ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ನಾವು ಗೆದ್ದಿದ್ದೇವೆ ಎನ್ನುತ್ತಿದೆ ಇರಾನ್: ಅದು ನಿಜವೇ?

ಇಸ್ಲಾಮಾಬಾದ್/ತೆಹ್ರಾನ್, ಏಪ್ರಿಲ್ 8,: ಒಂದೇ ದಿನದ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಒಂದೇ ರಾತ್ರಿಯಲ್ಲಿ ಒಂದಿಡೀ ನಾಗರಿಕತೆಯನ್ನೇ ನಾಶ ಮಾಡುತ್ತೇನೆ ಎಂದು ಅಬ್ಬರಿಸಿದ್ದರು. ಈಗ ಅದೇ ಡೊನಾಲ್ಡ್ ಟ್ರಂಪ್ ಶಾಂತಿಮಂತ್ರ ಜಪಿಸುತ್ತಿದ್ದಾರೆ. ಎರಡು ವಾರಗಳ ದ್ವಿಪಕ್ಷೀಯ ಕದನ ವಿರಾಮ ಘೋಷಣೆಯಾಗಿದೆ. ಇರಾನ್ ನಾವೇ ಗೆದ್ದಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ಕದನ ವಿರಾಮವನ್ನು ಘೋಷಿಸುವ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಇರಾನ್ ಪ್ರಸ್ತಾಪಗಳನ್ನು ತಾತ್ವಿಕವಾಗಿ ಚರ್ಚೆಗೆ ಅಂಗೀಕರಿಸಿರುವುದು ಈ ಸಂಘರ್ಷದಲ್ಲಿ ಇರಾನ್ ಕೈ ಮೇಲಾಗಿರುವುದರ ಸಂಕೇತವಾಗಿದೆ.

ಅಮೆರಿಕ-ಇರಾನ್ ನಡುವಿನ ಎರಡು ವಾರಗಳ ಕದನ ವಿರಾಮದ ನಂತರ ಇರಾನಿನ10 ಅಂಶಗಳ ಶಾಂತಿ ಪ್ರಸ್ತಾಪದ ಮೇಲೆಯೇ ಶುಕ್ರವಾರ (ಏಪ್ರಿಲ್ 10) ಇಸ್ಲಾಮಾಬಾದ್‌ನಲ್ಲಿ ಮಾತುಕತೆಗಳು ಆರಂಭವಾಗುತ್ತಿವೆ ಎಂದು ಇರಾನ್ ಘೋಷಿಸಿದೆ. ಇದು ಇರಾನ್‌ಗೆ ಒಂದು ರೀತಿಯಲ್ಲಿ ನೈತಿಕ, ತಾತ್ವಿಕ ಜಯ. ಯಾಕೆಂದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ನ ಪ್ರಸ್ತಾಪವನ್ನು “ಕಾರ್ಯಸಾಧ್ಯವಾದ ಪ್ರಸ್ತಾಪ” (workable basis) ಎಂದು ಅಂಗೀಕರಿಸಿದ್ದಾರೆ.

ಅಲ್ ಜಜೀರಾ ವರದಿಯ ಪ್ರಕಾರ, ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಇರಾನ್ನ ರಾಷ್ಟ್ರೀಯ ಸುರಕ್ಷತಾ ಮಂಡಳಿಯ ಪರವಾಗಿ ಹೇಳಿಕೆ ನೀಡಿ, “ಅಮೆರಿಕ ಇರಾನ್ನ 10 ಅಂಶಗಳ ಪ್ರಸ್ತಾಪದ ಸಾಮಾನ್ಯ ಚೌಕಟ್ಟನ್ನು ಮಾತುಕತೆಗೆ ಮೂಲವಾಗಿ ಒಪ್ಪಿಕೊಂಡಿದೆ” ಎಂದು ತಿಳಿಸಿದ್ದಾರೆ.

ಇರಾನ್ ಮುಂದಿಟ್ಟಿರುವ 10 ಅಂಶಗಳಲ್ಲಿ ಪ್ರಮುಖವಾಗಿ ಹಾರ್ಮುಜ್ ಕಾಲುವೆಯ ಮೇಲೆ ಇರಾನ್ನ ನಿಯಂತ್ರಣ, ಅಮೆರಿಕದ ಎಲ್ಲಾ ಸೈನ್ಯ ಬಲಗಳನ್ನು ಮಧ್ಯಪ್ರಾಚ್ಯದಿಂದ ಹಿಂತೆಗೆದುಕೊಳ್ಳುವುದು, ಇರಾನ್ನ ಮಿತ್ರ ಸಂಘಟನೆಗಳ ಮೇಲಿನ ದಾಳಿಗಳನ್ನು ನಿಲ್ಲಿಸುವುದು, ಯುದ್ಧದ ನಷ್ಟಪರಿಹಾರ, ಎಲ್ಲಾ ನಿರ್ಬಂಧಗಳ ತೆರವು, ಹೊರಗೆ ಫ್ರೀಜ್ ಆಗಿರುವ ಇರಾನ್ನ ಆಸ್ತಿಗಳ ಬಿಡುಗಡೆ ಮತ್ತು ಅಂತಿಮ ಒಪ್ಪಂದವನ್ನು ಯುಎನ್ ಸುರಕ್ಷತಾ ಮಂಡಳಿಯ ಬೈಂಡಿಂಗ್ ರೆಸಲ್ಯೂಷನ್ ಮೂಲಕ ಅನುಮೋದಿಸುವುದು ಸೇರಿವೆ. ಇದೆಲ್ಲದರ ಕುರಿತು ಚರ್ಚೆಗೆ ಅಮೆರಿಕ ತಾತ್ವಿಕವಾಗಿ ಒಪ್ಪಿರುವುದೇ ಬಹುದೊಡ್ಡ ಬೆಳವಣಿಗೆಯಾಗಿದೆ.

