ಎಫ್‌ಸ್ಟೀನ್‌ ಫೈಲ್ಸ್‌ ಭಾಗ-1 | ಸತ್ಯಗಳ ಸಂತೆಯಲ್ಲಿ ಬ್ಲ್ಯಾಕ್‌ಮೇಲ್‌ ದಂಧೆಗಿಳಿಯಿತೇ ಅಮೆರಿಕಾ?

‘ಕಣ್ಣಾಮುಚ್ಚೆ ಕಾಡೇಗೂಡೆ, ಉದ್ದಿನ ಮೂಟೆ ಉರುಳಿ ಹೋಯ್ತು, ನಮ್ಮಯ ಹಕ್ಕಿ ಬಿಟ್ಟೇಬಿಟ್ಟೆ, ನಿಮ್ಮಯ ಹಕ್ಕಿ ಜೋಪಾನ…’

Exactly, ಎಫ್‌ಸ್ಟೀನ್‌ ಫೈಲ್‌ ಹೆಸರಿನಲ್ಲಿ ಅಮೆರಿಕಾ ದೇಶವು ಜಗತ್ತಿನ ಇತರೆ ರಾಷ್ಟ್ರಗಳ ಜೊತೆ ಇಂತದ್ದೇ ಕಣ್ಣಾಮುಚ್ಚಾಲೆ ಆಟಕ್ಕೆ ಇಳಿದಿದೆಯಾ? ಪರಮ ಐಲು-ಪೈಲಿನ self-centric ಆಸಾಮಿ ಎಂದು ಗುರುತಿಸಿಕೊಂಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ತನ್ನದೇ ಹೆಸರಿರುವ ರಹಸ್ಯ ಕಡತಗಳ ಬಿಡುಗಡೆಯ ಕಾಯ್ದೆಗೆ ಸಹಿ ಹಾಕುತ್ತಾನೆಂದರೆ ಏನರ್ಥ? ಕಾಯ್ದೆಯ ಪ್ರಕಾರ ಫೈಲ್ಸ್‌ಗಳನ್ನು ರಿಲೀಸ್‌ ಮಾಡಲು ನಿಗದಿಪಡಿಸಿದ್ದ ಡೆಡ್‌ಲೈನ್‌ ಮಿಸ್‌ ಮಾಡಿ, ಬೇರಾವಾಗಲೋ (ಅಮೆರಿಕಾಕ್ಕೆ ಅನುಕೂಲವಾಗುವಂತಹ) ದಾಖಲೆಗಳನ್ನು ಬಿಡುಗಡೆ ಮಾಡಿದ್ದೇಕೆ? ಸುಮಾರು 60 ಲಕ್ಷ ದಾಖಲೆಗಳಿವೆ ಎಂದಿದ್ದ ಅಮೆರಿಕಾ, ಅದರಲ್ಲಿ ಕೇವಲ ಅರ್ಧದಷ್ಟನ್ನು ಮಾತ್ರ ಬಿಡುಗಡೆ ಮಾಡಿದ್ದೇಕೆ? ಸುಮಾರು 25 ಲಕ್ಷಕ್ಕೂ ಹೆಚ್ಚು ಕಡತಗಳನ್ನು ರಹಸ್ಯವಾಗಿ ಉಳಿಸಿಕೊಂಡಿರುವುದೇಕೆ?

ಈ ಪ್ರಶ್ನೆಗಳು ಎಫ್‌ಸ್ಟೀನ್‌ ಫೈಲ್‌ ಸುತ್ತ ಹೊಸಹೊಸ ಅಚ್ಚರಿಗಳನ್ನು ತೆರೆದಿಡುತ್ತಾ ಸಾಗುತ್ತವೆ.

No doubt, ಎಫ್‌ಸ್ಟೀನ್‌ ಫೈಲ್‌ಗಳಲ್ಲಿ ಅನಾವರಣವಾಗಿರುವ ಸತ್ಯಗಳು ಜಗತ್ತನ್ನು ಬೆಚ್ಚಿಬೀಳಿಸುತ್ತಿವೆ. ಇದೊಂದು ಘಟಾನುಘಟಿಗಳ Sex scandal ಎಂಬ ಕಾರಣಕ್ಕೆ ಮಾತ್ರ ಅಲ್ಲ. ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ತಮ್ಮ ಕಾಮತೃಷೆಗೆ ಅವರೆಲ್ಲ ಬಳಸಿಕೊಂಡಿರೋದು ಇದರಲ್ಲಿ ಬಯಲಾಗಿದೆ. ಯಾರನ್ನು ನಾವೆಲ್ಲ ರೋಲ್‌ ಮಾಡೆಲ್‌, ಅಥವಾ ಮಾಸ್‌ ಲೀಡರ್‍‌ಗಳು ಅಂತ ಕರೆದಿದ್ದೇವೋ ಅಂತವರೇ ಇಂತಹ ಪೈಶಾಚಿಕ ಕೃತ್ಯ ನಡೆಸಿರೋದು ಎಫ್‌ಸ್ಟೀನನ ನಿಗೂಢ ಕಡತಗಳಿಂದ ಅನಾವರಣವಾಗುತ್ತಿದೆ. ಆದರೆ ಅದಕ್ಕಿಂತಲೂ ಆತಂಕಕಾರಿ ಸಂಗತಿಯೆಂದರೆ, ಈ phedophilic (ಶಿಶುಕಾಮಿ ವಿಕೃತರು) `ನಾಯಕರು’ಗಳ ವಿಕೃತಿಯನ್ನು ಜೆಫ್ರಿ ಎಫ್‌ಸ್ಟೀನ್‌ ಎಂಬ ಜಾಗತಿಕ ತಲೆಹಿಡುಕ ಬಳಸಿಕೊಂಡದ್ದು ರಾಜಕೀಯ ಮತ್ತು ಬ್ಯುಸಿನೆಸ್‌ ‘ಡೀಲ್‌’ಗಳನ್ನು ಕುದುರಿಸುವ ಬ್ರೋಕರಿಕಿಗೆ!!

