ಶಕ್ತಿ ಯೋಜನೆಗೆ ಸ್ಮಾರ್ಟ್‌ ಕಾರ್ಡ್‌: ಆಧಾರ್‌ ಕಾರ್ಡ್‌ ಅವಶ್ಯವಿಲ್ಲ

ಮೊಬಿಲಿಟಿ ಕಾರ್ಡ್  ಅನುಷ್ಟಾನಕ್ಕೆ ಆಡಳಿತಾತ್ಮಕ ಅನುಮೋದನೆ

ಬೆಂಗಳೂರು:  ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಇನ್ಮುಂದೆ ಇನ್ನಷ್ಟು ಸ್ಮಾರ್ಟ್‌ ಆಗಲಿದೆ.  ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಶಕ್ತಿ ಸ್ಮಾರ್ಟ್ ಕಾರ್ಡ್​​ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ.

ಆಧಾರ್ ಕಾರ್ಡ್  ಅವಶ್ಯಕತೆ ಇಲ್ಲ : ಮಹಿಳಾ ಪ್ರಯಾಣಿಕರಿಗೆ ಶಕ್ತಿ ಸ್ಮಾರ್ಟ್ ಕಾರ್ಡ್  ಉಚಿತವಾಗಿ ವಿತರಿಸಲಾಗುವುದು. ಈ ಕಾರ್ಡ್ ಇದ್ದರೆ ಆಧಾರ್ ಕಾರ್ಡ್ ಬೇಕಿಲ್ಲ.‌ ಶಕ್ತಿ ಯೋಜನೆಯಡಿ ಪ್ರಯಾಣಿಸಲು ಇರುವ ಷರತ್ತೇ ಸ್ಮಾರ್ಟ್ ಕಾರ್ಡ್ ಪಡೆಯಲು ಅನ್ವಯ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.

ಉಚಿತ ಮತ್ತು ಶುಲ್ಕ ಪಾವತಿಸುವ ಪ್ರಯಾಣಿಕರಿಗಾಗಿ ಏಕೀಕೃತ, ಸಂಪರ್ಕರಹಿತ ಮತ್ತು ಪರಸ್ಪರ ಕಾರ್ಯ ನಿರ್ವಹಿಸಬಹುದಾದ ಶುಲ್ಕ ಸಂಗ್ರಹಣ ವ್ಯವಸ್ಥೆಯನ್ನು ಸುಗಮಗೊಳಿಸಲು ರಾಜ್ಯ ಸಾರಿಗೆ ಸಂಸ್ಥೆಗಳಾದ ಕ.ರಾ.ರ.ಸಾ. ನಿಗಮ, ಬೆಂ.ಮ.ಸಾ. ಸಂಸ್ಥೆ, ವಾ.ಕ.ಸಾ. ಸಂಸ್ಥೆ ಮತ್ತು ಕ.ಕ.ರ.ಸಾ. ನಿಗಮಗಳಲ್ಲಿ ಶಕ್ತಿ ಸ್ಮಾರ್ಟ್​​​ ಕಾರ್ಡ್ ಮತ್ತು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್  ಅನುಷ್ಟಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದಕ್ಕಾಗಿ ವಿಶೇಷ ಉದ್ದೇಶದ ವಾಹನ ರಚನೆಗೆ ಅನುಮೋದಿಸಲಾಗಿದೆ.

More articles

Latest article

Most read