ಮಾ.25 ರಿಂದ ಕುಂ. ವೀರಭದ್ರಪ್ಪನವರ ‘ಅರಮನೆ’ ಮಹಾಕಾವ್ಯದ ದೃಶ್ಯರೂಪ ಪ್ರಸಾರ

ಕುಂ. ವೀರಭದ್ರಪ್ಪನವರ ‘ಅರಮನೆ’ ಮಹಾಕಾವ್ಯದ ದೃಶ್ಯರೂಪ ಪ್ರಸಾರ

ಬೆಂಗಳೂರು : ಗುಣಮಟ್ಟದ ಕಾರ್ಯಕ್ರಮಗಳು ಹಾಗೂ ಸದಭಿರುಚಿಯ ಧಾರಾವಾಹಿಗಳಿಗೆ ಹೆಸರಾಗಿರುವ ದೂರದರ್ಶನ ಚಂದನ ವಾಹಿನಿಯು, ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಕೃತಿಗಳನ್ನು ಕಿರುತೆರೆಯ ಮೇಲೆ ತರುವ ತನ್ನ ಸುದೀರ್ಘ ಪರಂಪರೆಯನ್ನು ಮುಂದುವರಿಸುತ್ತಿದೆ. ಈ ನಿಟ್ಟಿನಲ್ಲಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾದಂಬರಿ, ನಾಡೋಜ ಡಾ. ಕುಂ. ವೀರಭದ್ರಪ್ಪ ಅವರ ವಿಶಿಷ್ಟ ಕೃತಿ ಅರಮನೆ ಈಗ ಮೆಗಾ ಧಾರಾವಾಹಿಯಾಗಿ ಮೂಡಿಬರುತ್ತಿದೆ.

ಈ ಧಾರವಾಹಿಯು ಮಾರ್ಚ್ 25 ರಿಂದ, ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30 ಗಂಟೆಗೆ ದೂರದರ್ಶನದ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಸಾಂಸ್ಕೃತಿಕ ಹಿನ್ನೆಲೆ ಮತ್ತು ವಿಶೇಷತೆ: ದೂರದರ್ಶನ ಚಂದನವು ಮೊದಲಿನಿಂದಲೂ ಖ್ಯಾತ ಸಾಹಿತಿಗಳ ಕಥೆ-ಕಾದಂಬರಿಗಳನ್ನು ಆಧರಿಸಿದ ಧಾರಾವಾಹಿಗಳ ಮೂಲಕ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿದೆ. ಇದೀಗ ಅದೇ ಕಟಿಬದ್ಧತೆಯೊಂದಿಗೆ, ಆಧುನಿಕ ತಂತ್ರಜ್ಞಾನ ಮತ್ತು ರಂಗಭೂಮಿಯ ಸತ್ವವನ್ನು ಬೆರೆಸಿ ‘ಅರಮನೆ’ ಕಾದಂಬರಿಯನ್ನು ದೃಶ್ಯರೂಪಕ್ಕೆ ಇಳಿಸಲಾಗಿದೆ.

​ತಾಂತ್ರಿಕ ಮತ್ತು ಕಲಾತ್ಮಕ ತಂಡ: ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಭರವಸೆಯ ಯುವ ನಿರ್ದೇಶಕರಾದ ಮನ್ಸೋರೆ ಅವರು ಈ ಬೃಹತ್ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಹಿರಿಯ ನಟಿ, ಪದ್ಮಶ್ರೀ ಪುರಸ್ಕೃತ ಬಿ. ಜಯಶ್ರೀ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಸರಣಿಯ ವಿಶೇಷ ಆಕರ್ಷಣೆ.​

ತಾರಾಗಣ: ಬಿ. ಎಂ. ಗಿರಿರಾಜ್, ವೆಂಕಟೇಶ್ ಪ್ರಸಾದ್, ಚಂದನಾ, ಸಿತಾರ ನೀನಾಸಂ, ಬಿಂದು ರಕ್ಷಿದಿ, ವಿನಯ್ ಕೃಷ್ಣಸ್ವಾಮಿ, ಗುಂಡಣ್ಣ, ಮಂಜುನಾಥ ಜಂಬೆ ಮುಂತಾದ ಚಿತ್ರರಂಗ ಮತ್ತು ರಂಗಭೂಮಿಯ ಖ್ಯಾತ ಕಲಾವಿದರು ಪ್ರಮುಖ ಪಾತ್ರಗಳಲ್ಲಿದ್ದಾರೆ.​

