ನವರಾತ್ರಿ, ದೀಪಾವಳಿ ಹಬ್ಬ ಹಿನ್ನಲೆ ಬೀದಿ ವ್ಯಾಪಾರಿಗಳಿಗೆ ಕಿರುಕುಳ ನೀಡದಂತೆ NHRC ಸೂಚನೆ

ನವದೆಹಲಿ: ನವರಾತ್ರಿ, ದೀಪಾವಳಿ ಹಾಗೂ ಛಠ್‌ ಪೂಜೆಯಂತಹ ಪ್ರಮುಖ ಹಬ್ಬಗಳ ಹಿನ್ನೆಲೆಯಲ್ಲಿ ಸ್ಥಳೀಯ ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು, ಕುಂಬಾರರು ಹಾಗೂ ಸಣ್ಣ ವ್ಯಾಪಾರಿಗಳ ಉದ್ಯೋಗ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

ಹಬ್ಬದ ಸಂದರ್ಭದಲ್ಲಿ ವಿವಿಧ ನಗರಗಳಲ್ಲಿ ಸ್ಥಳೀಯ ವ್ಯಾಪಾರಿಗಳು ಹಾಗೂ ಬೀದಿ ವ್ಯಾಪಾರಿಗಳನ್ನು ಅನಗತ್ಯವಾಗಿ ತೆರವುಗೊಳಿಸುವುದು, ಅವರ ಸರಕುಗಳನ್ನು ವಶಪಡಿಸಿಕೊಳ್ಳುವುದು, ದಂಡ ವಿಧಿಸುವುದು ಹಾಗೂ ಕಿರುಕುಳ ನೀಡಲಾಗುತ್ತಿದೆ ಎಂಬ ದೂರುಗಳು ಆಯೋಗದ ಗಮನಕ್ಕೆ ಬಂದಿವೆ.

ಕಳೆದ ವರ್ಷದ ಹಬ್ಬದ ಅವಧಿಯಲ್ಲಿಯೂ ಇದೇ ರೀತಿಯ ದೂರುಗಳನ್ನು NHRC ಗಮನಕ್ಕೆ ತೆಗೆದುಕೊಂಡಿತ್ತು. ಆಯೋಗದ ಸದಸ್ಯ ಪ್ರಿಯಾಂಕ್ ಕಾನೂಂಗೊ ನೇತೃತ್ವದ ಪೀಠವು ಸಂಬಂಧಪಟ್ಟ ರಾಜ್ಯಗಳು ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಆರೋಪಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.

ಈ ವರ್ಷವೂ ಹಬ್ಬದ ಸಂದರ್ಭದಲ್ಲಿ ಬೀದಿ ವ್ಯಾಪಾರಿಗಳ ಜೀವನೋಪಾಯ ಹಾಗೂ ಮಾನವ ಹಕ್ಕುಗಳ ರಕ್ಷಣೆಗೆ ಆಯೋಗದ ಮಧ್ಯಪ್ರವೇಶ ಅಗತ್ಯವಿದೆ ಎಂದು ಪರಿಗಣಿಸಿರುವ NHRC, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸದಾಗಿ ನಿರ್ದೇಶನಗಳನ್ನು ನೀಡಿದೆ.

ಅನಗತ್ಯವಾಗಿ ತೆರವುಗೊಳಿಸದಂತೆ ಸೂಚನೆ

ನವರಾತ್ರಿ, ದೀಪಾವಳಿ ಹಾಗೂ ಛಠ್‌ ಪೂಜೆಯ ಸಂದರ್ಭದಲ್ಲಿ ಬೀದಿ ವ್ಯಾಪಾರಿಗಳನ್ನು ಅನಗತ್ಯವಾಗಿ ಸ್ಥಳಾಂತರಿಸಬಾರದು ಅಥವಾ ಅವರ ಜೀವನೋಪಾಯಕ್ಕೆ ಅಡ್ಡಿಪಡಿಸಬಾರದು ಎಂದು NHRC ಸ್ಪಷ್ಟಪಡಿಸಿದೆ.

ಆದರೆ ಅಗ್ನಿ ಸುರಕ್ಷತೆ ಅಥವಾ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಸ್ಥಳವನ್ನು ಖಾಲಿ ಮಾಡಿಸುವುದು ಅನಿವಾರ್ಯವಾದರೆ, ಅಂತಹ ವ್ಯಾಪಾರಿಗಳಿಗೆ ಪರ್ಯಾಯವಾಗಿ ಸೂಕ್ತ ವ್ಯಾಪಾರ ಸ್ಥಳಗಳನ್ನು ಒದಗಿಸಬೇಕು ಎಂದು ಸೂಚಿಸಲಾಗಿದೆ.

ಸರಕು ವಶಪಡಿಸಿಕೊಳ್ಳುವಂತಿಲ್ಲ

ವ್ಯಾಪಾರಿಗಳ ಸರಕುಗಳನ್ನು ಯಾವುದೇ ಕಾರಣವಿಲ್ಲದೆ ಮನಬಂದಂತೆ ವಶಪಡಿಸಿಕೊಳ್ಳಬಾರದು. ಅನಗತ್ಯ ಕ್ರಮಗಳನ್ನು ಕೈಗೊಳ್ಳುವುದನ್ನು ತಪ್ಪಿಸಬೇಕು ಎಂದು ಆಯೋಗ ತಿಳಿಸಿದೆ.

ಅಲ್ಲದೆ, ವ್ಯಾಪಾರಿಗಳಿಂದ ಹಣ ವಸೂಲಿ, ಕಿರುಕುಳ ಅಥವಾ ಅನಗತ್ಯ ಹಸ್ತಕ್ಷೇಪದಂತಹ ದೂರುಗಳು ಬಂದರೆ, ಅವುಗಳನ್ನು ಕಾನೂನು ಪ್ರಕಾರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ.

ಅಧಿಕಾರಿಗಳಿಗೆ ನಿರ್ದೇಶನ

NHRCಯ ಈ ನಿರ್ದೇಶನಗಳನ್ನು ಎಲ್ಲಾ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಪೊಲೀಸರು ಹಾಗೂ ಇತರ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.

ನಿರ್ದೇಶನಗಳ ಪರಿಣಾಮಕಾರಿ ಅನುಷ್ಠಾನಕ್ಕೂ ಕ್ರಮ ಕೈಗೊಳ್ಳಬೇಕು ಎಂದು ಆಯೋಗ ಹೇಳಿದೆ. ಈ ಹಿಂದೆ ಬಾಕಿ ಉಳಿದಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಕೈಗೊಂಡ ಕ್ರಮದ ವರದಿಯನ್ನು ಅಕ್ಟೋಬರ್ 18, 2026ರೊಳಗೆ ಸಲ್ಲಿಸುವಂತೆ NHRC ಸೂಚನೆ ನೀಡಿದೆ.

More articles

Latest article

Most read