ಅಂದರೆ, ಯಾವ ನಾಯಕರು ದೇಶದ ಹಿತ ಕಾಯುತ್ತಾರೆಂದು ನಂಬಿ ಜನ ಮತಹಾಕಿ ಆಯ್ಕೆ ಮಾಡಿಕೊಂಡಿದ್ದರೋ ಅಂತವರು ಕೇವಲ ತಮ್ಮ ಕಾಮದ ತೆವಲಿಗೆ ದೇಶದ ಮಹತ್ವಾಕಾಂಕ್ಷಿ ವಹಿವಾಟುಗಳನ್ನು ಒಬ್ಬ ತಲೆಹಿಡುಕನ ಡೀಲಿಂಗ್‌ಗೆ ಒಪ್ಪಿಸಿ ಬಂದಿದ್ದಾರೆ. Just think it, ತನ್ನ ಲಾಭಕ್ಕಾಗಿ ಕಂಡವರ ಮನೆಯ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಅಪಹರಿಸಿ ತಂದು ತಲೆಹಿಡಿಯುವ ಒಬ್ಬ ಪಿಂಪ್‌, ಒಂದು ವ್ಯವಹಾರವನ್ನು ಕುದುರಿಸಿಕೊಡುತ್ತಾನೆಂದರೆ, ಅದರಲ್ಲಿ ಆ ದೇಶಕ್ಕೆ, ಅಲ್ಲಿನ ಜನರಿಗೆ ಒಳಿತಾಗುವ ಸಾಧ್ಯತೆಯೇನಾದರು ಉಂಟೆ?

ಹಾಗಾಗಿ ಬಹಳಷ್ಟು ದೇಶಗಳಲ್ಲಿ ಈ ಎಫ್‌ಸ್ಟೀನನ ಕಡತಗಳು ಅಲ್ಲೋಲಕಲ್ಲೋಲ ಸೃಷ್ಟಿಸುವ ಸಂಭವವಿದೆ. ಆ ಸಂಭವವನ್ನೇ ಅಮೆರಿಕಾ ತನ್ನ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದೆಯಾ? ಒಂದಂತೂ ಸತ್ಯ, ಈ ಎಫ್‌ಸ್ಟೀನ್‌ ಫೈಲ್‌ ಕರಾಳತೆ ನಮ್ಮ ಊಹೆಗು ನಿಲುಕದಷ್ಟು ಅಪಾಯಕಾರಿಯಾಗಿವೆ. ಅದಕ್ಕು ಮುನ್ನ ಈ ಎಫ್‌ಸ್ಟೀನ್‌ ಫೈಲ್‌ಗಳ ಒಂದಷ್ಟು ಪ್ರಾಥಮಿಕ ಮಾಹಿತಿ ಗ್ರಹಿಸಿಬಿಡೋಣ.

ಯಾರು ಈ ಎಫ್‌ಸ್ಟೀನ್‌?

ಇಡೀ ವೃತ್ತಾಂತದ ಕೇಂದ್ರ ಬಿಂದು ಅಮೆರಿಕಾ ಪ್ರಜೆ ಜೆಫ್ರಿ ಎಫ್‌ಸ್ಟೀನ್‌. ಮೂಲತಃ ಶಿಕ್ಷಕನಾಗಿ ವೃತ್ತಿ ಆರಂಭಿಸಿದ್ದ ಈತ 1980ರ ದಶಕದಲ್ಲಿ ಬಿಲಿಯನೇರ್ ಲೆಸ್ಲೀ ವ್ಯಾಕ್ಸನೇರ್ ಸಂಪರ್ಕಕ್ಕೆ ಬಂದದ್ದು ಅವನ ಜೀವನದ ಟರ್ನಿಂಗ್ ಪಾಯಿಂಟ್ ಎನ್ನಬಹುದು. ಆನಂತರ ದೊಡ್ಡದೊಡ್ಡ ಉದ್ಯಮಿಗಳಿಗೆ ಬ್ಯುಸಿನೆಸ್‌ ಕೌನ್ಸಿಲರ್ ಮತ್ತು ಫೈನಾನ್ಸ್ ಅಡ್ವೈಸರ್ ಸೇವೆ ನೀಡುವ ಕಂಪನಿ ಶುರು ಮಾಡಿ, ದೊಡ್ಡ ಉದ್ಯಮಿಯಾಗಿ ಬೆಳೆದ. ಗಣ್ಯ ಉದ್ಯಮಿಗಳು, ರಾಜಕಾರಣಿಗಳು ಇವನ ಸಂಪರ್ಕಕ್ಕೆ ಬಂದರು. ಅಲ್ಲಿಂದ ಇವನ ವರಸೆ ಬದಲಾಯ್ತು.

