ಹೆಂಗಸರೇ ಎಚ್ಚರ! ಅತ್ಯಾಚಾರಿಗಳು ನಿಮ್ಮ ಪಕ್ಕದಲ್ಲೇ ಇದ್ದಾರೆ!!

ಅಷ್ಟೆಲ್ಲಾ ಹುಷಾರಾಗಿರುವ ಹೆಣ್ಣುಮಕ್ಕಳು ಇಂಥಾ ಲಂಪಟರ ಜಾಲಕ್ಕೆ ಹೇಗೆ ಸಿಕ್ಕಿಬೀಳ್ತಾರೆ? ಉತ್ತರ… ಮೌಢ್ಯ!! ಸೃಷ್ಟಿ ಸಾಮರ್ಥ್ಯದ ಕಾರಣಕ್ಕೆ ತನಗಿಂತಲೂ ಶಕ್ತಿಶಾಲಿಯಾದ ಹೆಣ್ಣನ್ನು ಸದಾ ತನ್ನ ಹದ್ದುಬಸ್ತಿನಲ್ಲಿಡಲು ಗಂಡಸು ಧರ್ಮ, ದೇವರು, ಭಕ್ತಿಗಳನ್ನು ಬಳಸಿಕೊಳ್ಳುತ್ತಾ ಬಂದ. ಇವತ್ತಿಗೂ ಮನೆಯಲ್ಲಿ ದೇವರ ಪೂಜೆ, ವ್ರತಾಚರಣೆ, ಹಬ್ಬಗಳ ಹೊಣೆ ಮೊದಲಾದ ಧಾರ್ಮಿಕ ಕಾರ್ಯಗಳ ನಿರ್ವಹಣೆಯನ್ನು ಹೆಣ್ಣುಮಕ್ಕಳೇ ಹೊತ್ತುಕೊಂಡಿದ್ದಾರೆ. ನಂಬಿಕೆ ಮತ್ತು ಭಕ್ತಿಯಿಂದ ತಾವಿದನ್ನು ಪಾಲಿಸುತ್ತಿದ್ದೇವೆ ಎಂದು ಸ್ವತಃ ಹೆಣ್ಣುಮಕ್ಕಳೂ ನಂಬಿದ್ದಾರೆ. ಧಾರ್ಮಿಕ ಆಚರಣೆಗಳ ಬಗ್ಗೆ ಗಂಡಸರಿಗಿರುವ ತಾತ್ಸಾರ ನಮಗೇಕೆ ಬರಲಿಲ್ಲ? ಈ ಒಂದು ಪ್ರಶ್ನೆಯನ್ನು ಅವರು ಯಾವತ್ತೂ ಕೇಳಿಕೊಳ್ಳುವುದಿಲ್ಲಮಾಚಯ್ಯ ಎಂ ಹಿಪ್ಪರಿಗಿ.

ಮಹಾರಾಷ್ಟ್ರದಲ್ಲೊಬ್ಬ ಎಫ್‌ಸ್ಟೀನ್‌ ಪತ್ತೆಯಾಗಿದ್ದಾನೆ. ಮರ್ಚೆಂಟ್‌ ನೇವಿಯ ಮಾಜಿ ಆಫೀಸರ್ ಎಂಬ ಕಾರಣಕ್ಕೆ ತನ್ನನ್ನು ತಾನು ‘ಕ್ಯಾಪ್ಟನ್‌’ ಎಂದು ಕರೆದುಕೊಳ್ಳುತ್ತಿದ್ದ ಈತ ಜ್ಯೋತಿಷ್ಯ ಹೇಳುವ ನೆಪದಲ್ಲಿ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಈಗ ಪೊಲೀಸರಿಗೆ ಸಿಕ್ಕಿರುವ ಸಿಸಿಟಿವಿ ಸಾಕ್ಷಿಗಳ ಪ್ರಕಾರ 58 ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಪುರಾವೆ ಸಿಕ್ಕಿದೆಯಂತೆ. ತಮ್ಮ ಕಷ್ಟ ಪರಿಹರಿಸಿಕೊಳ್ಳಬೇಕೆಂದು ಇವನ ಬಳಿ ಬರುತ್ತಿದ್ದ ಹೆಂಗಸರಿಗೆ, ತಾನು ಹೇಳಿದಂತೆ ಕೇಳದಿದ್ದರೆ ನಿನ್ನ ಗಂಡ ಶಾಪಕ್ಕೆ ತುತ್ತಾಗಿ ಸತ್ತುಹೋಗ್ತಾನೆ ಅಂತ ಹೆದರಿಸಿ, ಅವರನ್ನು ಬಳಸಿಕೊಳ್ಳುತ್ತಿದ್ದ ಎನ್ನಲಾಗ್ತಿದೆ. ಯಥಾಪ್ರಕಾರ ಇವನಿಗೆ ದಿಲ್ಲಿಯಿಂದ ಮುಂಬೈವರೆಗೆ ದೊಡ್ಡದೊಡ್ಡ ಪೊಲಿಟಿಷಿಯನ್‌ ಕಾಂಟ್ಯಾಕ್ಟ್‌ ಇದೆಯಂತೆ. ಸಿನಿಮಾ ಸೆಲಬ್ರಿಟಿಗಳು, ರಾಜಕಾರಣಿಗಳು, ಬ್ಯುಸಿನೆಸ್‌ಮನ್‌ಗಳು ಇವನ ಬಳಿ ಶಾಸ್ತ್ರ ಕೇಳುವ ಗಿರಾಕಿಗಳಂತೆ!!

