ಟ್ರಂಪ್ ಆಡಳಿತದ ವಿರುದ್ಧ ಅಮೆರಿಕದಾದ್ಯಂತ ನಗರಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿವೆ. ಇದು ನೋ ಕಿಂಗ್ಸ್ ರ್ಯಾಲಿಗಳ ಮೂರನೇ ಬಾರಿಗೆ ನಡೆದಿವೆ ಎನ್ನಲಾಗಿದೆ.
ಅಂದಾಜು 8 ಮಿಲಿಯನ್‌ಗಿಂತಲೂ ಹೆಚ್ಚು ಜನರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ ಪ್ರತಿಭಟನಾ ನೀತಿಗಳು ಮತ್ತು ಇರಾನ್ ಯುದ್ಧ, ವಲಸೆ ಜಾರಿ ಮತ್ತು ಹೆಚ್ಚುತ್ತಿರುವ ಜೀವನ ವೆಚ್ಚದಂತಹ ವಿಷಯಗಳಿ ವಿರುದ್ಧ ಜನರು ಪ್ರತಿಭಟಿಸಿದ್ದಾರೆ.
“ಟ್ರಂಪ್ ನಮ್ಮನ್ನು ನಿರಂಕುಶಾಧಿಕಾರಿಯಾಗಿ ಆಳಲು ಬಯಸುತ್ತಾರೆ. ಆದರೆ ಇದು ಅಮೆರಿಕ, ಮತ್ತು ಅಧಿಕಾರ ಜನರಿಗೆ ಸೇರಿದೆ – ರಾಜರು ಅಥವಾ ಅವರ ಬಿಲಿಯನೇರ್ ಆಪ್ತಮಿತ್ರರಾಗಲು ಅಲ್ಲ” ಎಂದು ಸಂಘಟಕರು ಹೇಳಿದರು.
ಅಮೆರಿಕದ 50 ರಾಜ್ಯಗಳಲ್ಲೂ ಪ್ರತಿಭಟನಾ ರ‍್ಯಾಲಿ ನಡೆದಿವೆ. ಟ್ರಂಪ್ ವಿರುದ್ಧ ನೋ ಕಿಂಗ್ಸ್ ಹೆಸರಲ್ಲಿ ಒಟ್ಟು 3,100 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಹಾಗೆಯೇ ಈ ಮೊದಲು ಜೂನ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ 50 ಲಕ್ಷ ಜನ, ಅಕ್ಟೋಬರ್‌ನಲ್ಲಿ ನಡೆದ ರ‍್ಯಾಲಿಯಲ್ಲಿ 70 ಲಕ್ಷ ಜನರು ಭಾಗಿಯಾಗಿದ್ದರು ಎಂದು ಆಯೋಜಕರು ತಿಳಿಸಿದ್ದಾರೆ.
ಅಮೆರಿಕದ ಬಹುತೇಕ ಎಲ್ಲಾ ಪ್ರಮುಖ ನಗರಗಳಲ್ಲಿ ಪ್ರದರ್ಶನಗಳು ನಡೆದವು. ದೇಶಾದ್ಯಂತ ಸಣ್ಣ ನಗರಗಳು ಮತ್ತು ಪಟ್ಟಣಗಳಲ್ಲಿ – ಮತ್ತು ಪ್ಯಾರಿಸ್ ಮತ್ತು ಲಂಡನ್‌ನ ನಾಗರೀಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಲ್ಯಾಟಿನ್ ಅಮೆರಿಕ, ಆಸ್ಟ್ರೇಲಿಯಾ, ಆರ್ಮ್‌ಸ್ಟರ್‌ಡಮ್, ಮ್ಯಾಡ್ರಿಡ್, ರೋಮ್ ಸೇರಿದಂತೆ ಯುರೋಪಿನ ಹಲವು ನಗರಗಳಲ್ಲಿ ಟ್ರಂಪ್ ವಿರುದ್ಧ ಪ್ರತಿಭಟನೆಗಳ ನಡೆದಿವೆ. ಈ ಪ್ರತಿಭಟನೆಗಳಿಗೆ ಭಾರೀ ಪೊಲೀಸ್ ಭದ್ರತೆ ಕೂಡ ನೀಡಲಾಗಿತ್ತು. ಸೇರಿದಂತೆ 12ಕ್ಕೂ ಹೆಚ್ಚು ದೇಶಗಳಲ್ಲಿ