ಅವರ ಸ್ನೇಹವನ್ನು ಬಂಡವಾಳ ಮಾಡಿಕೊಂಡ ಈತ ವ್ಯಾಪಾರ ಉದ್ಯಮಗಳ ಡೀಲ್‌ ಕುದುರಿಸಲು ಅವರ ಲೈಂಗಿಕ ತೃಷೆ ಈಡೇರಿಸುವ ತಲೆಹಿಡುಕ ಕೆಲಸಕ್ಕೆ ಮುಂದಾದ. ಅದಕ್ಕಾಗಿ ಆತ ಬಳಸಿಕೊಂಡದ್ದು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು. ಇದಕ್ಕೆ ಇವನಿಗೆ ನೆರವು ನೀಡುತ್ತಿದ್ದುದು ಗಿಲ್ಸೆನ್‌ ಮ್ಯಾಕ್ಸ್‌ವೆಲ್‌ ಎಂಬ ಸಹಾಯಕಿ. ಈಕೆ ಬೇರೆಬೇರೆ ದೇಶಗಳ ಹುಡುಗಿಯರನ್ನು ಪುಸಲಾಯಿಸಿ ಕರೆತರುತ್ತಿದ್ದಳು. ತನ್ನ ಈ ಕೃತ್ಯಕ್ಕಾಗಿ ಅಮೆರಿಕೆಯ ಎರಡು ದ್ವೀಪಗಳನ್ನೆ ಖರೀದಿಸಿದ್ದ ಆತ ಅವುಗಳನ್ನು `ವರ್ಜಿನ್‌ ಐಲ್ಯಾಂಡ್‌’ (ಕನ್ಯೆಯರ ದ್ವೀಪ) ಎಂದು ನಾಮಕರಣ ಮಾಡಿಕೊಂಡಿದ್ದ. ಅಲ್ಲಿ ಅವನ ಭವ್ಯ ಬಂಗಲೆಗಳಿದ್ದವು. ಕೇವಲ ತನ್ನ ಕಸುಬಿಗೆಂದೇ ಆತ ಲೋಲಿತಾ ಎಕ್ಸ್‌ಪ್ರೆಸ್‌ ಎನ್ನುವ ಖಾಸಗಿ ವಿಮಾನ ಹೊಂದಿದ್ದ. ಅವನ ಜಾಲಕ್ಕೆ ಬಿದ್ದ ‘ಗಣ್ಯ’(?)ರೆಲ್ಲ ಈ ಖಾಸಗಿ ವಿಮಾನದಲ್ಲೇ ಓಡಾಡುತ್ತಿದ್ದರಿಂದ, ಅವರ ಕೆಲಸಗಳು ಗುಪ್ತವಾಗಿ ಮುಗಿದು‌ ಹೋಗುತ್ತಿದ್ದವು.

ಹೀಗೆ ಈತ ಪ್ರಪಂಚದಾದ್ಯಂತ ಸುಮಾರು 1000ಕ್ಕೂ ಹೆಚ್ಚು ಹೆಣ್ಣುಮಕ್ಕಳನ್ನು ಅಪಹರಿಸಿ ತಂದು, ಅವರನ್ನು ಸೋಕಾಲ್ಡ್‌ ಗಣ್ಯರ ಕಾಮತೃಷೆಗೆ ಒಪ್ಪಿಸಿ, ಅವರಿಂದ ಆಗಬೇಕಿದ್ದ ಜಾಗತಿಕ ಡೀಲ್‌ಗಳನ್ನು ತನ್ನ ಮೂಗಿನ ನೇರಕ್ಕೆ ಕುದುರಿಸಿದ್ದ ಎನ್ನಲಾಗುತ್ತೆ. 2008ರಲ್ಲಿ ಮೊದಲ ಸಲ, ಹುಡುಗಿಯೊಬ್ಬಳ ತಂದೆತಾಯಿ ನೀಡಿದ ದೂರಿನ ಮೇಲೆ ಪೊಲೀಸರು ಇವನನ್ನು ಅರೆಸ್ಟ್ ಮಾಡಿದ್ದರು. ಇವನ ಖಾಸಗಿ ಐಲ್ಯಾಂಡ್‌ಗಳ ಮೇಲೆ ದಾಳಿ ಮಾಡಿದಾಗ ಸುಮಾರು ಹೆಣ್ಣುಮಕ್ಕಳು ಪತ್ತೆಯಾದರು. ಕೋರ್ಟು ಶಿಕ್ಷೆ ಪ್ರಕಟಿಸಿತಾದರೂ, ಆ ಶಿಕ್ಷೆ ಎಂತದ್ದು ಅಂತೀರಿ?

ಸಾಮಾನ್ಯವಾಗಿ ಇಂತಹ ಅಪರಾಧಿಗಳಿಗೆ ಅಮೆರಿಕೆಯಲ್ಲಿ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದ್ರೆ ಈತನದು ಜೈಲುವಾಸವಾಗಿರಲಿಲ್ಲ, ರೆಸಾರ್ಟ್‌ ವಾಸವಾಗಿತ್ತು. ಹೌದು! ಪಾಮ್ ಬೀಚ್ ಕೌಂಟಿ ಸ್ಟಾಕೇಡ್‌ನ ಒಂದು ಖಾಸಗಿ ಐಷಾರಾಮಿ ರೆಸಾರ್ಟ್‌ನಲ್ಲಿ, ಎಲ್ಲಾ ವೈಭವೋಪೇತ ಸೌರ್ಕಯಗಳನ್ನು ಕೊಟ್ಟು `ಗೃಹಬಂಧನ’ದಲ್ಲಿ ಇರಿಸಲಾಗಿತ್ತು!! ಹಾಗಾಗಿ ಈತನ ಶಿಕ್ಷೆಯನ್ನು ಅಲ್ಲಿನ ಜನ “ಸ್ವೀಟ್‌ಹಾರ್ಟ್ ಡೀಲ್” (Sweetheart Deal) ಎಂದು ಲೇವಡಿ ಮಾಡಿದ್ದರು. ಅಷ್ಟರ ಮಟ್ಟಿಗೆ ಇವನು ಪ್ರಭಾವಿ ಗೆಳೆಯರನ್ನು ಹೊಂದಿದ್ದ. ನಮ್ಮ ದೇಶದಲ್ಲಿ ಮಾತ್ರ ಅಲ್ಲ, ಎಲ್ಲಾ ದೇಶಗಳಲ್ಲೂ ಉಳ್ಳವರಿಗೆ ಒಂದು ನ್ಯಾಯ, ಬಡವರಿಗೆ ಒಂದು ನ್ಯಾಯ ಅನ್ನೋದನ್ನು ಇದನ್ನು ನೋಡಿ ಅರ್ಥ ಮಾಡಿಕೊಳ್ಳಬಹುದು.

