ಭಾರತವನ್ನು ‘ಕೊಳೆತ ನರಕ’ ಎಂದ ಅಮೆರಿಕ ಅಧ್ಯಕ್ಷ: ಭಾರತ ಸರ್ಕಾರದ ಪ್ರತಿಕ್ರಿಯೆ ಏನು ಗೊತ್ತೆ?

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ‘ಹೆಲ್‌ಹೋಲ್’ ಎಂದು ಕರೆದು ಮತ್ತೊಮ್ಮೆ ವಿವಾದಕ್ಕೆ ತುತ್ತಾಗಿದ್ದಾರೆ. ಟ್ರಂಪ್ ಜನಾಂಗೀಯ ನಿಂದನೆಯ ಈ ಮಾತುಗಳಿಗೆ ಭಾರತೀಯರು ಆಕ್ರೋಶಗೊಂಡಿದ್ದು, ಇದೇ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತ್ ಪ್ರಧಾನಿ ಚುನಾವಣಾ ಪ್ರಚಾರ ಮಾಡಿದ್ದನ್ನು ನೆನಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರುತ್ತಿದ್ದಾರೆ

‘ಹೆಲ್‌ಹೋಲ್’ ಎಂದರೇನು?
ಈ ಇಂಗ್ಲೀಷ್ ಶಬ್ದವು ”ನರಕದಂತಹ ಕೊಳೆತ ಸ್ಥಳ’ ಎಂಬ ಅರ್ಥವನ್ನು ನೀಡುತ್ತದೆ. ಬಹಳ ಕೊಳಕು, ಅಸಹ್ಯಕರ ಮತ್ತು ನರಕದಂತಿರುವ ಜಾಗವನ್ನು ವಿವರಿಸಲು ಬಳಸುವ ಅಪಮಾನದ ಶಬ್ದವಿದು. ಸಾಮಾನ್ಯವಾಗಿ ಬಡತನ, ಕೊಳಕು ಮತ್ತು ಜೀವನ ನಡೆಸಲು ಅಸಾಧ್ಯವಾದ ಪರಿಸ್ಥಿತಿಯಿರುವ ದೇಶ ಅಥವಾ ಪ್ರದೇಶಗಳನ್ನು ಕುರಿತು ಈ ಶಬ್ದವನ್ನು ಬಳಸಲಾಗುತ್ತದೆ.

ಟ್ರಂಪ್ ತಮ್ಮ ಒಡೆತನದ ಟ್ರೂತ್ ಸೋಷಿಯಲ್ ಖಾತೆಯಲ್ಲಿ ಕನ್ಸರ್ವೇಟಿವ್ ರೇಡಿಯೋ ಹೋಸ್ಟ್ ಮೈಕಲ್ ಸ್ಯಾವೇಜ್ ಅವರ ಪಾಡ್‌ಕಾಸ್ಟ್ ಭಾಗವನ್ನು ರಿಪೋಸ್ಟ್ ಮಾಡಿದ್ದಾರೆ. “ಇಲ್ಲಿ ಹುಟ್ಟಿದ ಮಗುವು ತಕ್ಷಣ ಅಮೆರಿಕನ್ ಪೌರತ್ವ ಪಡೆಯುತ್ತದೆ. ನಂತರ ಅವರು ಚೀನಾ, ಭಾರತ ಅಥವಾ ಇನ್ನಿತರ ಹೆಲ್‌ಹೋಲ್ ದೇಶಗಳಿಂದ ತಮ್ಮ ಇಡೀ ಕುಟುಂಬವನ್ನು ಕರೆಸಿಕೊಳ್ಳುತ್ತಾರೆ.” ಎಂದು ಆ ಪೋಸ್ಟ್ ನಲ್ಲಿ ಬರೆಯಲಾಗಿದೆ.

ಟ್ರಂಪ್ ಈ ಪೋಸ್ಟ್‌ಗೆ ತಮ್ಮದೇ ಯಾವುದೇ ಕಾಮೆಂಟ್ ಸೇರಿಸದೆ ಹಂಚಿಕೊಂಡಿದ್ದಾರೆ. ಇದು ಬರ್ತ್ ರೈಟ್ ಸಿಟಿಜನ್‌ಷಿಪ್ ವಿರುದ್ಧದ ಅವರ ಹಳೆಯ ನಿಲುವಿನ ಭಾಗವಾಗಿದೆ. ಭಾರತೀಯರು ಮತ್ತು ಚೀನಿಯರು ಟೆಕ್ ಉದ್ಯೋಗಗಳಲ್ಲಿ ‘ಲ್ಯಾಪ್‌ಟಾಪ್ ಗ್ಯಾಂಗ್‌ಸ್ಟರ್‌ಗಳಂತೆ’ ವರ್ತಿಸುತ್ತಿದ್ದಾರೆ ಎಂಬ ಹಲವು ಅಮೆರಿಕನ್ನರು ಆರೋಪಿಸುತ್ತಾರೆ.

ಕೀಳು ಅಭಿರುಚಿಯ ಹೇಳಿಕೆ
ಭಾರತದ ವಿದೇಶಾಂಗ ಸಚಿವಾಲಯ ಈ ಹೇಳಿಕೆಯನ್ನು “ಅಸಂಬದ್ಧ, ಅನುಚಿತ ಮತ್ತು ಕೀಳು ಅಭಿರುಚಿಯ ಹೇಳಿಕೆ” ಎಂದು ಖಂಡಿಸಿದೆ. “ಇದು ಭಾರತ-ಅಮೆರಿಕ ಸಂಬಂಧಗಳನ್ನು ಪ್ರತಿಬಿಂಬಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.

ಟ್ರಂಪ್ ಹೇಳಿಕೆ ವಿರುದ್ಧ ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರು ಮತ್ತು ಭಾರತದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. “ಭಾರತೀಯರ ಬೆಂಬಲಿಗನಾಗಿದ್ದೆ ಎಂದು ಹೇಳುತ್ತಿದ್ದ ಟ್ರಂಪ್ ಈಗ ಇಂತಹ ಮಾತುಗಳನ್ನಾಡುತ್ತಿದ್ದಾರೆ” ಎಂಬ ಆಕ್ಷೇಪಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಇದು ಟ್ರಂಪ್ ಅವರ ‘ಅಮೆರಿಕಾ ಫಸ್ಟ್’ ನೀತಿಯ ಭಾಗವೆಂದು ಅವರ ಬೆಂಬಲಿಗರು ವಾದಿಸುತ್ತಿದ್ದರೆ, ವಿರೋಧಿಗಳು ಇದನ್ನು ರೇಸಿಸಂ ಎಂದು ಬಣ್ಣಿಸುತ್ತಿದ್ದಾರೆ. ಭಾರತ-ಅಮೆರಿಕ ರಾಜತಾಂತ್ರಿಕ ಸಂಬಂಧಗಳ ಮೇಲೆ ಇದರ ಪರಿಣಾಮ ಏನಾಗುತ್ತದೆ ಎಂಬುದು ಈಗ ಕುತೂಹಲದ ವಿಷಯವಾಗಿದೆ.

More articles

Latest article

Most read