ಟ್ರಂಪ್ ತಮ್ಮ ಟ್ರುಥ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿ, “ಇರಾನ್ನ 10 ಅಂಶಗಳ ಪ್ರಸ್ತಾಪವನ್ನು ನಾವು ಸ್ವೀಕರಿಸಿದ್ದೇವೆ. ಇದು ಮಾತುಕತೆಗೆ ಕಾರ್ಯಸಾಧ್ಯವಾದ ಚರ್ಚಾ ವಿಷಯಗಳು. ನಾವು ಬಹುತೇಕ ಎಲ್ಲಾ ವಿವಾದಾಸ್ಪದ ಅಂಶಗಳ ಬಗ್ಗೆ ಚರ್ಚಿಸಲು ಒಪ್ಪಿಕೊಂಡಿದ್ದೇವೆ” ಎಂದು ತಿಳಿಸಿದ್ದಾರೆ. ಇದು ಇರಾನ್‌ಗೆ ದೊಡ್ಡ ರಾಜಕೀಯ ಜಯವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ. ಏಕೆಂದರೆ ಯುದ್ಧದ ಆರಂಭದಲ್ಲಿ ಅಮೆರಿಕ ತನ್ನದೇ 15 ಅಂಶಗಳ ಪ್ರಸ್ತಾಪ ನೀಡಿತ್ತು. ಇದನ್ನುಇರಾನ್ ಸಾರಾಸಗಟಾಗಿ ತಿರಸ್ಕರಿಸಿತ್ತು. ಈಗ ಅಮೆರಿಕವೇ ಇರಾನ್ನ ಪ್ರಸ್ತಾಪದ ಮೇಲೆ ಮಾತುಕತೆಗೆ ಒಪ್ಪಿಕೊಂಡಿದೆ.

ಇರಾನ್ನ ರಾಷ್ಟ್ರೀಯ ಸುರಕ್ಷತಾ ಮಂಡಳಿ ಇಂದು ನೀಡಿದ ಹೇಳಿಕೆಯಲ್ಲಿ ಅಮೆರಿಕದ ಮೇಲೆ ಪೂರ್ಣ ಅಪನಂಬಿಕೆ ಇದ್ದರೂ ಮಾತುಕತೆಗೆ ಒಪ್ಪಿಕೊಂಡಿದ್ದೇವೆ. ಯಾವುದೇ ಸಣ್ಣ ತಪ್ಪು ಮಾಡಿದರೂ ಪೂರ್ಣ ಬಲದಿಂದ ಪ್ರತಿಕ್ರಿಯಿಸುತ್ತೇವೆ ಎಂದು ಎಚ್ಚರಿಸಲಾಗಿದೆ. ಇರಾನ್ ಹಾರ್ಮುಜ್ ಕಾಲುವೆಯನ್ನು ತೆರೆಯುವುದಕ್ಕೆ ಒಪ್ಪಿಕೊಂಡಿದೆ ಎಂದು ಅರಾಗ್ಚಿ ಹೇಳಿದ್ದಾರೆ.

ಕದನವಿರಾಮದ ಘೋಷಣೆ ಹಿನ್ನೆಲೆಯಲ್ಲಿ ಇರಾನ್ ರಾಜತಾಂತ್ರಿಕವಾಗಿ ಗಣನೀಯ ಲಾಭ ಸಾಧಿಸಿದೆ ಎಂದು ಹೇಳಬಹುದು. ಒಂದು ರೀತಿಯಲ್ಲಿ ಅಮೆರಿಕವನ್ನು ಬಗ್ಗಿಸುವಲ್ಲಿ ಅದು ಯಶಸ್ವಿಯಾಗಿದೆ. ಫೆಬ್ರವರಿ 28ರಂದು ಆರಂಭವಾದ ಸಂಘರ್ಷದಲ್ಲಿ ಅಮೆರಿಕ-ಇಸ್ರೇಲ್ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಹಾರ್ಮುಜ್ ಕಾಲುವೆಯನ್ನು ಭಾಗಶಃ ನಿರ್ಬಂಧಿಸಿ ಜಾಗತಿಕ ತೈಲ ಬೆಲೆಗಳನ್ನು ಏರಿಸಿ ಆರ್ಥಿಕ ಒತ್ತಡ ಹೇರಿತು. ಈಗ ಅಮೆರಿಕವೇ ಇರಾನ್ನ ಪ್ರಸ್ತಾಪದ ಮೇಲೆ ಮಾತುಕತೆಗೆ ಬಂದಿರುವುದು ಇರಾನ್ನ ಸ್ಥಾನವನ್ನು ಬಲಪಡಿಸಿದೆ. ನಿರ್ಬಂಧಗಳ ತೆರವು, ನಷ್ಟಪರಿಹಾರ, ಸೈನ್ಯ ಹಿಂತೆಗೆತ – ಇವು ಇರಾನ್‌ಗೆ ದೀರ್ಘಕಾಲೀನ ರಾಜಕೀಯ ಮತ್ತು ಆರ್ಥಿಕ ಲಾಭ ನೀಡುವ ಸಾಧ್ಯತೆ ಇದೆ.

More articles

Latest article

Most read