ಬೆಂಗಳೂರು : ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರಿದ 05 ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆ-2026ರ ಸಂಬಂಧ ವಾರ್ಡ್ ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು 09.03.2026 ರಂದು ಪ್ರಚುರಪಡಿಸಲಾಗಿದೆ. ಸದರಿ ಕರಡು ಮತದಾರರ ಪಟ್ಟಿಯ ಪ್ರತಿಯನ್ನು ಎಲ್ಲಾ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಮತ್ತು ವಾರ್ಡ್ ಕಛೇರಿಯಲ್ಲೂ ಮತದಾರರ ವೀಕ್ಷಣೆಗೆ ಲಭ್ಯವಿರುತ್ತದೆ.
ಅಲ್ಲದೆ, ದೂರು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯನ್ನು 30.03.2026 ರವರಗೂ ವಿಸ್ತರಿಸಿರುತ್ತದೆ ಹಾಗೂ ಅಂತಿಮ ಮತದಾರರ ಪಟ್ಟಿ ಪ್ರಕಟಣೆ ದಿನಾಂಕವನ್ನು ಸಹ ದಿನಾಂಕ: 06.04.2026 ರಿಂದ 18.04.2026ಕ್ಕೆ ಮುಂದೂಡಲಾಗಿರುತ್ತದೆ. ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವೆಬ್ಸೈಟ್ನಲ್ಲಿಯೂ ಸಹ ಲಭ್ಯವಿರುತ್ತದೆ. (https://gba.karnataka.gov.in/electoral2026)
ಮತದಾರರು ತಮ್ಮ ಮಾಹಿತಿಯನ್ನು ಮೇಲಿನ ಲಿಂಕ್ ಮೂಲಕ Search tool by name option / Search by EPIC option ಅಡಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ಮತದಾರರು ತಮ್ಮ ಸಾಮಾನ್ಯ ನಿವಾಸ ಇರುವ ವಾರ್ಡ್ ಗಳಲ್ಲಿಯೇ ಮತದಾರರಾಗಿ ನೋಂದಾಯಿಸಲ್ಪಟ್ಟಿರುವುದನ್ನು ಖಾತ್ರಿಪಡಿಸಿಕೊಳ್ಳುವುದು. ಒಂದು ವೇಳೆ ಬೇರೆ ವಾರ್ಡ್ಗಳಲ್ಲಿ ನಮೂದಾಗಿದ್ದರೆ, ಅಂತಹ ಪ್ರಕರಣಗಳ ಕುರಿತು ದೂರನ್ನು ಸಂಬಂಧಪಟ್ಟ ನಗರ ಪಾಲಿಕೆ / ಮತದಾರರ ನೋಂದಣಾಧಿಕಾರಿಗಳ ಕಛೇರಿ / ವಾರ್ಡ್ ಕಛೇರಿಗಳಲ್ಲಿ ಸಲ್ಲಿಸಬಹುದಾಗಿರುತ್ತದೆ.

