ಎಲಾನ್ ಮಸ್ಕ್ ವಿರುದ್ಧದ ಟ್ವಿಟರ್ ಮೊಕದ್ದಮೆ: ಇಂದು ಅಂತಿಮ ವಾದ

ಸ್ಯಾನ್ ಫ್ರಾನ್ಸಿಸ್ಕೋ: ಸಾಮಾಜಿಕ ಜಾಲತಾಣ ದೈತ್ಯ ‘ಟ್ವಿಟರ್’ ಪ್ರಸ್ತುತ X ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಹೂಡಿಕೆದಾರರಿಗೆ ವಂಚಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ವಿರುದ್ಧದ ಮೊಕದ್ದಮೆಯ ಅಂತಿಮ ವಾದ-ಪ್ರತಿವಾದಗಳು ಮಂಗಳವಾರ ಆರಂಭವಾಗಲಿವೆ.

2022ರಲ್ಲಿ 44 ಬಿಲಿಯನ್ ಡಾಲರ್ ಮೊತ್ತಕ್ಕೆ ಟ್ವಿಟರ್ ಖರೀದಿಸುವ ಒಪ್ಪಂದ ಮಾಡಿಕೊಂಡಿದ್ದ ಮಸ್ಕ್, ನಂತರದ ದಿನಗಳಲ್ಲಿ ಅದರಿಂದ ಹಿಂದೆ ಸರಿಯಲು ಹೂಡಿಕೆದಾರರ ದಿಕ್ಕು ತಪ್ಪಿಸುವಂತಹ ತಂತ್ರಗಳನ್ನು ಅನುಸರಿಸಿದ್ದರು ಎಂಬುದು ಷೇರುದಾರರ ಪ್ರಮುಖ ಆರೋಪವಾಗಿದೆ. ಈ ಹಿನ್ನೆಲೆಯಲ್ಲಿ ದಾಖಲಾದ ಸಿವಿಲ್ ಮೊಕದ್ದಮೆಯ ವಿಚಾರಣೆ ಸ್ಯಾನ್ ಫ್ರಾನ್ಸಿಸ್ಕೋದ ನ್ಯಾಯಾಲಯದಲ್ಲಿ ಅಂತಿಮ ಹಂತಕ್ಕೆ ತಲುಪಿದೆ.

ವಿಚಾರಣೆಯ ಉದ್ದಕ್ಕೂ ಟ್ವಿಟರ್‌ನಲ್ಲಿರುವ ನಕಲಿ ಅಥವಾ ‘ಬಾಟ್’ ಖಾತೆಗಳ ವಿಷಯವೇ ಚರ್ಚೆಯ ಕೇಂದ್ರಬಿಂದುವಾಗಿತ್ತು. ಟ್ವಿಟರ್ ಅಧಿಕೃತವಾಗಿ ಶೇ. 5ರಷ್ಟು ನಕಲಿ ಖಾತೆಗಳಿವೆ ಎಂದು ಹೇಳಿಕೊಂಡಿದ್ದರೂ, ವಾಸ್ತವದಲ್ಲಿ ಈ ಸಂಖ್ಯೆ ಶೇ. 20ಕ್ಕಿಂತ ಹೆಚ್ಚಿದೆ ಎಂದು ಮಸ್ಕ್ ವಾದಿಸಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ಒಪ್ಪಂದವನ್ನು ರದ್ದುಗೊಳಿಸಲು ಮಸ್ಕ್ ಯತ್ನಿಸಿದ್ದರು ಎಂದು ಷೇರುದಾರರ ಪರ ವಕೀಲರು ವಾದ ಮಂಡಿಸಿದ್ದಾರೆ. ಆದರೆ, ಟ್ವಿಟರ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಸಾಕ್ಷ್ಯ ನುಡಿದು, “ಟ್ವಿಟರ್ ಎಂದಿಗೂ ಸುಳ್ಳು ದಾಖಲೆಗಳನ್ನು ಸಲ್ಲಿಸಿಲ್ಲ, ನಕಲಿ ಖಾತೆಗಳ ಸಂಖ್ಯೆ ಶೇ. 1ರ ಆಸುಪಾಸಿನಲ್ಲಿದೆ” ಎಂದು ಮಸ್ಕ್ ವಾದವನ್ನು ತಳ್ಳಿಹಾಕಿದ್ದಾರೆ.

ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ಚಾರ್ಲ್ಸ್ ಆರ್. ಬ್ರೇಯರ್ ಅವರು ಜ್ಯೂರಿ ಸದಸ್ಯರಿಗೆ ಮಹತ್ವದ ಸೂಚನೆ ನೀಡಿದ್ದಾರೆ. “ಎಲಾನ್ ಮಸ್ಕ್ ಬಗ್ಗೆ ಸಾರ್ವಜನಿಕವಾಗಿ ನಕಾರಾತ್ಮಕ ಅಭಿಪ್ರಾಯಗಳಿರಬಹುದು. ಆದರೆ, ಎಲ್ಲರೂ ಇಷ್ಟಪಡದ ವ್ಯಕ್ತಿಗೂ ಕಾನೂನಿನಡಿಯಲ್ಲಿ ನ್ಯಾಯಯುತ ವಿಚಾರಣೆಯ ಹಕ್ಕಿದೆ. ಯಾವುದೇ ಪೂರ್ವಾಗ್ರಹ ಪೀಡಿತರಾಗದೆ ತೀರ್ಪು ನೀಡಬೇಕು” ಎಂದು ಅವರು ತಿಳಿಸಿದ್ದಾರೆ.

More articles

Latest article

Most read