ಮಾಧ್ಯಮಗಳಿಗೆ ವಿಧಾನಸೌಧ ಪ್ರವೇಶ : ನಿರ್ಬಂಧ ಆದೇಶ ವಾಪಾಸ್

ಪತ್ರಕರ್ತರು ಪತ್ರಿಕಾಗೋಷ್ಠಿ, ಕಾರ್ಯಕ್ರಮಗಳಿಗೆ ಭಾಗವಹಿಸಬಹುದು

ಬೆಂಗಳೂರು:  ವಿಧಾನಸೌಧಕ್ಕೆ ಮಾಧ್ಯಮದವರಿಗೆ ನಿರ್ಬಂಧ ಹೇರಿದ್ದ ಸರ್ಕಾರ, ಆದೇಶ ವಾಪಸ್‌ ಪಡೆದಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ವಿಧಾನಸೌಧದಲ್ಲಿ ಮಾಧ್ಯಮಗಳಿಗೆ  ನಿರ್ಬಂಧ ಆದೇಶ ವಾಪಸ್ ಪಡೆಯಲಾಗಿದೆ.  ಮಾಧ್ಯಮ ಮಾನ್ಯತಾ ಕಾರ್ಡ್ ಪಡೆದವರಿಗೆ ಮುಕ್ತ ಪ್ರವೇಶವಿದೆ. ಮಾಧ್ಯಮದವರಿಗೆ ಪ್ರತ್ಯೇಕ ಅನುಮತಿ ಆದೇಶ ಅಗತ್ಯ ಇಲ್ಲ. ಕಾರ್ಯಕ್ರಮ, ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಬಹುದು ಎಂದು  ಸ್ಪಷ್ಟಪಡಿಸಿದೆ.

ಮಾಧ್ಯಮಗಳಿಗೆ ನಿಷೇಧ ಹಿನ್ನಲೆ ಪತ್ರಕರ್ತರು ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದರು. ಹಾಗೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿತ್ತು. 

More articles

Latest article

Most read