ನವದೆಹಲಿ : ಭಾರತದ ಬೆಳೆಯುತ್ತಿರುವ ಬಾಹ್ಯಾಕಾಶ ಸಾಮರ್ಥ್ಯವನ್ನು ಶ್ಲಾಘಿಸುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
‘ಸ್ಕೈರೂಟ್ ಏರೋಸ್ಪೇಸ್’ (Skyroot Aerospace) ಎಂಬ ಸ್ಟಾರ್ಟಪ್‌ನ ಯಶಸ್ಸಿನ ಹಿಂದೆ ಇರುವ “28 ವರ್ಷದ ಯುವಕರ” ಬಗ್ಗೆ ಮಾತನಾಡುತ್ತಿದ್ದೇನೆಯೇ ಹೊರತು, “56 ವರ್ಷದ ಯಾವುದೇ ‘ಯುವಕ’ನ ಬಗ್ಗೆ ಅಲ್ಲ ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಇತ್ತೀಚಿನ ಸಾಧನೆಗಳನ್ನು ಎತ್ತಿ ತೋರಿಸಿದ ಪ್ರಧಾನಿ, ದೇಶದ ಯುವ ಆವಿಷ್ಕಾರಕರನ್ನು ಪ್ರಶಂಸಿಸಿದರು. “ಕಳೆದ ವರ್ಷದ ಮುಂಗಾರು ಅಧಿವೇಶನಕ್ಕೂ ಸ್ವಲ್ಪ ಮೊದಲು, ಭಾರತೀಯ ಪ್ರಜೆಯೊಬ್ಬರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದರು ಮತ್ತು ಮೊನ್ನೆ ಅಷ್ಟೇ, ಭಾರತದ ಯುವ ಸ್ಟಾರ್ಟಪ್ ಒಂದು ದೊಡ್ಡ ಮೈಲಿಗಲ್ಲನ್ನು ಸಾಧಿಸಿದೆ. ಇಂತಹ ಖಾಸಗಿ ಉದ್ಯಮಗಳು ನಡೆದಿರುವ ದೇಶಗಳು ಜಗತ್ತಿನಲ್ಲಿ ಬಹಳ ಕಡಿಮೆ. ಭಾರತದ ಯುವಕರು ಬಾಹ್ಯಾಕಾಶದಲ್ಲಿ ಹೊಸ ಹಾರಾಟವನ್ನು ನಡೆಸಿದ್ದಾರೆ. ಇದು ಅತ್ಯಂತ ದೊಡ್ಡ ಯಶಸ್ಸು,” ಎಂದು ಮೋದಿ ಹೇಳಿದರು.
‘ಸ್ಕೈರೂಟ್ ಏರೋಸ್ಪೇಸ್’ ತಂಡದ ಕುರಿತು ಮಾತನಾಡುತ್ತಾ ಅವರು, “ಈ ‘ಸ್ಕೈರೂಟ್’ ಸ್ಟಾರ್ಟಪ್‌ನಲ್ಲಿ ಕೆಲಸ ಮಾಡುತ್ತಿರುವ ಯುವಕರು – ಅವರ ಇಡೀ ತಂಡದ ಸರಾಸರಿ ವಯಸ್ಸು ಕೇವಲ 28 ವರ್ಷ ಎಂದು ನನಗೆ ತಿಳಿಸಲಾಗಿದೆ. ಇಂತಹ ಯುವಕರು ಈ ಸಾಧನೆಯನ್ನು ಮಾಡಿದ್ದಾರೆ; ನಾನು 56 ವರ್ಷದ ಯಾವುದೇ ‘ಯುವಕ’ನ ಬಗ್ಗೆ ಮಾತನಾಡುತ್ತಿಲ್ಲ, ಬದಲಾಗಿ ಬಾಹ್ಯಾಕಾಶದಲ್ಲಿ ಭಾರತದ ಧ್ವಜವನ್ನು ನೆಟ್ಟಿರುವ, ಸರಾಸರಿ 28 ವರ್ಷ ವಯಸ್ಸಿನವರನ್ನು ಒಳಗೊಂಡ ದೇಶದ ಈ ಸ್ಟಾರ್ಟಪ್‌ಗಳ ಬಗ್ಗೆ ಮಾತನಾಡುತ್ತಿದ್ದೇನೆ,” ಎಂದು ಹೇಳಿದರು.
ಯುವಶಕ್ತಿಯನ್ನು ಕೊಂಡಾಡಿದ ಪ್ರಧಾನಿ ಮೋದಿ : ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