ಮೇಲ್ನೋಟಕ್ಕೆ ನಮ್ಮ ಹೆಣ್ಣುಮಕ್ಕಳು ತುಂಬಾ ಬುದ್ದಿವಂತರು. ಅವರನ್ನು ಯಾಮಾರಿಸೋದು ಅಷ್ಟು ಸುಲಭವಲ್ಲ. ಸದಾ ನೂರೆಂಟು ಕಟ್ಟಳೆಗಳ ನಡುವೆ ಬೆಳೆದು ಅಭ್ಯಾಸವಾಗಿರುವ ಅವರಿಗೆ ಪ್ರತಿಯೊಂದನ್ನು ಗುಮಾನಿಯಿಂದ ನೋಡುವುದು, ಅಳೆದುತೂಗಿ ನೋಡುವುದು ರೂಢಿಯಾಗಿರುತ್ತದೆ. ಯಾಕೆಂದರೆ, ಮೋಸಹೋಗಬಾರದೆನ್ನುವುದು ಅವರ ಮೇಲೆ ನಮ್ಮ ಸಮಾಜ ಹೇರಿರುವ ಪ್ರಜ್ಞಾಪೂರ್ವಕ ಹೊಣೆ. ‘ಹೆಂಗಸರ ಬುದ್ದಿ ಮೊಣಕಾಲ ಕೆಳಗೆ’ ಎಂಬಿತ್ಯಾದಿ ನಾಣ್ಣುಡಿ ರೂಪದ ಗಂಡಾಳ್ವಿಕೆಯ ಚುಚ್ಚುಮಾತುಗಳು ಅವರನ್ನು ಸದಾಕಾಲ ತಿವಿಯುತ್ತಲೇ ಇರುತ್ತವೆ. ಎಷ್ಟರಮಟ್ಟಿಗೆಂದರೆ ತಮ್ಮ ಸ್ವತಂತ್ರ ಆಲೋಚನೆಗಳನ್ನೂ ಅದುಮಿಟ್ಟುಕೊಳ್ಳುವಷ್ಟರ ಮಟ್ಟಿಗೆ. ಹೆಣ್ಣುಮಕ್ಕಳ ಪಾಲಿಗೆ ಇಂಥಾ ಇಕ್ಕಟ್ಟಿನ ಸಮಾಜ ನಮ್ಮದು. ಗಂಡಸು ಬೇಕಾದರೆ ಮೋಸ ಹೋಗಬಹುದು, ವಂಚನೆಗೆ ಈಡಾಗಬಹುದು. ಅವನಿಗೆ ಮತ್ತೊಂದು ಅವಕಾಶಗಳಿರುತ್ತವೆ. ಆದರೆ ಹೆಣ್ಣು ಒಮ್ಮೆ ಮೋಸಹೋದರೆ, ಅವಳ ವ್ಯಕ್ತಿತ್ವವೇ ನಾಶವಾದಂತೆ ಎಂಬ ಬೇಲಿಗಳನ್ನು ಹಾಕಿರೋದ್ರಿಂದ ಹೆಣ್ಣುಮಕ್ಕಳು ಕೂಡಾ ತುಂಬಾ ಹುಷಾರಾಗಿರುತ್ತಾರೆ. ಅಂಗಡಿ-ಮುಂಗಟ್ಟುಗಳ ವ್ಯಾಪಾರದಲ್ಲಿ ಅವರು ವಿಪರೀತ ಚೌಕಾಶಿ ಮಾಡುವುದಕ್ಕೆ, ಹಣ ಉಳಿತಾಯದ ಜೊತೆಗೆ ತಾವು ಮೋಸ ಹೋಗಬಾರದೆನ್ನುವ ಈ ನೈತಿಕ ಒತ್ತಡವೂ ಕಾರಣ ಎನ್ನಬಹುದು.

