ಗಾಜಾ ಪಟ್ಟಿಯಲ್ಲಿ ವ್ಯಾಪಕ ಹಿಂಸಾಚಾರ: ಅಂತಾರಾಷ್ಟ್ರೀಯ ನೆರವನ್ನೂ ನಿರ್ಬಂಧಿಸಿದ ಇಸ್ರೇಲ್

ಜೆರುಸಲೆಂ ಮಾರ್ಚ್ 24: ಈದ್‌-ಉಲ್-ಪಿತರ್ ಹಬ್ಬವನ್ನು ಜಗತ್ತಿನಾದ್ಯಂತ ಮುಸ್ಲಿಮರು ಆಚರಿಸಿದರೆ, ಪ್ಯಾಲೆಸ್ಟೇನ್‌ ನಲ್ಲಿ ಮಾತ್ರ ಭೀತಿ ಮತ್ತು ಶೋಕದ ವಾತಾವರಣ ಮುಂದುವರೆದಿದೆ. ಇಸ್ರೇಲ್ ಆಕ್ರಮಿತ ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ಟೀನಿಯನ್ ನಿವಾಸಿಗಳ ಮೇಲೆ ಹಿಂಸಾಚಾರ ಮುಂದುವರೆದಿದ್ದು, ಇಸ್ರೇಲಿ ಆಕ್ರಮಣಕಾರರು ಮನೆಗಳು, ವಾಹನಗಳನ್ನು ಸುಟ್ಟುಹಾಕಿದ್ದಾರೆ.

ಈದ್ ಸಮಯದಲ್ಲೇ ಗಾಜಾಪಟ್ಟಿಯಲ್ಲಿ ಇಸ್ರೇಲಿ ವಸಾಹತುಗಾರರು ಒಂದರ ಹಿಂದೆ ಒಂದು ದಾಳಿ ನಡೆಸಿದ್ದಾರೆ. ನಬ್ಲುಸ್, ಜೆನಿನ್, ರಾಮಲ್ಲಾ ಪ್ರದೇಶಗಳಲ್ಲಿ ಜಲುದ್, ಕಾರ್ಯೂತ್, ದೈರ್ ಅಲ್ ಹತಾಬ್, ಅಲ್ ಫಂದುಕ್ಮಿಯಾ, ಸಿಲತ್ ಅಲ್ ಧಹರ್ ಸೇರಿದಂತೆ ಹಲವು ಗ್ರಾಮಗಳಲ್ಲಿ ವಸಾಹತುಗಾರರು ಮನೆಗಳಿಗೆ ಬೆಂಕಿ ಹಚ್ಚಿದರು, ವಾಹನಗಳನ್ನು ಸುಟ್ಟಿದ್ದಾರೆ ಮತ್ತು ನಿವಾಸಿಗಳ ಮೇಲೆ ಹಲ್ಲೆ ಮಾಡಿದ್ದಾರೆ.

ಈ ದಾಳಿಗಳು ಇಸ್ರೇಲಿ ನಾಗರಿಕ ಯೆಹುದಾ ಶೆರ್ಮನ್ (೧೮) ಮರಣದ ನಂತರ ತೀವ್ರಗೊಂಡಿವೆ. ಇಸ್ರೇಲ್‌ ಪ್ರಕಾರ, ಪ್ಯಾಲೆಸ್ಟೀನಿಯನ್ ವಾಹನವೊಂದರ ದಾಳಿಯಿಂದ ಶೆರ್ಮನ್ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಆದರೆ ಪ್ಯಾಲೆಸ್ಟೀನ್ನರು ಇದನ್ನು ಆಕಸ್ಮಿಕ ಅಪಘಾತ ಎಂದು ಪ್ರತಿಪಾದಿಸುತ್ತಿದ್ದಾರೆ.

ದಾಳಿಗಳ ವಿವರಗಳು:
• ಜಲುದ್ ಮತ್ತು ಕಾರ್ಯೂತ್ ಗ್ರಾಮಗಳಲ್ಲಿ: ಹತ್ತಾರು ಮನೆಗಳು, ವಾಹನಗಳು ಸುಟ್ಟುಹಾಕಲಾಗಿದೆ. ಗ್ರಾಮ ಪಂಚಾಯತಿ ಕಚೇರಿ ಮತ್ತು ಮಸೀದಿಗೆ ಬೆಂಕಿ ಹಚ್ಚುವ ಪ್ರಯತ್ನ ನಡೆಸಲಾಗಿದೆ.
• ದೈರ್ ಅಲ್ ಹತಾಬ್, ದೈರ್ ಶರಾಫ್, ಬುರ್ಕಾ ಸೇರಿದಂತೆ ಇತರ ಗ್ರಾಮಗಳಲ್ಲಿ: ವಾಹನಗಳು, ಮನೆಗಳು ಹಾನಿಗೊಳಗಾದವು. ಕೆಲವು ನಿವಾಸಿಗಳಿಗೆ ಪೆಪ್ಪರ್ ಸ್ಪ್ರೇ ಮಾಡಿ ಹಲ್ಲೆ ನಡೆಸಲಾಗಿದೆ.
• ಕನಿಷ್ಠ ೯-೧೧ ಪ್ಯಾಲೆಸ್ಟೀನಿಯನ್ನರು ಗಾಯಗೊಂಡಿದ್ದಾರೆ. ಇಸ್ರೇಲಿ ಭದ್ರತಾ ಪಡೆಗಳು ಸ್ಥಳದಲ್ಲಿದ್ದರೂ ಪೂರ್ಣವಾಗಿ ಹಸ್ತಕ್ಷೇಪ ಮಾಡಲಿಲ್ಲ ಎಂದು ವರದಿಗಳಿವೆ.

