ʼಆಕಾಶ್‌ʼ ಸಿನಿಮಾ ಮರು ಬಿಡುಗಡೆ

ಅಭಿಮಾನೊಗಳೊಂದಿಗೆ ಹೆಜ್ಜೆ ಹಾಕಿದ ಮೋಹಕ ತಾರೆ ರಮ್ಯಾ

ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಆಕಾಶ್’ ಸಿನಿಮಾ ಮರು ಬಿಡುಗಡೆಯಾಗಿದೆ. 21 ವರ್ಷ ಕಳೆದಿರುವ ಈ ಸಿನಿಮಾವನ್ನು ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬದ ಸ್ಮರಣಾರ್ಥ ರಿಲೀಸ್‌ ಮಾಡಲಾಗಿದೆ.  ಮಹೇಶ್ ಬಾಬು ನಿರ್ದೇಶನದಲ್ಲಿನಟಿ ರಮ್ಯಾ ನಾಯಕಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪುನೀತ್‌ ರಾಜ್‌ ಕುಮಾರ್‌ ಅವರಿಗೆ ನಾಯಕನಾಗಿ ನಟಿಸಿದ 5ನೇ ಚಿತ್ರ ಇದಾಗಿತ್ತು. 

 ಕೆ.ಜಿ.ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ 52 ಅಡಿ ಎತ್ತರದ ಕಟೌಟ್‌ ಹಾಕಲಾಗಿದೆ. ನಟಿ ರಮ್ಯಾ,  ರಾಘವೇಂದ್ರ ರಾಜ್​ಕುಮಾರ್ ಹಾಗೂ ಪತ್ನಿ ಮಂಗಳ ಸೇರಿದಂತೆ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಸಿನಿಮಾ ವೀಕ್ಷಿಸಿದರು. ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರಕ್ಕೆ ನಟ ವಿನಯ್ ರಾಜ್​​ಕುಮಾರ್ ಜೊತೆಗೆ ಕೆಲ ಕಿರುತೆರೆ ನಟ-ನಟಿಯರು ಆಗಮಿಸಿ ಸಖತ್​ ಎಂಜಾಯ್ ಮಾಡಿದರು.

ವಜ್ರೇಶ್ವರಿ ಕಂಬೈನ್ಸ್ ಬ್ಯಾನರ್‌ ಅಡಿಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅಂದು ಈ ಸಿನಿಮಾ ನಿರ್ಮಾಣ ಮಾಡಿದ್ದರು. ಮೊದಲ ಬಾರಿ ತಮ್ಮ ಸಂಸ್ಥೆಯ ಚಿತ್ರವನ್ನು ವಿದೇಶದಲ್ಲಿ ಚಿತ್ರೀಕರಿಸಿದ್ದರು. ಹಾಗಾಗಿ, ಬಜೆಟ್ ಕೊಂಚ ಜಾಸ್ತಿ ಆಗಿತ್ತು. ಉಳಿದಂತೆ ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಬಹುತೇಕ ಚಿತ್ರೀಕರಣ ನಡೆದಿತ್ತು. 2 ಹಾಡುಗಳು ವಿದೇಶದಲ್ಲಿ ಚಿತ್ರೀಕರಣಗೊಂಡಿತ್ತು. ಆ ಕಾಲದಲ್ಲಿ ಎರಡು ಹಾಡನ್ನು ಫಾರಿನ್‌ನಲ್ಲಿ ಚಿತ್ರೀಕರಣ ಮಾಡಿದ್ದರಿಂದ 90 ಲಕ್ಷ ರೂಪಾಯಿ ಖರ್ಚಾಗಿ, ಸಿನಿಮಾ ರಿಲೀಸ್ ಹೊತ್ತಿಗೆ 2 ಕೋಟಿ ರೂಪಾಯಿ ಬಜೆಟ್ ಆಗಿತ್ತು. ಖರ್ಚಿನ ಬಗ್ಗೆ ಯೋಚಿಸದೇ ಪಾರ್ವತಮ್ಮನವರು ನಿರ್ಮಾಣ ಮಾಡಿದ್ದರು. 
ಬಿಡುಗಡೆ ಬಳಿಕ ಸಿನಿಮಾ 100 ಕ್ಕೂ ಹೆಚ್ಚು ದಿನ ಪ್ರದರ್ಶನ ಕಾಣುವ ಮೂಲಕ ಐದು ಪಟ್ಟು ಹೆಚ್ಚು ಹಣ ಗಳಿಸಿತ್ತು.

More articles

Latest article

Most read