ಈ ‘ಕಠಿಣ’ ಶಿಕ್ಷೆಯೂ ಕೇವಲ ಮೂರುವರೆ ವಾರಗಳ ಕಾಲ ಮಾತ್ರ! ಆನಂತರ ಅವನಿಗೆ ದಿನಕ್ಕೆ 12 ಗಂಟೆ ತನ್ನ ಕಚೇರಿಗೆ ಹೋಗಿ ಕೆಲಸ ಮಾಡಲು ಅನುಮತಿ ನೀಡಲಾಯ್ತು. ವಾಪಾಸ್‌ ಬಂದು ಅದೇ ಐಷಾರಾಮಿ ಜೈಲಿನಲ್ಲಿ ಸ್ವೀಟ್‌ಹಾರ್ಟ್‌ ಶಿಕ್ಷೆ ಅನುಭವಿಸಬೇಕು!!! 13 ತಿಂಗಳ ನಂತರ ಅದಕ್ಕೂ ಮುಕ್ತಿಕೊಟ್ಟು ಬಿಡುಗಡೆ ಮಾಡಲಾಯ್ತು! ಆಮೇಲೆ ಯಥಾ ಪ್ರಕಾರ ತನ್ನ ಕಸುಬು ಮುಂದುವರೆಸಿದ.

2019ರಲ್ಲಿ ಈತನನ್ನು ಅಪ್ರಾಪ್ತ ಹೆಣ್ಣುಮಕ್ಕಳ ಕಳ್ಳಸಾಗಣೆ ಮತ್ತು ಲೈಂಗಿಕ ಶೋಷಣೆಯ ಅಪರಾಧದಲ್ಲಿ ಮತ್ತೆ ಅರೆಸ್ಟ್‌ ಮಾಡಲಾಯ್ತು. ಅಷ್ಟರಲ್ಲಾಗಲೆ ಅವನ ನಸೀಬು ಕೈಕೊಟ್ಟಿತ್ತು. ಅವನ `ಗಣ್ಯ’ ಸ್ನೇಹಿತರು ದೂರ ಸರಿದರು. ಕೋರ್ಟು ಈತನನ್ನು ಗಂಭೀರ ಆರೋಪಿ ಎಂದು ವಿಚಾರಣೆ ಕೈಗೆತ್ತಿಕೊಂಡಿತು. ಆಗಲೂ ಈ ಮಹಾಶಯ, ತನ್ನನ್ನು ಜೈಲಿನ ಬದಲು ನ್ಯೂಯಾರ್ಕ್‌ನಲ್ಲಿರುವ ಬಂಗಲೆಯಲ್ಲಿ ಗೃಹಬಂಧನದಲ್ಲಿರಿಸಲು ಅನುಮತಿ ಕೊಟ್ಟರೆ, ಅದಕ್ಕೆ ಪ್ರತಿಯಾಗಿ 100 ಕೋಟಿ ಡಾಲರ್ ಬಾಂಡ್‌ ಸಲ್ಲಿಸುತ್ತೇನೆ ಎಂದು ಕೋರ್ಟು ಮುಂದೆ ಗೋಗರೆದ. ಆದರೆ ಜಡ್ಜ್‌ ರಿಚರ್ಡ್ ಬರ್ಮನ್‌ ಒಪ್ಪಲಿಲ್ಲ. ಅದಾಗಿ ಕೇವಲ ಇಪ್ಪತ್ತು ದಿನಗಳ ಅಂತರದಲ್ಲಿ, ಅಂದರೆ ಆಗಸ್ಟ್‌ 10, 2019ರಂದು ತನ್ನ ಜೈಲುಕೋಣೆಯಲ್ಲಿ ನಿಗೂಢ ರೀತಿಯಲ್ಲಿ ಹೆಣವಾಗಿ ಪತ್ತೆಯಾಗಿದ್ದ. ಆತ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಪೊಲೀಸರು ಹೇಳುತ್ತಾರೆ. ಆದರೆ ಎಫ್‌ಸ್ಟೀನನ ತಮ್ಮನ ಕೋರಿಕೆ ಮೇಲೆ ಪರೀಕ್ಷೆ ಮಾಡಿದ್ದ ಖಾಸಗಿ ಪೆಥಾಲಜಿಸ್ಟ್‌ ಡಾ. ಮೈಕೇಲ್‌ ಬೇಡೆನ್‌ ‘ಆತನ ಕುತ್ತಿಗೆಯ ಮೂಳೆಗಳು ಮುರಿದಿದ್ದ ರೀತಿ ನೋಡಿದರೆ, ಅದು ಆತ್ಮಹತ್ಯೆ ಮಾಡಿಕೊಂಡಂತೆ ಇರಲಿಲ್ಲ, ಬಲವಂತವಾಗಿ ಉಸಿರುಗಟ್ಟಿಸಿ ಕೊಲೆ ಮಾಡಿದ ರೀತಿಯಿತ್ತು’ ಎಂದು ಅನುಮಾನ ಹೊರಹಾಕಿದ್ದರು. ಅವನು ಬಾಯಿಬಿಟ್ಟರೆ ಪ್ರಪಂಚದ ಗಣ್ಯಾತಿಗಣ್ಯರ ಬಂಡವಾಳ ಹೊರಬರಲಿದೆ ಎಂಬ ಕಾರಣಕ್ಕೆ ಆತನನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಈಗಲೂ ಇದೆ. “Epstein didn’t kill himself” (“EDKH”) ಎನ್ನುವ ಹೋರಾಟ ಅಮೆರಿಕಾದಲ್ಲಿ ಭುಗಿಲೆದ್ದಿತ್ತು. Interestingly, ಎಫ್‌ಸ್ಟೀನ್‌ ಅಮೆರಿಕಾ ಜೈಲಿನಲ್ಲಿ ನಿಗೂಢ ರೀತಿಯಲ್ಲಿ ಸತ್ತಾಗ ಅಮೆರಿಕಾ ಅಧ್ಯಕ್ಷರಾಗಿದ್ದುದು ಇದೇ ಡೊನಾಲ್ಡ್‌ ಟ್ರಂಪ್‌!

