ಬಣ್ಣ ತಾರತಮ್ಯ : ಬಿಸಿಸಿಐ ಕಾಮೆಂಟರಿ ಪ್ಯಾನಲ್‌ಗೆ ಲಕ್ಷ್ಮಣ್‌ ಶಿವರಾಮಕೃಷ್ಣನ್‌ ವಿದಾಯ

ಭಾರತ ತಂಡದ  ಮಾಜಿ ಲೆಗ್‌ ಸ್ಪಿನ್ನರ್‌ ಲಕ್ಷ್ಮಣ್‌ ಶಿವರಾಮಕೃಷ್ಣನ್‌ ಅವರು ಬಿಸಿಸಿಐ (BCCI) ಕಾಮೆಂಟರಿ ಪ್ಯಾನಲ್ನಿಂದ ನಿವೃತ್ತಿ ಘೋಷಿಸಿದ್ದದಾರೆ. ಈ ನಿರ್ಧಾರದ ಬೆನ್ನಲ್ಲೆ ಅವರು ಕ್ರಿಕೆಟ್‌ ಮಂಡಳಿಯ ವಿರುದ್ಧ ಗಂಭಿರ ಅರೋಪ ಮಾಡಿದ್ದಾರೆ. ಅದೆನೆಂದರೆ ಕಳೆದ 23 ವರ್ಷಗಳಿಂದ ತಮಗೆ ಟಾಸ್‌ ಮತ್ತು ಪಂದ್ಯದ ನಂತರದ  ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ನೆಡೆಸಿಕೊಡಲು ಅವಕಾಶ ನೀಡಿಲ್ಲ ಎಂದು ಅವರು ಅಸಮಾಧನ ಹೊರಹಾಕಿದ್ದಾರೆ. ಇದಕ್ಕೆಲ್ಲ ಬಣ್ಣದ ತಾರತಮ್ಯ ಕಾರಣವಿರಬಹುದು ಎಂದು ಅವರು ಸಾಮಜಿಕ ಜಾಲತಾಣಗಳಲ್ಲಿ ಬಿಸಿಸಿಐ ಅನ್ನು ಪರೋಕ್ಷವಾಗಿ ದೂರಿದ್ದಾರೆ.

“ಅನುಭವವಿಲ್ಲದ ಹೊಸಬರಿಗೆ ಪಿಚ್‌ ರೀಪೊರ್ಟ್‌ ಮತ್ತು ಪ್ರೆಸೆಂಟೆಶನ್‌ ಮಾಡಲು ಅವಕಾಶ ನೀಡಲಾಗುತ್ತದೆ, ಅದರೆ ದಶಕಗಳಿಂದ ರಂಗದಲ್ಲಿರುವ ನಮ್ಮನ್ನು ಕಡೆಗಣಿಸಲಾಗಿದೆ” ಎಂದು ಇನ್ನೊಂದು X ಪೊಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಶಿವರಾಮಕೃಷ್ಣನ್‌ ಅವರ ದಿಢೀರ್‌ ನಿರ್ಧಾರಕ್ಕೆ ಭಾತರದ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್‌‌ “ ಈ ಭಾರಿಯ ಐಪಿಎಲ್‌ನಲ್ಲಿ ನೀವು ಯಾಕಿಲ್ಲ ? “ ಎಂದು ಪ್ರಶ್ನಿಸಿದ್ದಾರೆ.‌   

ಶಿವರಾಮಕೃಷ್ಣನ್ ಅವರ ಕ್ರಿಕೆಟ್ ಜೀವನ

ಇವರು 1980ರ ದಶಕದಲ್ಲಿ ಭಾರತದ ಪರ 9 ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 1984ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ 12 ವಿಕೆಟ್ ಪಡೆದು ಐತಿಹಾಸಿಕ ಜಯ ತಂದುಕೊಟ್ಟಿದ್ದರು. 1985ರಲ್ಲಿ ಸುನಿಲ್ ಗವಾಸ್ಕರ್ ನೇತೃತ್ವದಲ್ಲಿ ಭಾರತ ಗೆದ್ದ ‘ಬೆನ್ಸನ್ ಅಂಡ್ ಹೆಡ್ಜಸ್’ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. 2000ನೇ ಇಸವಿಯಿಂದ ಅವರು ಕಾಮೆಂಟರಿ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು.

More articles

Latest article

Most read