ನಾಸಿಕ್ ನ ಬಂಧಿತ ಆರೋಪಿ ಜ್ಯೋತಿಷಿ

ಅಷ್ಟೆಲ್ಲಾ ಹುಷಾರಾಗಿರುವ ಹೆಣ್ಣುಮಕ್ಕಳು ಇಂಥಾ ಲಂಪಟರ ಜಾಲಕ್ಕೆ ಹೇಗೆ ಸಿಕ್ಕಿಬೀಳ್ತಾರೆ? ಉತ್ತರ… ಮೌಢ್ಯ!! ಸೃಷ್ಟಿ ಸಾಮರ್ಥ್ಯದ ಕಾರಣಕ್ಕೆ ತನಗಿಂತಲೂ ಶಕ್ತಿಶಾಲಿಯಾದ ಹೆಣ್ಣನ್ನು ಸದಾ ತನ್ನ ಹದ್ದುಬಸ್ತಿನಲ್ಲಿಡಲು ಗಂಡಸು ಧರ್ಮ, ದೇವರು, ಭಕ್ತಿಗಳನ್ನು ಬಳಸಿಕೊಳ್ಳುತ್ತಾ ಬಂದ. ಇವತ್ತಿಗೂ ಮನೆಯಲ್ಲಿ ದೇವರ ಪೂಜೆ, ವ್ರತಾಚರಣೆ, ಹಬ್ಬಗಳ ಹೊಣೆ ಮೊದಲಾದ ಧಾರ್ಮಿಕ ಕಾರ್ಯಗಳ ನಿರ್ವಹಣೆಯನ್ನು ಹೆಣ್ಣುಮಕ್ಕಳೇ ಹೊತ್ತುಕೊಂಡಿದ್ದಾರೆ. ನಂಬಿಕೆ ಮತ್ತು ಭಕ್ತಿಯಿಂದ ತಾವಿದನ್ನು ಪಾಲಿಸುತ್ತಿದ್ದೇವೆ ಎಂದು ಸ್ವತಃ ಹೆಣ್ಣುಮಕ್ಕಳೂ ನಂಬಿದ್ದಾರೆ. ಧಾರ್ಮಿಕ ಆಚರಣೆಗಳ ಬಗ್ಗೆ ಗಂಡಸರಿಗಿರುವ ತಾತ್ಸಾರ ನಮಗೇಕೆ ಬರಲಿಲ್ಲ? ಈ ಒಂದು ಪ್ರಶ್ನೆಯನ್ನು ಅವರು ಯಾವತ್ತೂ ಕೇಳಿಕೊಳ್ಳುವುದಿಲ್ಲ.

ಯಾಕೆ ಈ ಪ್ರಶ್ನೆ ಮುಖ್ಯವಾಗುತ್ತದೆಂದರೆ, ಮನೆಗಳಲ್ಲಿ ದೇವರ ಬಗ್ಗೆ ವಿಪರೀತ ನೇಮ ನೇತ್ಯಾಗಳಿಂದ ದೇವರನ್ನು ಆರಾಧಿಸುವ, ಆಚರಣೆಗಳನ್ನು ಸಾಂಗಗೊಳಿಸುವ ಹೆಣ್ಣುಮಕ್ಕಳಿಗೆ ದೇವಸ್ಥಾನದ ಗರ್ಭಗುಡಿಗಳಲ್ಲಿ ಪೂಜೆ ಮಾಡುವ ಅವಕಾಶವಿಲ್ಲ! ಅಲ್ಲಿ ಪುರುಷ ಅರ್ಚಕರು ಅಥವಾ ಪೂಜಾರಿಗಳೇ ಪೂಜೆ ಮಾಡಬೇಕು. ಕಾರಣ ಕೇಳಿದರೆ, ಮುಟ್ಟು-ಮೈಲಿಗೆಯಂತಹ ತಥಾಕಥಿತ ಸಮರ್ಥನೆಗಳನ್ನು ಮುಂದಿಡಲಾಗುತ್ತದೆ.

