ವಾಷಿಂಗ್ಟನ್; ಪಶ್ಚಿಮ ರಾಷ್ಟಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಯುದ್ಧ ಸಂಭವಿಸುತ್ತಿದೆ. ಇಸ್ರೇಲ್ ಮತ್ತು ಅಮೆರಿಕಾ ಇರಾನ್ ಮೇಲೆ ದಾಳಿಗಳನ್ನು ತೀವ್ರಗೊಳಿಸುತ್ತಿರುವ ಹಿನ್ನೆಲೆ, ದೇಶದಾದ್ಯಂತ ಸಾವಿನ ಸಂಖ್ಯೆ ಹೆಚ್ಚುತ್ತಿರುವಾಗ ಇರಾನ್ ಗಲ್ಪ್ ಪ್ರದೇಶದಲ್ಲಿ ಇಸ್ರೇಲ್ ಮತ್ತು ಅಮೆರಿಕಾ ಆಸ್ತಿಗಳ ಮೇಲೆ ದಾಳಿಗಳನ್ನು ಮುಂದುವರಿಸುತ್ತಿದೆ.
ಇನ್ನು ಕತಾರ್ ತನ್ನ ವಾಯುಪಡೆಯು ಇರಾನ್ನಿಂದ ಬರುತ್ತಿದ್ದ ಎರಡು SU-24 ಯುದ್ಧವಿಮಾನಗಳನ್ನು ಹಾಗೂ ಏಳು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಮತ್ತು ಐದು ಇರಾನಿನ ಡ್ರೋನ್ಗಳನ್ನು “ಯಶಸ್ವಿಯಾಗಿ ಹೊಡೆದುರುಳಿಸಿದೆ” ಎಂದು ತಿಳಿಸಿದೆ.ಇರಾನ್ನಲ್ಲಿ, ಅಮೇರಿಕಾ–ಇಸ್ರೇಲ್ ಜಂಟಿ ದಾಳಿಗಳಿಂದ ಕನಿಷ್ಠ 555 ಮಂದಿ ಸಾವನ್ನಪ್ಪಿದ್ದಾರೆ. ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ, ವಾಷಿಂಗ್ಟನ್ನೊಂದಿಗೆ ಅಣು ಚರ್ಚೆಗಳನ್ನು ಮರುಪ್ರಾರಂಭಿಸಲು ಹೊಸ ಪ್ರಯತ್ನ ನಡೆಸಿದ್ದಾರೆ. ಎಂಬ ಅಮೇರಿಕಾ ಮಾಧ್ಯಮಗಳ ವರದಿಗಳನ್ನು ಖಂಡಿಸಿದ್ದಾರೆ.
ಕುವೈತನಲ್ಲಿ, ರಕ್ಷಣಾ ಸಚಿವಾಲಯವು “ಹಲವಾರು” ಅಮೇರಿಕ ಯುದ್ಧವಿಮಾನಗಳು ದೇಶದಲ್ಲಿ ಪತನಗೊಂಡಿವೆ ಎಂದು ಹೇಳಿದೆ, ಆದರೆ ಎಲ್ಲಾ ಸಿಬ್ಬಂದಿಯೂ ಜೀವಂತವಾಗಿ ಪಾರಾಗಿದ್ದಾರೆ. ಅಮೆರಿಕಾ ಸೈನ್ಯವು, ಆ ವಿಮಾನಗಳನ್ನು ತಪ್ಪಾಗಿ ಕುವೈತ್ ವಾಯು ರಕ್ಷಣಾ ವ್ಯವಸ್ಥೆಯೇ ಹೊಡೆದುರುಳಿಸಿದೆ ಎಂದು ತಿಳಿಸಿದೆ.
ಇತ್ತ ಲೆಬನಾನ್ ನಲ್ಲಿ, ಹಿಜ್ಬುಲ್ಲಾ ಉತ್ತರ ಇಸ್ರೇಲ್ ಕಡೆಗೆ ರಾಕೆಟ್ಗಳ ಮಳೆ ಸುರಿಸಿದ ನಂತರ, ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಕನಿಷ್ಠ 52 ಮಂದಿ ಸಾವನ್ನಪ್ಪಿದ್ದಾರೆ. ಲೆಬನಾನ್ ಪ್ರಧಾನಮಂತ್ರಿ ಹೆಜ್ಬೊಲ್ಲಾ ಸಂಘಟನೆಯ ಸೈನಿಕ ಚಟುವಟಿಕೆಗಳ ಮೇಲೆ ನಿಷೇಧ ಘೋಷಿಸಿದ್ದಾರೆ.