ಟ್ರಂಪ್‌ ಮತ್ತು ಎಫ್‌ಸ್ಟೀನ್‌

ಆತನ ಲೈಂಗಿಕ ಶೋಷಣೆ ಕೇಸಿನಲ್ಲಿ ವಿಚಾರಣೆಗಿಳಿದು ಅಮೆರಿಕಾ ಪೊಲೀಸರು ವಶಪಡಿಸಿಕೊಂಡ ದಾಖಲೆಗಳು (ವೀಡಿಯೊ, ಫೋಟೊ, ಇಮೇಲ್‌ ಪ್ರತಿ, ಪರ್ಸನಲ್‌ ಲಾಗ್‌ ಇತ್ಯಾದಿ) ಆತನ ಸೇವೆ ಪಡೆದ ದೇಶವಿದೇಶಗಳ ಘಟಾನುಘಟಿ ನಾಯಕರುಗಳ ಹೆಸರು ಹೊಂದಿದ್ದವು. ಬೇರೆ ಬೇರೆ ದೇಶಗಳ ರಾಜಕೀಯ ವ್ಯವಹಾರ ಮತ್ತು ವ್ಯಾಪಾರ ವಹಿವಾಟುಗಳಲ್ಲಿ ಆತ ಮಧ್ಯಸ್ಥಿಕೆ ವಹಿಸುತ್ತಿದ್ದುದು ಬಹಿರಂಗವಾಯ್ತು. ಡೊನಾಲ್ಡ್‌ ಟ್ರಂಪ್‌, ಬಿಲ್‌ ಕ್ಲಿಂಟನ್‌, ಪ್ರಿನ್ಸ್‌ ಆ್ಯಂಡ್ರ್ಯೂ (ಇಂಗ್ಲೆಂಡ್ ರಾಜಕುಮಾರ), ಎಲಾನ್‌ ಮಸ್ಕ್‌ (ಫೇಸ್‌ಬುಕ್‌ ಸ್ಥಾಪಕ), ಬಿಲ್‌ಗೇಟ್ಸ್‌ (ಉದ್ಯಮಿ), ಮೈಕೆಲ್‌ ಜಾಕ್ಸನ್‌ (ಪಾಪ್‌ ಹಾಡುಗಾರ), ಎಹುದ್‌ ಬರಾಕ್‌ (ಇಸ್ರೇಲ್‌ ಮಾಜಿ ಪ್ರಧಾನಿ), ಸ್ಟೀಫನ್‌ ಹಾಕಿಂಗ್‌ (ಖ್ಯಾತ ವಿಜ್ಞಾನಿ) ಮೊದಲಾದವರ ಹೆಸರುಗಳು ಉಲ್ಲೇಖವಾಗಿವೆ. ವಿಪರ್ಯಾಸವೆಂದರೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು, ಕೇಂದ್ರ ಸಚಿವ ಹರ್ದೀಪ್‌ ಸಿಂಗ್‌ ಪುರಿ, ಉದ್ಯಮಿ ಅನಿಲ್‌ ಅಂಬಾನಿಯವರ ಹೆಸರುಗಳೂ ಇಲ್ಲಿ ಫೈಲ್ಸ್‌ನಲ್ಲಿ ಇಣುಕಿವೆ!