ಆದರೆ ವಾಸ್ತವದಲ್ಲಿ ದೇವಸ್ಥಾನಗಳಲ್ಲಿ ಪೂಜೆ ಮಾಡುವುದೆನ್ನುವುದು ಕೇವಲ ಒಂದು ಧಾರ್ಮಿಕ ಆಚರಣೆ ಮಾತ್ರವಲ್ಲ, ಅದೊಂದು ಕಸುಬು, ಉದ್ಯೋಗ, ದುಡಿಮೆ! ಯಾರೆಷ್ಟೇ ನಿರಾಕರಿಸಿದರೂ ಇದು ವಾಸ್ತವ. ಹೆಣ್ಣನ್ನು ದುಡಿಮೆಯ ಸ್ವಾವಲಂಬನೆಯಿಂದ ವಂಚಿಸುತ್ತಾ, ಆಕೆಯನ್ನು ಪರಾವಂಬಿಯಾಗಿಸಿದ ಗಂಡಸರು, ತಮ್ಮ ಒಂದು ಉದ್ಯೋಗವನ್ನು ಅದೇಗೆ ತಾನೆ ಹೆಣ್ಣಿಗೆ ಬಿಟ್ಟುಕೊಡಲೊಪ್ಪುವರು?

ಆದರೂ ಮನೆಗಳಲ್ಲಿ ಮಾತ್ರ ಪೂಜೆಗಳ ಉಸ್ತುವಾರಿಯನ್ನು ಹೆಣ್ಣುಮಕ್ಕಳೇ ನಿಭಾಯಿಸಬೇಕು. ಧಾರ್ಮಿಕ ಹೊಣೆಗಾರಿಕೆ ಅವರದೆ. ಗರ್ಭಗುಡಿಗಳಲ್ಲಿ ಪೂಜೆ ಮಾಡುವ ಅವಕಾಶ ದಕ್ಕಿಸಿಕೊಂಡಿರುವ ಗಂಡಸರಿಗೆ ದೇವರ ಮೇಲೆ, ಆಚರಣೆಗಳ ಮೇಲೆ ಇರಬಹುದಾದಕ್ಕಿಂತ ಹೆಚ್ಚಿನ ನಂಬಿಕೆ, ಶ್ರದ್ಧೆ ಹೆಂಗಸರಲ್ಲಿ ಮೂಡುವಂತೆ ನಮ್ಮ ಕಟ್ಟುಪಾಡುಗಳು ಅವರನ್ನು ರೂಪಿಸಿವೆ. ವ್ಯಾವಹಾರಿಕ ಜ್ಞಾನದಲ್ಲಿ ಬುದ್ಧಿವಂತಳಾದರೂ, ಇಂತಹ ಭಕ್ತಿ-ಧಾರ್ಮಿಕ ಶ್ರದ್ಧೆಯ ಮೂಲಕ ಅವಳಲ್ಲಿ ಮೌಢ್ಯವನ್ನು ವ್ಯವಸ್ಥಿತವಾಗಿ ತುಂಬಲಾಗಿದೆ. ಯಾರು, ಯಾವ ವಿಚಾರದಲ್ಲಿ ಮೌಢ್ಯವನ್ನು ಬೆಳೆಸಿಕೊಂಡಿರುತ್ತಾರೋ, ಅವರನ್ನು ಆ ವಿಚಾರದಲ್ಲಿ ಮೋಸಗೊಳಿಸುವುದು ಕಷ್ಟದ ಕೆಲಸವಲ್ಲ.

ಸೋಕಾಲ್ಡ್‌ ಕೆಲವು ಸ್ವಾಮೀಜಿಗಳು, ದೇವಮಾನವರು, ದೈವಾಂಶಸಂಭೂತರು, ಪಾಪನಿವಾರಕ ಜ್ಯೋತಿಷಿಗಳ ವಂಚಕ ಬಲೆಗೆ ನಮ್ಮ ಹೆಣ್ಣುಮಕ್ಕಳು ಬಲಿಯಾಗುವುದೇ ಇಂತಹ ಧಾರ್ಮಿಕ ಮೌಢ್ಯ ಮತ್ತು ಅಂಧಶ್ರದ್ಧೆಯ ಕಾರಣಕ್ಕೆ. ತುಂಬಿದ ಬಸ್ಸಿನಲ್ಲಿ ಅಸಭ್ಯವಾಗಿ ಮೈತಾಗಿಸಿದರೂ ಮುಲಾಜಿಲ್ಲದೆ ಕೆನ್ನೆಗೆ ಬಾರಿಸುವ ನಮ್ಮ ಹೆಣ್ಣುಮಕ್ಕಳು, ಇಂತಹ ವಂಚಕ ಮಹಾಪುರುಷರು ‘ನನ್ನ ಮೇಲೆ ದೇವರು ಬಂದಿದ್ದಾನೆ. ನನ್ನ ಜೊತೆ ನೀನು ಮಿಲನವಾಗಿ ಸಂತೋಷ ಪಡಿಸದಿದ್ದರೆ, ನಿನ್ನ ಗಂಡ ಶಾಪಕ್ಕೆ ಗುರಿಯಾಗಿ ಸಾಯುತ್ತಾನೆ, ನಿನ್ನ ಮಕ್ಕಳಿಗೆ ಕಾಟ ಕೊಡುತ್ತೇನೆ’ ಎಂದಾಗ ಭಯದಿಂದ ತತ್ತರಿಸಿ, ದುಷ್ಟರ ದೌರ್ಜನ್ಯಕ್ಕೆ ತಮ್ಮನ್ನು ಈಡಾಗಿಸಿಕೊಳ್ಳುತ್ತಾರೆ.

