಚಿನ ಮಹತ್ವ ಪಡೆದಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ದೇ ಶದಲ್ಲಿ ಇಂಧನ ಭದ್ರತೆಗಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಮೋದಿ ಈಗಾಗಲೇ ನಾಗರಿಕರಿಗೆ ಮನವಿ ಮಾಡಿದ್ದಾರೆ. ಇದರಲ್ಲಿ ಸಾರ್ವಜನಿಕ ಸಾರಿಗೆ ಬಳಕೆ, ಮನೆಯಿಂದಲೇ ಕೆಲಸ ಮುಂತಾದ ಹಲವು ಸಲಹೆಗಳನ್ನು ನೀಡಿದ್ದಾರೆ

 ತೈಲ ಬಿಕ್ಕಟ್ಟಿನ ಮಧ್ಯೆ ಐದು ದೇಶಗಳ ವಿದೇಶ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ ಈ ಎಲ್ಲದರ ನಡುವೆ ಮೋದಿ  ಅವರ ಸಂಯುಕ್ತ ಅರಬ್ ಒಕ್ಕೂಟದ (ಯುಎಇ) ಭೇಟಿ ನಡೆಯುತ್ತಿದೆ. ಇತ್ತೀಚೆಗಷ್ಟೇ ಒಪೆಕ್ಸ್‌ನಿಂದ ಯುಎಇ ನಿರ್ಗಮಿಸಿದೆ. ಹೀಗಾಗಿ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗಿನ ಭೇಟಿ ಸಂದರ್ಭದಲ್ಲಿ ನೇರವಾಗಿ ಇಂಧನ ಖರೀದಿ ಸಂಬಂಧ ಮಾತುಕತೆ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇಂಧನ ಸಹಕಾರ, ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ವಿಷಯಗಳ ಕುರಿತು ಉಭಯ ನಾಯಕರು ಚರ್ಚಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುಎಇ, ಭಾರತದ ಮೂರನೇ ಅತೀದೊಡ್ಡ ವ್ಯಾಪಾರಿ ಪಾಲುದಾರ ರಾಷ್ಟ್ರವಾಗಿದೆ.

ತ್ಯಾಗ ಪ್ರಧಾನಿಗೆ ಅನ್ವಯಿಸುವುದಿಲ್ಲವೇ?

ಭಾರತೀಯರು ವಿದೇಶಿ ಪ್ರವಾಸ ಮುಂದೂಡಬೇಕು ಎಂದು ಹೇಳಿ ತಾವೇ ವಿದೇಶ ಪ್ರವಾಸ ಮಾಡುತ್ತಿರುವುದನ್ನು ನಾಗರಿಕರು ಸಾಮಾಜಿಕ ಜಾಲ ತಾಣದಲ್ಲಿ ವಿರೋಧಿಸುತ್ತಿದ್ದಾರೆ. ಜನರು ಮಾತ್ರ ತ್ಯಾಗ ಮಾಡಬೇಕು. ಇದು ಪ್ರಧಾನಿಗೆ ಅನ್ವಯವಾಗುವುದಿಲ್ಲವೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಮೊದಲು ಕೇಂದ್ರ ಸಚಿವರು ತ್ಯಾಗ ಮಾಡಿ ಇತರರಿಗೆ ಮಾದರಿಯಾಗಬೇಕು. ಆಗ ಸಾರ್ವಜನಿಕರು ಸಹಕಾರ ನೀಡುತ್ತಾರೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. 

More articles

Latest article

Most read