ತಾಂತ್ರಿಕ ವರ್ಗ: ಶಿವು ಬಿ. ಕೆ. ಕುಮಾರ್ ಅವರ ಛಾಯಾಗ್ರಹಣ, ರೋಣದ ಬಕ್ಕೇಶ್ ಅವರ ಸಂಗೀತ ಸಂಯೋಜನೆ ಈ ಧಾರಾವಾಹಿಗಿದೆ.

ಗಾಯನ ಮತ್ತು ಸಾಹಿತ್ಯ: ತ್ರಿಲೋಕ್ ಅವರ ಸಾಹಿತ್ಯವಿರುವ ಶೀರ್ಷಿಕೆ ಗೀತೆಯನ್ನು ಖ್ಯಾತ ಗಾಯಕ ರವೀಂದ್ರ ಸೊರಗಾವಿ ಹಾಡಿದ್ದಾರೆ. ಪಿ. ಚಂದ್ರಿಕಾ ಅವರ ಚಿತ್ರಕಥೆ ಹಾಗೂ ಪ್ರವೀಣ್ ಕುಮಾರ್ ಜಿ. ಅವರ ಸಂಭಾಷಣೆ ಕೃತಿಯ ಹೂರಣವನ್ನು ಸಮರ್ಥವಾಗಿ ಕಟ್ಟಿಕೊಟ್ಟಿವೆ.

​ಉತ್ತಮ ಸಾಹಿತ್ಯ ಕೃತಿಗಳನ್ನು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಿಸುವ ಈ ಮಹತ್ವಾಕಾಂಕ್ಷೆಯ ಪ್ರಯತ್ನಕ್ಕೆ ಕನ್ನಡದ ಎಲ್ಲಾ ಕಲಾಭಿಮಾನಿಗಳು ಮತ್ತು ಪ್ರೇಕ್ಷಕರು ಪ್ರೀತಿಯಿಂದ ಬೆಂಬಲ ನೀಡಬೇಕೆಂದು ಚಂದನ ವಾಹಿನಿಯು ಪ್ರಕಟಣೆಯಲ್ಲಿ ತಿಳಿಸಿದೆ.

‘ಅರಮನೆ’ ಕುಂವೀಯವರ ಸೃಜನಶೀಲತೆಯ ಶಿಖರ : ಇದು ಕನ್ನಡದ ಸಂದರ್ಭದಲ್ಲಿ ಕಾದಂಬರಿ ಎನ್ನುವ ಸಾಹಿತ್ಯಪ್ರಕಾರದ ನಿರ್ವಚನ ಮತ್ತು ಸ್ವರೂಪವನ್ನೇ ಆಮೂಲಾಗ್ರವಾಗಿ ಬದಲಾಯಿಸುತ್ತದೆ. ಆಧುನಿಕವನ್ನು ಒಳಗೊಳ್ಳುತ್ತಲೇ ದೇಸೀ ಕಥನ ಪರಂಪರೆಯ ಆಯಾಮಗಳನ್ನು ಪಡೆದುಕೊಳ್ಳುತ್ತದೆ.

ಹತ್ತೊಂಬತ್ತನೆಯ ಶತಮಾನದ ಸಮುದಾಯವು ವಸಾಹತೀಕರಣವನ್ನು ಒಳಗೆ ಮಾಡಿಕೊಂಡ ಬಗೆಯನ್ನು ಬಹಳ ಭಿನ್ನವಾಗಿ ಚಿತ್ರಿಸಿರುವ ಈ ಕೃತಿಯಲ್ಲಿ ರಾಜಸತ್ತೆ, ಬ್ರಿಟಿಷ್ ಪ್ರಭುತ್ವ ಮತ್ತು ಸಾಂಬವಿಯಿಂದ ಪ್ರತಿನಿಧಿತವಾಗುವ ಜನಸತ್ತೆಯ ಮುಖಾಮುಖಿ ನಡೆಯುತ್ತದೆ. ಬಡವರ, ಶೋಷಿತರ ಮತ್ತು ಹೆಣ್ಣುಮಕ್ಕಳ ಆಶೋತ್ತರಗಳ ಪ್ರತಿಮಾರೂಪವಾದ ಸಾಂಬವಿಯು, ತನಗಿರುವ ಅಲೌಕಿಕವಾದ ಶಕ್ತಿಗಳ ವಿನಿಯೋಗದಿಂದಲೇ ಜನಕಲ್ಯಾಣದಲ್ಲಿ ನಿರತಳಾಗುತ್ತಾಳೆ.