ಮಹಾರಾಷ್ಟ್ರದಲ್ಲಿ ಈಗ ಅರೆಸ್ಟ್‌ ಆಗಿರುವ ಆ ಕಪಟಿ ಜ್ಯೋತಿಷಿ ಮಾತ್ರವಲ್ಲ, ಧಾರ್ಮಿಕ ಮೌಢ್ಯವನ್ನು ಬಳಸಿಕೊಂಡು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿದ ಈ ತರದ ನೂರಾರು ನಿದರ್ಶನಗಳು ನಮಗೆ ಗೋಚರಿಸುತ್ತವೆ. ಉದಾಹರಿಸುತ್ತಾ ಈ ಬರಹವನ್ನು ಮತ್ತಷ್ಟು ಲಂಬಿಸುವುದು ನನಗಿಷ್ಟವಿಲ್ಲ. ನೀವೇ ತುಸು ನಿಮ್ಮ ನೆನಪಿನ ಶಕ್ತಿಯನ್ನು ಕೆದಕಿ ನೋಡಿದರೆ ಸಾಕಷ್ಟು ಉದಾಹರಣೆಗಳು ಪುಟಿದೆದ್ದು ಬರುತ್ತವೆ.

ಅತ್ಯಾಚಾರ ಎನ್ನುವುದು ಕೇವಲ ಗಂಡಸಿನ ವಿಕೃತ ಲೈಂಗಿಕ ತೃಷೆ ಮಾತ್ರ ಅಲ್ಲ; ಅದೊಂದು ಪೊಲಿಟಿಕಲ್‌ ಟೂಲ್! ಪೊಲಿಟಿಕ್ಸ್‌ ಎಂದರೆ, ಇವತ್ತಿನ ಚುನಾವಣಾ ರಾಜಕಾರಣವಲ್ಲ. ಲಿಂಗ ರಾಜಕಾರಣ! ಹೆಣ್ಣನ್ನು ತನ್ನ ಅಧೀನದಲ್ಲಿಟ್ಟುಕೊಳ್ಳಲು ಗಂಡು ಬಳಸುತ್ತಾ ಬಂದ ಒಂದು ಅಸ್ತ್ರ. ಶೀಲ ಎನ್ನುವುದು ಕೇವಲ ಹೆಣ್ಣಿಗೆ ಮಾತ್ರ ಸೀಮಿತವಾದುದು, ಅದರ ರಕ್ಷಣೆಯೆ ಅವಳ ಜೀವನದ ಪರಮಕಾರ್ಯ. ಆಕೆಯ ಶೀಲ ಅವಳ ಗಂಡನಲ್ಲದೆ ಬೇರೆಯವರಿಗೆ ಅರ್ಪಿತವಾಗಬಾರದು. ಹಾಗೇನಾದರು ಆದಲ್ಲಿ ಆಕೆ ನಾಯಿಮುಟ್ಟಿದ ಮಡಕೆ! ಹೀಗೆ ಶೀಲದ ಹೊಣೆಗಾರಿಕೆಯಿಂದ ತಾನು ನುಣುಚಿಕೊಂಡು, ಅದನ್ನು ಹೆಣ್ಣಿನ ಮೇಲಷ್ಟೆ ಹೇರಿದ ಗಂಡಸು, ಆ ಹೆಣ್ಣಿನ ಶೀಲದ ಮೇಲಿನ ಅತಿಕ್ರಮಿಸುವಿಕೆಯನ್ನು ತನ್ನ ಪೌರುಷವಾಗಿ ಬಿಂಬಿಸಿಕೊಂಡ; at the same time, ಅಂತಹ ಅತಿಕ್ರಮಣಕ್ಕೆ ತುತ್ತಾದ ಹೆಣ್ಣನ್ನು ಬಹಿಷ್ಕೃತೆಯಾಗಿಸುತ್ತಾ ಬಂದ. ಬೇರೆಲ್ಲಾ ಅಪರಾಧಗಳಲ್ಲಿ ಆರೋಪಿಗೆ ತಿರಸ್ಕಾರ, ಸಂತ್ರಸ್ತರಿಗೆ ಸಾಂತ್ವನಗಳಿದ್ದರೆ, ಅತ್ಯಾಚಾರದಲ್ಲಿ ಮಾತ್ರ ಸಂತ್ರಸ್ತೆಯರಿಗೇ ಬಹಿಷ್ಕಾರ!

