ಯುದ್ಧ ಪರಿಣಾಮ : ಟಾಕ್ಸಿಕ್‌ ಸಿನಿಮಾ ಜೂ. 4ಕ್ಕೆ ಬಿಡುಗಡೆ

ಮಾರ್ಚ್‌ 19 ರಂದು ಸಿನಿಮಾ ಬಿಡುಗಡೆಯಾಗುತ್ತಿಲ್ಲ

ಬೆಂಗಳೂರು :   ಓವರ್‌ಸೀಸ್ ಮಾರುಕಟ್ಟೆ ಹಾಗೂ ಜಾಗತಿಕ ವಿತರಣೆಯ ದೃಷ್ಟಿಯಿಂದ ಪ್ರಸ್ತುತ ಯುದ್ಧದ ವಾತಾವರಣ ಸಿನಿಮಾದ ಕಲೆಕ್ಷನ್ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. 

ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆಯ ಮೇಲೆ ದೊಡ್ಡ ಮಟ್ಟದ ಹೊಡೆತ ಬೀಳಲಿದೆ. ಟಾಕ್ಸಿಕ್’ ಕೇವಲ ಪ್ಯಾನ್ ಇಂಡಿಯಾ ಮಾತ್ರವಲ್ಲದೆ, ಪ್ಯಾನ್ ವರ್ಲ್ಡ್‌ ಮಟ್ಟದಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರ. ಹೀಗಾಗಿ ಯಾವುದೇ ಅಡೆತಡೆ, ಅಪಾಯ ತೆಗೆದುಕೊಳ್ಳದ ಚಿತ್ರತಂಡ, ಅನಿವಾರ್ಯವಾಗಿ ಬಿಡುಗಡೆ ದಿನಾಂಕವನ್ನು ಬದಲಾಯಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ನಟ ಯಶ್ ಅಧಿಕೃತವಾಗಿ ಹಂಚಿಕೊಂಡಿದ್ದು, ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. ಜಾಗತಿಕ ಮಟ್ಟದ ಬೆಳವಣಿಗೆಗಳ ಕಾರಣದಿಂದಾಗಿ ನಾವು ‘ಟಾಕ್ಸಿಕ್’ ಬಿಡುಗಡೆಯನ್ನು ಮುಂದೂಡುತ್ತಿದ್ದೇವೆ. ಮಾರ್ಚ್ 19ರ ಬದಲಾಗಿ, ಇದೇ ಜೂನ್ 4 ರಂದು ಸಿನಿಮಾ ವಿಶ್ವದಾದ್ಯಂತ ನಿಮ್ಮೆದುರು ಬರಲಿದೆ. ನಿಮ್ಮ ಪ್ರೀತಿ ಹಾಗೂ ಬೆಂಬಲ ಹೀಗೆಯೇ ಇರಲಿ ಎಂದು ಬರೆದುಕೊಂಡಿದ್ದಾರೆ.

ಟಾಕ್ಸಿಕ್‌ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈ ಸುದ್ದಿ  ನಿರಾಸೆ ತಂದಿದೆ ಎನ್ನಲಾಗುತ್ತಿದೆ.  ಜೂನ್ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

More articles

Latest article

Most read