ಚೆನ್ನೈ : ಅತಂತ್ರ ವಿಧಾನಸಭೆ ಸೃಷ್ಟಿಯಾಗಿರುವ ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಕಸರತ್ತು ಮುಂದುವರೆದಿರುವ ಬೆನ್ನಲ್ಲೇ ತಮಿಳಿಗ ವೆಟ್ರಿ ಕಳಗಂ (ಟಿವಿಕೆ)ಗೆ ಬೆಂಬಲ ಸೂಚಿಸುವ ವಿಚಾರದಲ್ಲಿ ಎಐಎಡಿಎಂಕೆ ಪಕ್ಷದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿ ಪಕ್ಷ ಎರಡು ಬಣಗಳಾಗಿ ಹೋಳಾಗುವ ಸಂಭವ ಎದುರಾಗಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದಿರುವ ವಿಜಯ್ ಅವರು ಸರ್ಕಾರ ರಚನೆಗೆ ಮುಂ ದಾಗಿದ್ದಾರೆ. ಸರ್ಕಾರ ರಚನೆಗೆ ಇನ್ನೂ 10 ಸ್ಥಾನಗಳ ಅಗತ್ಯವಿದೆ. ಕಾಂಗ್ರೆಸ್, ಎಡಪಕ್ಷಗಳ ಬೆಂಬಲವನ್ನು ವಿಜಯ್ ಕೋರಿದ್ದಾರೆ. ಈ ನಡುವೆ ಎಐಎಡಿಎಂಕೆ ಬಹುಪಾಲು ನೂತನ ಶಾಸಕರು ಟಿವಿಕೆಯೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಪಕ್ಷದ ಉನ್ನತ ನಾಯಕರನ್ನು ಆಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಈಗಾಗಲೇ ವಿಜಯ ಜೋಸೆಪ್ ಅವರು ಎಐಎಡಿಎಂಕೆಯೊಂದಿಗೆ ಮೈತ್ರಿಯನ್ನು ನಿರಾಕರಿಸಿದ್ದಾರೆ. ಈ ನಡುವೆ ಮತ್ತೊಂದು ಬಣ ಟಿವಿಕೆ ಜೊತೆ ಹೇಗಾದರೂ ಮಾಡಿ ಮೈತ್ರಿ ಸಂಬಂಧ ಕುದುರಿಸಿ ಎಂದು ತೀವ್ರ ಒತ್ತಡ ಹಾಕುತ್ತಿದ್ದು, ಇದು ಪಕ್ಷದೊಳಗೆ ಆಂತರಿಕ ಭಿನ್ನಾಭಿಪ್ರಾಯ ಉಂಟಾಗಲು ಕಾರಣವಾಗಿದೆ.
ಆದರೆ ಎಐಎಡಿಎಂಕೆ ಪಕ್ಷದೊಳಗೆ ಆಂತರಿಕ ಭಿನ್ನಾಭಿಪ್ರಾಯ ಇವೆ ಎಂಬ ವದಂತಿಯನ್ನು ಪಕ್ಷದ ಮುಖಂಡ ಕೋ. ವೈ. ಸತ್ಯನ್ ತಳ್ಳಿ ಹಾಕಿದ್ದಾರೆ. ಟಿವಿಕೆಯ ಜೊತೆ ಮೈತ್ರಿಯ ಕುರಿತು ಪಕ್ಷದ ಕೆಲ ಶಾಸಕರು ಉತ್ಸಾಹ ತೋರಿಸುತ್ತಿರುವುದು ಸತ್ಯ. ಆದರೆ ಮೈತ್ರಿ ಮಾಡಿಕೊಳ್ಳುವ ಕುರಿತಾದ ಯಾವುದೇ ಅಂತಿಮ ನಿರ್ಧಾರವನ್ನು ಎಐಎಡಿಎಂಕೆ ಹೈ ಕಮಾಂಡ್ ತೆಗೆದುಕೊಳ್ಳಲಿದೆ’ ಎಂದು ಹೇಳಿದ್ದಾರೆ.
ಎಐಎಡಿಎಂಕೆ ವಿಭಜನೆ ಇಲ್ಲ: ಯಾವುದೇ ಕಾರಣಕ್ಕೂ ಅಧಿಕಾರಕ್ಕಾಗಿ ಎಐಎಡಿಎಂಕೆ ವಿಭಜನೆಯಾಗುವ ಪ್ರಶ್ನೆಯೇ ಇಲ್ಲ. ಎಲ್ಲರೂ ಒಮ್ಮತದಲ್ಲಿದ್ದಾರೆ ಮತ್ತು ಹೈಕಮಾಂ ಡ್ ಬಹುಮತದ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇ ಳಿದ್ದಾರೆ.
ಎಐಎಡಿಎಂಕೆ ಬೆಂಬಲವನ್ನು ಟಿವಿಕೆ ಕೋರಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಬೆಂಬಲ ನೀಡುವಂತೆ ವಿಜಯ್ ಅವರು ಅಧಿಕೃತವಾಗಿ ಕೋರಿಲ್ಲ. ಆದರೆ ಮಾತುಕತೆಯ ಹಾದಿಗಳು ಮುಕ್ತವಾಗಿವೆ ಎಂದು ಹೇಳಿದ್ದಾರೆ. ಈಗ ಚೆಂಡು ವಿಜಯ್ ಅವರ ಅಂಗಳದಲ್ಲಿದೆ. ಅವರು ತಮ್ಮ ಅವಧಿಯನ್ನು ಪೂರೈಸಲು ಬಯಸುತ್ತಾರೆಯೇ ಅಥವಾ 1.5 ಕೋಟಿ ಯುವಕರ ಕನಸುಗಳನ್ನು ನನಸಾಗಿಸಲು ಹೆಚ್ಚಿನ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆಯೇ ಎಂ ಬ ಬಗ್ಗೆ ಪ್ರಜ್ಞಾಪೂರ್ವಕ ನಿರ್ಧಾ ರ ತೆಗೆದುಕೊಳ್ಳಬೇಕಾಗಿದೆ’ ಎಂದಿದ್ದಾರೆ.