ಕೆಲ ದಿನಗಳ ಹಿಂದೆ ಪ್ರತಿಷ್ಠಿತ ಕುಟುಂಬವೊಂದರ ಯುವ ರಾಜಕಾರಣಿ ತನ್ನ ಅಧಿಕಾರ ಮತ್ತು ಮನೆತನದ ಪ್ರಭಾವ ಬಳಸಿಕೊಂಡು ನೂರಾರು ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗಿದ ಪ್ರಕರಣ ಬೆಳಕಿಗೆ ಬಂದಿತ್ತು. ಸಾಮಾಜಿಕ ಒತ್ತಡಗಳ ಕಾರಣಕ್ಕೆ ಬಹಿರಂಗವಾಗಿ ಎಲ್ಲರೂ ಅದನ್ನು ಖಂಡಿಸಿದರು ಕೂಡಾ, ಗುಪ್ತವಾಗಿ “ಅವನೇನೊ ಗಂಡಸು, ಆದ್ರೆ ಕರೆದ ತಕ್ಷಣ ಹೋಗಿದ್ರಲ್ವಾ ಆ ಹೆಂಗಸರಿಗೆ ಏನಾಗಿತ್ತು? ಹೆಂಗಸರೇ ಮೈಮೇಲೆ ಬಿದ್ದುಬಂದರೆ ಗಂಡಸಾದವನು ಸುಮ್ನೆ ಇರಕ್ಕಾಗುತ್ತಾ”, “ಅಯ್ಯೋ, ಯಾರೂ ಮಾಡದೆ ಇರೋದನ್ನ ಅವನು ಮಾಡಿದಾನಾ….. ಮದುವೆಯಾಗಿ ಗಂಡ ಇದ್ದ್ರೂ ಅವನ ಬಳಿ ಹೋಗಿದ್ದ್ರಲ್ವಾ, ಮೊದ್ಲು ಅವರಿಗೆ ಉಗಿಯಬೇಕು” ಎಂಬ ಮಾತುಗಳು ಕೇಳಿಬಂದವು. ಇದು ನಮ್ಮ ಸಮಾಜದ ಪುರುಷಾಧಿಪತ್ಯ ಮನಸ್ಥಿತಿಗೆ ಹಿಡಿದ ಕನ್ನಡಿ. ಇಂಥಾ ಕಡೆ, ಅತ್ಯಾಚಾರಗಳು ಸಹಜವೆನಿಸುತ್ತವೆ; ಬೆಳಕಿಗೆ ಬರದಂತೆ ಮುಚ್ಚಿಹೋಗುತ್ತವೆ; ಬೆಳಕಿಗೆ ಬಂದರೂ, ಸಂತ್ರಸ್ತೆಯ ಬದುಕನ್ನೇ ಮೂರಾಬಟ್ಟೆಯಾಗಿಸುತ್ತವೆ.

ಕೇವಲ ಶೋಷಿತ ಜಾತಿಯಲ್ಲಿ ಹುಟ್ಟಿದ್ದರೆಂಬ ಕಾರಣಕ್ಕೆ, ತಮ್ಮದೇನೂ ತಪ್ಪಿಲ್ಲದಿದ್ದರೂ ಮೇಲ್ಜಾತಿಗಳಿಂದ ಶೋಷಣೆಗೆ ಒಳಗಾಗುತ್ತಿದ್ದ ಜಾತಿವ್ಯವಸ್ಥೆಯು ಕೇವಲ ಒಂದು ಕ್ರೌರ್ಯ ಮಾತ್ರವಾಗಿರಲಿಲ್ಲ, ವ್ಯವಸ್ಥಿತ ಸಾಮಾಜಿಕ ರಾಜಕಾರಣವಾಗಿತ್ತು. ಇದನ್ನು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಹಾಗಿರುವಾಗ, ತನ್ನದಲ್ಲದ ತಪ್ಪಿಗೆ ಸಂತ್ರಸ್ತೆಯೆ ದೂಷಣೆಗೆ ಒಳಗಾಗುವುದು ಕೂಡಾ, ಒಂದು ಅಪರಾಧ ಮಾತ್ರವಲ್ಲದೆ ಲಿಂಗ ರಾಜಕಾರಣವೆನಿಸುವುದಿಲ್ಲವೇ?