ಅಮೆರಿಕಾ ಮೇಲೆ ಗುಮಾನಿ

ಎಫ್‌ಸ್ಟೀನ್‌ ಫೈಲ್‌ನ ಸತ್ಯಗಳು ಜಗತ್ತನ್ನು ಅಲ್ಲೋಲಕಲ್ಲೋಲ ಮಾಡುತ್ತಿರುವುದು ಸುಳ್ಳಲ್ಲ. ಆ ಸತ್ಯವೇ ಈಗ ಅಮೆರಿಕಾವನ್ನು ಗುಮಾನಿಯಿಂದ ನೋಡುವಂತೆ ಮಾಡುತ್ತಿದೆ. ಡೊನಾಲ್ಡ್‌ ಟ್ರಂಪ್‌ ಅವರ ಇತ್ತೀಚಿನ ಸೇಡಿನ ಸುಂಕ ನೀತಿಗಳು, ಯುದ್ದದಾಹಿ ವರ್ತನೆಗಳು, ಅನ್ಯದೇಶಗಳ ಮೇಲಿನ ಹಸ್ತಕ್ಷೇಪಗಳನ್ನು ನೋಡುತ್ತಿದ್ದರೆ ಅಮೆರಿಕಾ ಯಾವ ಧಾವಂತದಿಂದ ಎತ್ತ ಸಾಗುತ್ತಿದೆ ಎಂಬುದು ಅರ್ಥವಾಗುತ್ತಿದೆ. ಜಗತ್ತಿನಲ್ಲಿ ಪ್ರಕ್ಷುಬ್ಧತೆಯನ್ನು ಪ್ರಚೋದಿಸಿ, ಆ ಮೂಲಕ ಅಮೆರಿಕಾದ ವ್ಯಾಪಾರ ಯಜಮಾನಿಕೆಯನ್ನು ಮರುಸ್ಥಾಪಿಸಬೇಕೆನ್ನುವುದು ಅಮೆರಿಕಾದ ಉದ್ದೇಶ. ಅದಕ್ಕಾಗಿ ಇರಾನ್‌ ಮೇಲೆ ಯುದ್ದದ ಬೆದರಿಕೆ ಹಾಕುತ್ತಿದೆ; ವೆನಿಜುವೆಲಾ ಅಧ್ಯಕ್ಷರನ್ನು ಅಪಹರಿಸಿ ಆ ದೇಶದ ತೈಲ ಸಂಪನ್ಮೂಲವನ್ನು ಕೈವಶ ಮಾಡಿಕೊಳ್ಳುತ್ತಿದೆ; ಉಕ್ರೇನ್‌-ರಷ್ಯಾ ನಡುವಿನ ಯುದ್ಧವನ್ನು ಗೊಂದಲಗೊಳಿಸುತ್ತಿದೆ; ಸುಂಕವನ್ನು ಹೆಚ್ಚಿಸಿ ಅಭಿವೃದ್ಧಿಶೀಲ ದೇಶಗಳ ವ್ಯಾಪಾರ ಸ್ವಾತಂತ್ಯ್ರವನ್ನು ಕೈವಶ ಮಾಡಿಕೊಳ್ಳುತ್ತಿದೆ; ಗ್ರೀನ್‌ಲ್ಯಾಂಡ್‌ ತನಗೆ ಬೇಕೆಂದು ಹಕ್ಕು ಸಾಧಿಸುತ್ತದೆ; ಚೀನಾ-ರಷ್ಯಾಗಳಿಗೆ ನೇರ ಎಚ್ಚರಿಕೆ ರವಾನಿಸುತ್ತಿದೆ. ಇಂತಹ ಯತ್ನಗಳೆಲ್ಲವೂ ಈಗ ಜಗತ್ತನ್ನು ಮೂರನೇ ಮಹಾಯುದ್ಧದ ಸನಿಹಕ್ಕೆ ತಳ್ಳುವ ಆತಂಕ ಕಾಡುತ್ತಿದೆ.

ಇಂತಹ ಸಂದರ್ಭದಲ್ಲಿ, ಜಗತ್ತಿನ ಹಲವು ದೇಶಗಳ ಆಂತರಿಕ ರಾಜಕೀಯ ಅಸ್ಥಿರತೆಗೆ ಕಾರಣವಾಗಬಹುದಾದ ಎಫ್‌ಸ್ಟೀನನ ಫೈಲುಗಳನ್ನು `public transparency’ ಹೆಸರಿನಲ್ಲಿ ಅಮೆರಿಕಾ ಬಿಡುಗಡೆ ಮಾಡಿದೆ. ಜನರಿಗೆ ಸತ್ಯವನ್ನು ತಿಳಿಸುವುದಕ್ಕಿಂತ ಹೆಚ್ಚಾಗಿ, ವಿವಿಧ ದೇಶಗಳಲ್ಲಿ ಅಸ್ಥಿರತೆ ಸೃಷ್ಟಿಸುವ ಉದ್ದೇಶ ಇದರ ಹಿಂದೆ ಇದ್ದಂತಿದೆ. ಒಂದುವೇಳೆ, ಸತ್ಯವನ್ನು ಜನರ ಮುಂದೆ ಇಡುವುದೇ ಉದ್ದೇಶವಾಗಿದ್ದರೆ, ಎಲ್ಲಾ 60 ಲಕ್ಷ ದಾಖಲೆಗಳನ್ನು ಬಿಡುಗಡೆ ಮಾಡಬೇಕಿತ್ತು. 25 ಲಕ್ಷ ದಾಖಲೆಗಳನ್ನು ಮುಚ್ಚಿಟ್ಟುಕೊಂಡಿರುವುದೇಕೆ? ಸಂತ್ರಸ್ತ ಹೆಣ್ಣುಮಕ್ಕಳ ಗೌಪ್ಯತೆ ಕಾಪಾಡಲು ಹೀಗೆ ಮಾಡಿದ್ದೇವೆ ಎಂದು ಅಮೆರಿಕಾದ department of Justice (DOJ) ಹೇಳುತ್ತಿದೆ. ಆದರೆ ಸ್ವತಃ ಸಂತ್ರಸ್ತೆಯರೆ ಮುಂದೆ ಬಂದು ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡುವ ಮೂಲಕ ಈ ಪೈಶಾಚಿಕ ಕೃತ್ಯದ ನಿಜರೂಪ ಅನಾವರಣ ಮಾಡುವಂತೆ ಕೇಳುತ್ತಿದ್ದಾರೆ. ಅಲ್ಲದೇ, ಈಗ ಬಿಡುಗಡೆಯಾಗಿರುವ ದಾಖಲೆಗಳಲ್ಲಿ ಹಲವು ಸಂತ್ರಸ್ತೆಯರ ಮುಖ ಮತ್ತು ಗುರುತನ್ನು ಬಹಿರಂಗಪಡಿಸಲಾಗಿದೆ. ಗೌಪ್ಯತೆಯೇ ಉದ್ದೇಶವಾಗಿದ್ದರೆ, ಈ ಸಂತ್ರಸ್ತೆಯರ ಗುರುತು ಬಹಿರಂಗಗೊಳಿಸಿದ್ದೇಕೆ?

