ಪುದುಚೇರಿ : ಕೇಂದ್ರಾಡಳಿತ ಪ್ರದೇಶವಾದ ಚಿಕ್ಕರಾಜ್ಯ ಪುದುಚೇರಿಗೆ ಐದನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಖಿಲ ಭಾರತ ಎನ್ಆರ್ ಕಾಂಗ್ರೆಸ್ (ಎಐಎನ್ಆರ್ಸಿ) ನಾಯಕ ಎನ್.ರಂಗಸಾಮಿ ಅವರು ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ.
ಎನ್ಡಿಎ ಮೈತ್ರಿಕೂಟದ ಪಕ್ಷವಾದ ಎಐಎನ್ಆರ್ಸಿ ನಾಯಕ ಎನ್.ರಂಗಸಾಮಿ ಈಗಾಗಲೇ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದಾರೆ. ಸರಳತೆಯಿಂದಲೇ ಗಮನ ಸೆಳೆದಿರುವ ರಂಗಸಾಮಿ ಈ ಬಾರಿಯೂ ಸಂಪೂರ್ಣ ಜನಬೆಂಬಲ ಪಡೆದಿದ್ದಾರೆ.
ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಎನ್.ರಂಗಸಾಮಿ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರಿಸಲು ನಿರ್ಧರಿಸಲಾಯಿತು.
30 ಸದಸ್ಯಬಲದ ಪುದುಚೇರಿಯಲ್ಲಿ ಎಐಎನ್ಆರ್ಸಿ 12 ಮತ್ತು ಮಿತ್ರಪಕ್ಷವಾದ ಬಿಜೆಪಿ 4 ಸ್ಥಾನಗಳನ್ನು ಗೆದ್ದಿದೆ. ಡಿಎಂಕೆ ಐದು ಸ್ಥಾನಗಳಲ್ಲಿ ಗೆದ್ದಿದ್ದರೆ, ಕಾಂಗ್ರೆಸ್ ಮತ್ತು ಎಐಡಿಎಂಕೆ ತಲಾ ಒಂದು ಸ್ಥಾನ ಗಳಿಸಿದೆ. ಭಾರಿ ಜನಬೆಂಬಲದೊಂದಿಗೆ ತಮಿಳುನಾಡಿನಲ್ಲಿ ಅಧಿಕಾರ ಹಿಡಿಯಲು ಸಿದ್ಧವಾಗಿರುವ ಹೊಸ ಪಕ್ಷ ಟಿವಿಕೆ ಪುದುಚೇರಿಯಲ್ಲಿಯೂ ಇಬ್ಬರು ಶಾಸಕರನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದೆ.