ಇಂತಹ ಶೋಷಕ ರಾಜಕಾರಣವನ್ನು ಪ್ರತಿರೋಧಿಸಬೇಕೆಂದರೆ, ಶೋಷಣೆಗೆ ತುತ್ತಾದ ಸಮುದಾಯದಲ್ಲಿ ಸಾಮಾಜಿಕ ಅರಿವು ತುಂಬಾ ಮುಖ್ಯ. ಕಣ್ಣಿಗೆ ಏನು ಗೋಚರಿಸುತ್ತದೆಯೋ, ಅದಕ್ಕಿಂತ ಆಚೆಗೂ, ಆಳಕ್ಕೂ ಇಳಿದು ಸತ್ಯಶೋಧನೆಗೆ ಮುಂದಾಗುವ ಪ್ರಜ್ಞಾವಂತಿಕೆ ಆ ಸಮುದಾಯಕ್ಕೆ ಬೇಕಾಗುತ್ತದೆ. ಇಂಥಾ ಅರಿವು, ಪ್ರಜ್ಞೆ ಶೋಷಿತರಲ್ಲಿ ಮೂಡಬಾರದೆಂಬ ಕಾರಣಕ್ಕೇ ಅವರ ಮೆದುಳುಗಳ ಸುತ್ತ ದೇವರು, ಧರ್ಮ, ಸಂಪ್ರದಾಯ, ಕಟ್ಟುಪಾಡು, ಕರ್ಮ, ಪೂರ್ವಜನ್ಮದ ಹೆಣಿಗೆಗಳನ್ನು ಹೆಣೆದುಕೊಂಡು ಬರಲಾಗಿದೆ. ಬಾಬಾ ಸಾಹೇಬ್‌ ಅಂಬೇಡ್ಕರರ ಪ್ರವೇಶಿಕೆಯಿಂದ ಜಾತಿವ್ಯವಸ್ಥೆಯ ಸುತ್ತ ಇದ್ದ ಅಂತಹ ಹೆಣಿಗೆಗಳು ತುಂಡಾದವು. ಅದರ ಪರಿಣಾಮವಾಗಿ ಶೋಷಿತರಲ್ಲಿ ಅರಿವಿನ ಆಸ್ಪೋಟವಾಯಿತು. ಆಳಕ್ಕಿಳಿದು ನೋಡುವ ಪ್ರಜ್ಞೆ ಬೆಳೆಯಿತು. ಪ್ರಜ್ಞೆಯಿಂದಾಗಿ ಪ್ರಶ್ನೆಗಳು ಅವರಲ್ಲಿ ಅವತರಿಸಿದವು. ಮುಂಚಲನೆಗೆ ದಾರಿ ತೆರೆದುಕೊಂಡಿತು.

ಆದರೆ ಹೆಣ್ಣಿನ ವಿಚಾರದಲ್ಲಿ….!!??