ಈದ್ ಸಮಯದಲ್ಲಿ ಅಲ್ ಅಕ್ಸಾ ಮಸೀದಿ ಸಂಕೀರ್ಣವನ್ನು ಖಾಲಿ ಮಾಡಲಾಗಿತ್ತು. ಜೆರುಸಲೆಂನಲ್ಲಿ ಮುಸ್ಲಿಮರ ಪ್ರಾರ್ಥನೆಗೆ ತಡೆ ಹೇರಲಾಗಿತ್ತು. ಇರಾನ್ ವಿರುದ್ಧದ ಯುದ್ಧದ ನಡುವೆ ಈ ಹಿಂಸಾಚಾರ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಪ್ಯಾಲೆಸ್ಟೀನಿಯನ್ ಆರೋಗ್ಯ ಸಚಿವಾಲಯ ಮತ್ತು WAFA ಸುದ್ದಿ ಸಂಸ್ಥೆ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಇಸ್ರೇಲಿಗಳ ದಾಳಿಗಳಲ್ಲಿ ಕನಿಷ್ಠ ೧೪ ಪ್ಯಾಲೆಸ್ಟೀನಿಯನ್ನರು ಮೃತಪಟ್ಟಿದ್ದಾರೆ. ಇಸ್ರೇಲ್-ಅಮೆರಿಕಾ ಇರಾನ್ ಯುದ್ಧದ ನಂತರ ಈ ಸಂಖ್ಯೆ ಹೆಚ್ಚಾಗಿದೆ.

ಗಾಜಾಗೆ ನೆರವು ನಿರ್ಬಂಧಿಸಿದ ಇಸ್ರೇಲ್

ಇಸ್ರೇಲ್ ಅಮೆರಿಕಾ ಜೊತೆಗೆ ಇರಾನ್ ವಿರುದ್ಧ ಯುದ್ಧ ಆರಂಭಿಸಿದ ನಂತರ (ಫೆಬ್ರವರಿ ೨೮ರಿಂದ) ಗಾಜಾಗೆ ಪ್ರವೇಶಿಸುವ ಮಾನವೀಯ ನೆರವು ತೀವ್ರವಾಗಿ ಕುಸಿದಿದೆ. ಇದರಿಂದ ಗಾಜಾದಲ್ಲಿ ಆಹಾರ, ಔಷಧಿ ಮತ್ತು ಇತರ ಸಾಮಗ್ರಿಗಳ ಬೆಲೆಗಳು ಆಕಾಶಕ್ಕೇರಿವೆ. ರಫಾಹ್ ಗಡಿ ದ್ವಾರವು ಮಾರ್ಚ್ ೨೦ರಂದು ಮಾತ್ರ ಮರುತೆರೆಯಲಾಗಿದೆ.

ಗಾಜಾದ ಆಸ್ಪತ್ರೆಗಳಲ್ಲಿ ಔಷಧಿ, ವೈದ್ಯಕೀಯ ಸಾಮಗ್ರಿ ಮತ್ತು ಇಂಧನದ ಕೊರತೆ ಉಂಟಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಹಿಂದಿನ ತಿಂಗಳುಗಳಲ್ಲಿ ಕ್ಷಾಮದ ಸ್ಥಿತಿ ಸ್ವಲ್ಪ ಸುಧಾರಿಸಿದ್ದರೂ, ಈಗ ಮತ್ತೆ ಕ್ಷಾಮದ ಭೀತಿ ಹೆಚ್ಚಾಗಿದೆ. ಅಕ್ಟೋಬರ್ ಕದನವಿರಾಮದ ನಂತರವೂ ಗಾಜಾದ ಪುನರ್ನಿರ್ಮಾಣ ಕೆಲಸಗಳು ಸ್ಥಗಿತಗೊಂಡಿವೆ. ಇಸ್ರೇಲ್ ಹಲವು ಅಂತರರಾಷ್ಟ್ರೀಯ ನೆರವು ಸಂಸ್ಥೆಗಳ ಕಾರ್ಯಾಚರಣೆಯನ್ನು ನಿರ್ಬಂಧಿಸಿದ್ದು, ಇದು ಗಾಜಾದಲ್ಲಿ ಮಾನವೀಯ ಸಂಕಷ್ಟವನ್ನು ಇನ್ನಷ್ಟು ತೀವ್ರಗೊಳಿಸಿದೆ.

ಐರೋಪ್ಯ ದೇಶಗಳು ಮತ್ತು ಕೆನಡಾ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯ “ವಸಾಹತುಗಾರ ಭಯೋತ್ಪಾದನೆ”ಯನ್ನು ಖಂಡಿಸಿದೆ. ಇಸ್ರೇಲ್ ಒಳಗೆಯೂ ಕೆಲವು ವಿರೋಧ ಪಕ್ಷಗಳು ಮತ್ತು ಮಾಜಿ ಭದ್ರತಾ ಅಧಿಕಾರಿಗಳು ಈ “ಯಹೂದಿ ಹಿಂಸಾಚಾರ”ವನ್ನು ಖಂಡಿಸಿದ್ದಾರೆ.

More articles

Latest article

Most read