ಕೆಲವು ಸ್ಯಾಂಪಲ್‌ಗಳನ್ನು ಮಾತ್ರ ಹೊರಬಿಟ್ಟಿರುವ ಅಮೆರಿಕಾ, ತನ್ನ ಪ್ರಬಲ ಎದುರಾಳಿ ರಾಷ್ಟ್ರಗಳಿಗೆ ಪರೋಕ್ಷ ಬ್ಲ್ಯಾಕ್‌ ಮೇಲ್‌ ಮಾಡುತ್ತಿದೆಯಾ? ನೀವು ಅಮೆರಿಕಾ ವಿರುದ್ಧ ಮುಂದುವರೆದರೆ, ನಿಮ್ಮ ದಾಖಲೆಗಳನ್ನೂ ಬಿಡುಗಡೆ ಮಾಡಬೇಕಾಗುತ್ತೆ ಎಂದು ಆ ನಾಯಕರುಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸುತ್ತಿದೆಯಾ? ಯಾಕೆ ಈ ಪ್ರಶ್ನೆ ಮುಖ್ಯವಾಗುತ್ತದೆಂದರೆ, ನವೆಂಬರ್ 2025ರಲ್ಲಿ Epstein Files Transparency Act ಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಮಾಡಿದಾಗ, ಡಿಸೆಂಬರ್ 19, 2025ರಂದು ಈ ದಾಖಲೆಗಳನ್ನು ಬಿಡುಗಡೆ ಮಾಡಬೇಕೆಂಬ ಸ್ಪಷ್ಟ ಡೆಡ್‌ಲೈನ್‌ ಕಾಯ್ದೆಯಲ್ಲಿತ್ತು. ಆದರೂ ಅಮೆರಿಕಾ ಆ ದಿನಾಂಕಕ್ಕೆ ದಾಖಲೆ ಬಿಡುಗಡೆ ಮಾಡಲಿಲ್ಲ. ಯಾವಾಗ ಯುರೋಪಿಯನ್‌ ಒಕ್ಕೂಟದ ದೇಶಗಳು ಅಮೆರಿಕಾದ ಸುಂಕ ನೀತಿಯ ವಿರುದ್ಧ ನಿರ್ಣಯವನ್ನು ಅಂಗೀಕರಿಸಿ, ಸವಾಲು ಎಸೆದವೋ ಆಗ ಈ ದಾಖಲೆಗಳ ಅರ್ಧ ಭಾಗ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ದಾಖಲೆಗಳಲ್ಲಿ ಇಂಗ್ಲೆಂಡ್‌, ಫ್ರಾನ್ಸ್‌, ನಾರ್ವೆ ದೇಶಗಳ ರಾಜಕಾರಣವನ್ನು ಪ್ರಭಾವಿಸುವಂತಹ ಉಲ್ಲೇಖಗಳಿವೆ.

ಅಮೆರಿಕಾದ ಪ್ರಧಾನ ಎದುರಾಳಿಗಳೆಂದು ಪರಿಗಣಿಸಲಾದ ಚೀನಾ ಮತ್ತು ಅಮೆರಿಕಾ ನಾಯಕತ್ವಗಳ ಅಥವಾ ಉದ್ಯಮಿಗಳ ಹೆಸರು ಇಲ್ಲಿ ಉಲ್ಲೇಖವಾಗದಿರುವುದು ಆಶ್ಚರ್ಯ. ಒಂದುವೇಳೆ, ಈ ದೇಶಗಳನ್ನು ಬ್ಲ್ಯಾಕ್‌ಮೇಲ್‌ ಮಾಡುವುದಕ್ಕೆಂದೇ ಅವುಗಳನ್ನು ರಹಸ್ಯವಾಗಿ ಇಟ್ಟುಕೊಳ್ಳಲಾಗಿದೆಯೇ? ಅಥವಾ ಯುದ್ಧದಂತಹ ಸನ್ನಿವೇಶ ಸೃಷ್ಟಿಯಾದಾಗ, ಆ ದೇಶಗಳಲ್ಲಿ ರಾಜಕೀಯ ಅಸ್ಥಿರತೆ ಉಂಟು ಮಾಡುವ ಸಮಯ ಕಾದು, ಬಿಡುಗಡೆ ಮಾಡಲು ಯೋಜಿಸಲಾಗಿದೆಯೇ? ಇಡೀ ಜಗತ್ತಿನ ಸಣ್ಣಪುಟ್ಟ ದೇಶಗಳ ವ್ಯವಹಾರಗಳಲ್ಲು ಬ್ರೋಕರಿಂಗ್‌ ಮಾಡುತ್ತಿದ್ದ ಎಫ್‌ಸ್ಟೀನ್‌ ರಷ್ಯಾ, ಚೀನಾ, ಜಪಾನ್‌ ತರಹದ ಬೃಹತ್‌ ಉದ್ಯಮಿ ದೇಶಗಳ ವ್ಯವಹಾರದಲ್ಲಿ ಭಾಗಿಯಾಗಿರಲಿಲ್ಲ ಎಂದುಕೊಳ್ಳುವುದು ಬಾಲಿಶತನವಾಗುತ್ತೆ. ಆದರೂ ಆ ದೇಶಗಳ ಗಂಭೀರ ಫೈಲ್‌ಗಳು ಹೊರಬಿದ್ದಿಲ್ಲ.

ಇಲ್ಲಿ ಇನ್ನೊಂದು ಗಹನವಾದ ಪ್ರಶ್ನೆ ಕಾಡುತ್ತೆ. ಎಫ್‌ಸ್ಟೀನ್‌ ಬಂಧನವಾದದ್ದು 2019ರಲ್ಲಿ. ಆಗಲೇ ಆತನಿಗೆ ಸಂಬಂಧಪಟ್ಟ ಈ ದಾಖಲೆಗಳನ್ನು ಅಮೆರಿಕಾ ಪೊಲೀಸರು ವಶಪಡಿಸಿಕೊಂಡಿದ್ದರು. ಅದರಲ್ಲಿದ್ದ ಸತ್ಯಗಳು ಅಮೆರಿಕಾಕ್ಕೆ ತಿಳಿದಿತ್ತು. ಹಾಗಿದ್ದರೂ ಇಷ್ಟುದಿನ ಯಾಕೆ ಅವುಗಳನ್ನು ಗೌಪ್ಯವಾಗಿಡಲಾಗಿತ್ತು? ಈಗ ಯಾಕೆ, ಯುದ್ದೋನ್ಮಾದ ವಾತಾವರಣದ ಸಂದರ್ಭದಲ್ಲಿ ಅರ್ಧದಷ್ಟು ಮಾತ್ರ ಅನಾವರಣ ಮಾಡಲಾಗಿದೆ?