ಮಹಾರಾಷ್ಟ್ರ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ

ತನ್ನ ಮೇಲಿನ ಶೋಷಕ ರಾಜಕಾರಣವನ್ನು ಅರ್ಥ ಮಾಡಿಕೊಳ್ಳಲು ಬೇಕಾದ ಅರಿವು, ಪ್ರಜ್ಞೆ ಅವಳಲ್ಲಿ ಮೂಡದಂತೆ ಅವಳ ಮೆದುಳಿನ ಸುತ್ತ ಹೆಣೆದ ಧರ್ಮ, ದೇವರು, ನಂಬಿಕೆಯ ಹೆಣಿಗೆಗಳು ಇವತ್ತಿಗೂ ಬಲವಾಗಿವೆ. ನಿಜ ಹೇಳಬೇಕೆಂದರೆ, ಆಕೆಯನ್ನು ಇನ್ನಷ್ಟು ಮೌಢ್ಯದತ್ತ ತಳ್ಳಲು ಯಶಸ್ವಿಯಾಗುತ್ತಿವೆ. ಹೆಣ್ಣಿನ ಏಳಿಗೆಯ ವಿಚಾರದಲ್ಲಿ ಅಪಾರ ಒಲವು ಹೊಂದಿದ್ದ ಬಾಬಾ ಸಾಹೇಬರು ತಮ್ಮ ಸಂವಿಧಾನದ ಮೂಲಕ ಹೆಣ್ಣಿನ ಸಮಾನತೆಗೆ ಸಾಕಷ್ಟು ಅವಕಾಶ ಸೃಷ್ಟಿಸಿಕೊಟ್ಟರೂ, ಶೋಷಿತರಲ್ಲಿ ಅವರು ಮಾಡಿ ತೋರಿಸಿದ ಅರಿವಿನ ಆಸ್ಫೋಟವನ್ನು ಮಹಿಳಾ ಸಮುದಾಯದಲ್ಲೂ ಮಾಡಿ ತೋರಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ, ಮಹಿಳೆ ಎನ್ನುವುದು ಯಾವುದೋ ಒಂದು ಜಾತಿ, ವರ್ಣಕ್ಕೆ ಸೀಮಿತವಾದ ಶೋಷಿತ ಸಮುದಾಯವಲ್ಲ. ಎಲ್ಲಾ ಜಾತಿವರ್ಗದಲ್ಲೂ ಚದುರಿ ಚೆಲ್ಲಾಪಿಲ್ಲಿಯಾಗಿರುವ ನತದೃಷ್ಟೆ. ಅತ್ಯುನ್ನತ ಶೋಷಕ ಜಾತಿ ಎಂದು ನಾವು ಯಾವುದನ್ನು ಗುರುತಿಸುತ್ತೇವೆಯೋ, ಆ ಜಾತಿಯಲ್ಲಿರುವ ಮಹಿಳೆಯೂ ಶೋಷಿತಳೆ. ಆಕೆಗೆ ಜಾತಿ ಇಲ್ಲ, ವರ್ಣವೂ ಇಲ್ಲ. ಆಕೆಯನ್ನು ಜಾಗೃತಗೊಳಿಸುವಲ್ಲಿ ಎದುರಾಗುತ್ತಿರುವ ಬಹುದೊಡ್ಡ ಅಡ್ಡಿಯೇ ಇದು. ಸ್ವತಃ ತಾನೇ ಒಬ್ಬ ಶೋಷಿತೆಯಾಗಿದ್ದರೂ, ತನ್ನ ಮೇಲ್ಜಾತಿ ಶೋಷಕ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವಷ್ಟು ಆಕೆಯ ಮೆದುಳನ್ನು ದೇವರು, ಧರ್ಮ, ಮೌಢ್ಯಗಳ ಮೂಲಕ ನಿಯಂತ್ರಿಸಲಾಗಿದೆ.

ಆ ನಿಯಂತ್ರಣವನ್ನೇ ಧಾರ್ಮಿಕತೆಯ ಹೆಸರಿನಲ್ಲಿ ಇಂತಹ ವಂಚಕರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ಹೆಣ್ಣಿನ ಮೇಲೆ ಅತ್ಯಾಚಾರವೆಸಗಿ, ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳಾಗಿ ಮೆರೆಯುತ್ತಾರೆ. ಮಹಾರಾಷ್ಟ್ರದ ಆ ವಂಚಕ ಜ್ಯೋತಿಷಿಯ ವಿಚಾರದಲ್ಲೇ ಹೇಳುವುದಾದರೆ, ಮಹಾರಾಷ್ಟ್ರ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಕೂಡಾ ಅವನ ಭಕ್ತೆ! ಮಹಿಳಾ ಆಯೋಗದ ಅಧ್ಯಕ್ಷೆ ಎಂದರೆ, ಶೋಷಣೆಯ ವಿರುದ್ಧ ಮಹಿಳೆಯರನ್ನು ಜಾಗೃತಗೊಳಿಸುವ ಸೂಕ್ಷ್ಮ ಒಳನೋಟ ಹೊಂದಿರಬೇಕಾಗುತ್ತದೆ; ಅನ್ಯಾಯಗಳ ವಿರುದ್ಧ ಹೋರಾಡುವ ಬದ್ಧತೆ ಇರಬೇಕಾಗುತ್ತದೆ. ಅಂತಹ ಹುದ್ದೆಗೇರಿದ ಮಹಿಳೆಯೇ, ಅತ್ಯಾಚಾರಿ ಮನಸ್ಥಿತಿಯ ಈ ವ್ಯಕ್ತಿಯ ಭಕ್ತೆಯಾಗಿರುತ್ತಾಳೆಂದರೆ, ಇನ್ನುಳಿದ ಮಹಿಳೆಯರ ಮಿದುಳುಗಳಿಗೆ ನಮ್ಮ ಸಮಾಜ ತುಂಬಿರುವ ಮೌಢ್ಯ ಅದೆಷ್ಟು ಗಾಢವಿರಬೇಡ!?

ಮಾಚಯ್ಯ ಎಂ ಹಿಪ್ಪರಿಗಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- http://‘ಜ್ಞಾನಪೀಠ’ದ ಸುತ್ತ ವಿವಾದದ ಹುತ್ತ https://kannadaplanet.com/controversy-surrounds-jnanpith/

More articles

Latest article

Most read