ದೈವವು ಮಾನುಷದ ಜೊತೆಯಲ್ಲಿ ಪಡೆಯುವ ಸಂಗಾತವೇ ಅದಕ್ಕೆ ಜನಪರವಾದ ನೆಲೆಗಳನ್ನು ಒದಗಿಸುತ್ತದೆ. ಇಲ್ಲಿನ ಜೀವನವು ತನ್ನ ವಿವರಗಳಲ್ಲಿ ಅಂತೆಯೇ ಧೋರಣೆಗಳಲ್ಲಿ ಜನಸಾಮಾನ್ಯರ ಆಶಯಗಳಿಗೆ, ಜೀವನಪ್ರೀತಿಗೆ ಹಿಡಿದ ಕನ್ನಡಿಯಾಗಿದೆ. ಇನ್ನೊಂದು ಕಡೆ, ಬ್ರಿಟಿಷ್ ಅಧಿಕಾರಿಯಾದ ಥಾಮಸ್ ಮನ್ರೋ ರಾಜಕೀಯವಾದ ಹುನ್ನಾರಗಳನ್ನು ನಡೆಸುವುದರ ಸಂಗಡವೇ ಜನಪರವಾದ ಚಟುವಟಿಕೆಗಳಲ್ಲಿಯೂ ನಿರತನಾಗಿ ದಂತಕಥೆಯಾಗುತ್ತಾನೆ.

ನಮ್ಮ ಪೀಳಿಗೆಯ ಅತ್ಯಂತ ಪ್ರತಿಭಾವಂತ ಲೇಖಕರಲ್ಲಿ ಒಬ್ಬರಾದ ಕುಂವೀಯವರು ವಾಸ್ತವದ ಮತ್ತು ಸಂಕೇತವಾದದ ಪರಿಮಿತಿಗಳನ್ನು ಬಹಳ ಸುಲಭವಾಗಿ ಮೀರಿದ್ದಾರೆ. ಹೊಸದೊಂದು ನಿರೂಪಣ ವಿಧಾನವನ್ನೇ ರೂಪಿಸಿಕೊಂಡಿದ್ದಾರೆ. ಅವರಿಗೆ ಸಹಜವಾದ ವೈನೋದಿಕ ಶೈಲಿಯು ಅಪವ್ಯಯವಾಗದೆ ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಕೆಯಾಗಿದೆ.

ಚರಿತ್ರೆ, ಸಮಾಜ ಮತ್ತು ಜೀವನದ ಬಗ್ಗೆ ನಮಗಿರುವ ತಿಳಿವಳಿಕೆಗಳನ್ನು ತಿದ್ದುವ ಈ ಕೃತಿಯು, ಮನಸ್ಸಿಗೆ ಸಂತೋಷ, ಉಲ್ಲಾಸಗಳನ್ನು ನೀಡುತ್ತದೆ, ‘ಅರಮನೆ’ ಕನ್ನಡ ಜನಮಾನಸದಲ್ಲಿ ನೂರು ಕಾಲ ಉಳಿಯಲಿರುವ ಸಾರ್ಥಕ ಕೃತಿ.

-ಡಾ. ಎಚ್‌.ಎಸ್‌. ರಾಘವೇಂದ್ರ ರಾವ್‌

…. ಒ೦ದು ಕಾಲ ಘಟ್ಟದ ಗ್ರಾಮೀಣ ಭಾರತವೇ ಈ ಕೃತಿಯಲ್ಲಿ ಉಸಿರಾಡುತ್ತದೆ ಎಂದರೆ ಅದೇನು ಉತ್ಪ್ರೇಕ್ಷೆಯಲ್ಲ.

-ಡಾ.ಸಿ.ಎನ್. ರಾಮಚಂದ್ರನ್

More articles

Latest article

Most read