ಇವೆಲ್ಲಾ ಗುಮಾನಿಗಳನ್ನು ಒಂದಕ್ಕೊಂದು ಬೆಸೆದು ನೋಡಿದರೆ ಎಫ್‌ಸ್ಟೀನ್‌ ಫೈಲ್‌ ನೆಪದಲ್ಲಿ ಬಂಡವಾಳಶಾಹಿ ಅಮೆರಿಕಾ, ತನ್ನ ಸ್ವಾರ್ಥದ ಆಟ ಶುರು ಮಾಡಿದೆಯಾ ಎಂಬ ಅನುಮಾನ ಕಾಡುತ್ತೆ. ಅಮೆರಿಕಾದ ಈ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಭಾರತವೂ ಬಲಿಪಶುವಾಯ್ತೇ? ಈ ಅನುಮಾನ ಕಾಡಲು ಕಾರಣವಿದೆ. ಭಾರತದ ಸರಕುಗಳ ಮೇಲೆ ಇನ್ನಿಲ್ಲದ ದುಬಾರಿ ಸುಂಕ ಹೇರಿದಾಗಲೂ ಟ್ರಂಪ್ ಒಪ್ಪಂದಕ್ಕೆ ಮಣಿಯದ ಮೋದಿಯವರು ಎಫ್ ಸ್ಟೀನ್ ಫೈಲುಗಳು ಬಿಡುಗಡೆಯಾಗಿ, ಅದರಲ್ಲಿ ತನ್ನ ಹೆಸರು ಉಲ್ಲೇಖವಾದ ಬೆನ್ನಿಗೆ ಸರಾಗವಾಗಿ ಒಂದು ಫೋನ್ ಸಂಭಾಷಣೆಯಲ್ಲಿ ಟ್ರಂಪ್ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ್ದಾರೆ! ಮಾತ್ರವಲ್ಲ, ಟ್ರಂಪ್ ನನ್ನು ವಿಶ್ವಶಾಂತಿಯ ನಾಯಕ ಎಂದು ಕೊಂಡಾಡಿ ಸ್ವತಃ ತಮ್ಮ ಅಭಿಮಾನಿಗಳೆ ತಬ್ಬಿಬ್ಬಾಗುವಂತೆ ಮಾಡಿದ್ದಾರೆ. ಮೋದಿ ಅಥವಾ ಅವರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಂತಹ ಇನ್ನಷ್ಟು ರಹಸ್ಯ ಕಡತಗಳು ಆ ಬಚ್ಚಿಟ್ಟ ಎಫ್ ಸ್ಟೀನ್ ಫೈಲುಗಳಲ್ಲಿವೆಯೇ? ಅದಕ್ಕೆ ಬೆದರಿಯೇ ಮೋದಿಯವರು ಧಿಡೀರ್ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದರೇ? ಅನುಮಾನಗಳು ಕಾಡುತ್ತಿವೆ. ಇಂತಹ ಬ್ಲ್ಯಾಕ್ ಮೇಲೆ ಕುತಂತ್ರ ನಡೆಸಲೆಂದೇ ಎಫ್ಸ್ಟೀಲ್ ಫೈಲುಗಳನ್ನು ಅಮೆರಿಕಾ ದುರ್ಬಳಕೆ ಮಾಡಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ.

ಅಮೆರಿಕಾ ಮೇಲಿನ ಈ ಗುಮಾನಿಯ ಮಾತ್ರಕ್ಕೆ, ಎಫ್‌ಸ್ಟೀನನ ಕೃತ್ಯಗಳನ್ನಾಗಲಿ ಅಥವಾ ಅವನ ಸೇವೆಯಿಂದ ಕೃತಾರ್ಥರಾದ ‘ಗಣ್ಯ’ ಕಾಮಾಂಧ ಜನದ್ರೋಹಿಗಳ ಅಪರಾಧಗಳನ್ನಾಗಲಿ ಸಣ್ಣದೆಂದು ಪರಿಗಣಿಸಲಾಗದು. ಇವರೆಲ್ಲರೂ ತಮ್ಮ ತೃಷೆಗಾಗಿ ಇವತ್ತು ಅವರವರ ದೇಶಗಳನ್ನು ಅಮೆರಿಕಾದ ಕಪಿಮುಷ್ಠಿಗೆ ಸಿಲುಕಿಸಿದ ದ್ರೋಹಿಗಳು ಅನ್ನೋದು ಸತ್ಯ.

ಅಂದಹಾಗೆ, ಈ ಎಫ್‌ಸ್ಟೀನನ ಫೈಲುಗಳಲ್ಲಿ ಇಣುಕಿರುವ ಭಾರತೀಯ ಹೆಸರುಗಳ ವಿವರಣೆ, ಹಿನ್ನೆಲೆ, ಪರಿಣಾಮಗಳನ್ನು ಮುಂದಿನ ಭಾಗದಲ್ಲಿ ನೋಡೋಣ…

ಮಾಚಯ್ಯ ಎಂ ಹಿಪ್ಪರಿಗಿ

ರಾಜಕೀಯ ವಿಶ್ಲೇಷಕರು

More articles

Latest article

Most read