ಪದೋನ್ನತಿ ಪರೀಕ್ಷೆಯಿಂದ ಕನ್ನಡ ಹೊರಗಿಟ್ಟ ರೈಲ್ವೆ ಇಲಾಖೆ: ಬೃಹತ್‌ ಚಳವಳಿಗೆ ಸಜ್ಜಾಗುತ್ತಿದೆ ಕರವೇ

ಬೆಂಗಳೂರು, ಮಾರ್ಚ್ 16: ರೈಲ್ವೆ ಇಲಾಖೆಯ ಪದೋನ್ನತಿ ಪರೀಕ್ಷೆಯಿಂದ ಕನ್ನಡ ಭಾಷೆಯನ್ನು ಹೊರಗಿಟ್ಟಿರುವ ನಿರ್ಧಾರದ ಹಿನ್ನೆಲೆಯಲ್ಲಿ ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಬೃಹತ್‌ ಹೋರಾಟಕ್ಕೆ ಸಜ್ಜಾಗುತ್ತಿದೆ.

ಪದೋನ್ನತಿ ಪರೀಕ್ಷೆಗಳನ್ನು ಕೇವಲ ಹಿಂದಿ-ಇಂಗ್ಲಿಷ್‌ ನಲ್ಲಿ ನಡೆಸಲು ನಿರ್ಧರಿಸಿರುವ ರೈಲ್ವೆ ನೇಮಕಾತಿ ಮಂಡಳಿಯ ತೀರ್ಮಾನ ಕರ್ನಾಟಕದ ನೌಕರರು ಮತ್ತು ಕನ್ನಡಿಗ ಮೇಲಿನ ಸ್ಪಷ್ಟ ಅನ್ಯಾಯ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರು ಆರೋಪಿಸಿದ್ದಾರೆ. ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿರುವ ಅವರು ಒಂದು ವೇಳೆ ಕನ್ನಡವಿಲ್ಲದೆ ಪರೀಕ್ಷೆ ನಡೆಸಿದರೆ ಉಗ್ರ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಳೆದ ಬಾರಿ ಪದೋನ್ನತಿ ಪರೀಕ್ಷೆಯ ನೋಟಿಫಿಕೇಷನ್‌ ಹೊರಬಂದಾಗ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಯ ಎಚ್ಚರಿಕೆ ನೀಡಿತ್ತು. ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರೊಂದಿಗೆ ಸುದೀರ್ಘ ಸಭೆ ನಡೆಸಿದ ನಂತರ ರೈಲ್ವೆ ಅಧಿಕಾರಿಗಳು ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವುದಾಗಿ ಹೇಳಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಈ ಅವಕಾಶವನ್ನು ಹಿಂಪಡೆಯುವುದು ಅಭ್ಯರ್ಥಿಗಳ ಭವಿಷ್ಯದ ಜೊತೆ ಆಟವಾಡಿದಂತಾಗಿದೆ ಎಂದು ನಾರಾಯಣಗೌಡರು ಹೇಳಿದ್ದಾರೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಮಾತ್ರ ಕಡ್ಡಾಯಗೊಳಿಸಿರುವುದು ಸ್ಥಳೀಯ ನೌಕರರ ಹಕ್ಕುಗಳನ್ನು ತುಳಿಯುವ ನಿರ್ಧಾರವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾದ್ದರಿಂದ ಇಂಗ್ಲಿಷ್ ಮತ್ತು ಹಿಂದಿ ಮಾತ್ರ ತೋರಿಸಲು ಸಾಧ್ಯ ಎನ್ನುವ ರೈಲ್ವೆ ಇಲಾಖೆಯ ಕಾರಣವನ್ನು ನಾರಾಯಣಗೌಡರು ತೀವ್ರವಾಗಿ ಖಂಡಿಸಿದ್ದಾರೆ. “ಕೃತಕ ಬುದ್ಧಿಮತ್ತೆ ಹಾಗೂ ಆಧುನಿಕ ತಂತ್ರಜ್ಞಾನಗಳ ಕಾಲದಲ್ಲಿ ಕನ್ನಡವನ್ನು ಕಂಪ್ಯೂಟರ್‌ನಲ್ಲಿ ತೋರಿಸಲು ಸಾಧ್ಯವಿಲ್ಲ ಎನ್ನುವುದು ಕನ್ನಡಿಗರ ಮೇಲಿನ ನಿರ್ಲಕ್ಷ್ಯ ಮತ್ತು ಅವಮಾನವನ್ನು ಮಾತ್ರ ತೋರಿಸುತ್ತದೆ” ಎಂದು ಅವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಕೆಲಸ ಮಾಡುವ ಕನ್ನಡಿಗ ನೌಕರರಿಗೆ ತಮ್ಮ ಭಾಷೆಯಲ್ಲಿ ಪರೀಕ್ಷೆ ಬರೆಯುವ ಹಕ್ಕು ಇದೆ ಎಂದು ನಾರಾಯಣಗೌಡರು ಒತ್ತಿ ಹೇಳಿದ್ದಾರೆ. ಆ ಹಕ್ಕನ್ನು ಕಿತ್ತುಕೊಳ್ಳಲು ಯಾವುದೇ ಇಲಾಖೆಗೆ ಅಧಿಕಾರ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಅನ್ಯಾಯದ ನಿರ್ಧಾರವನ್ನು ರೈಲ್ವೆ ಮಂಡಳಿ ಕೂಡಲೇ ಹಿಂಪಡೆದು ಕನ್ನಡದಲ್ಲಿಯೂ ಪದೋನ್ನತಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ಒಂದು ವೇಳೆ ನಮ್ಮ ಬೇಡಿಕೆಗೆ ಒಪ್ಪದಿದ್ದಲ್ಲಿ ಕನ್ನಡಿಗರ ಹಕ್ಕಿಗಾಗಿ ಹೋರಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಡೆಯುವ ಹೋರಾಟ ಉಗ್ರರೂಪ ಪಡೆದುಕೊಳ್ಳಲಿದೆ ಎಂದು ನಾರಾಯಣಗೌಡರು ಎಚ್ಚರಿಸಿದ್ದಾರೆ. “ಕನ್ನಡವನ್ನು ನಿರ್ಲಕ್ಷಿಸುವ ಯಾವ ನಿರ್ಧಾರವನ್ನೂ ನಾವು ಮೌನವಾಗಿ ನೋಡುತ್ತ ಕುಳಿತುಕೊಳ್ಳುವುದಿಲ್ಲ. ರೈಲ್ವೆ ಇಲಾಖೆ ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಅವರು ಹೇಳಿದ್ದಾರೆ.

More articles

Latest article

Most read