ಲಾಡೆನ್‌ ಪಾಕ್‌ ನಲ್ಲಿ ಅಡಗಿದ್ದ ಎನ್ನುವುದನ್ನು ಅಮೆರಿಕ ಮರೆಯಬಾರದು:ಸಂಸದ ಶಶಿ ತರೂರ್‌

ತಿರುವನಂತಪುರ: ಸುಮಾರು 3 ಸಾವಿರ ಅಮಾಯಕ ಜನರನ್ನು ಬಲಿಪಡೆದ 9/11 ದಾಳಿಯ ರೂವಾರಿ ಒಸಮಾ ಬಿನ್ ಲಾಡೆನ್ ಪಾಕಿಸ್ತಾನದ ಸೇನಾ ಶಿಬಿರದ ಬಳಿ ಅಡಗಿಕೊಂಡಿದ್ದ ಎಂಬುದನ್ನು ಅಮೆರಿಕ ಮರೆಯಬಾರದು ಎಂದು ಕಾಂಗ್ರೆಸ್‌ ಮುಖಂಡ ತಿರುವನಂತಪುರ ಲೋಕಸಭಾ ಸದಸ್ಯ ಶಶಿ ತರೂರ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಶ್ವೇತಭವನದಲ್ಲಿ ನಡೆದ ಖಾಸಗಿ ಔತಣಕೂಟದಲ್ಲಿ ಪಾಕಿಸ್ತಾನ ಸೇನೆ ಮುಖ್ಯಸ್ಥ ಅಸೀಮ್ ಮುನೀರ್ ಭಾಗಿಯಾಗಿರುವುದರ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ. ಪಾಕಿಸ್ತಾನದ ಸೇನಾ ಶಿಬಿರದ ಬಳಿ ಲಾಡೆನ್ ಸುರಕ್ಷಿತವಾಗಿ ಅಡಗಿಕೊಂಡಿದ್ದ ಎಂಬುದನ್ನು ಅವರು ಕ್ಷಮಿಸಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಭಯೋತ್ಪಾದಕ ಚಟುವಟಿಕೆಗಳ ವಿರುದ್ಧ ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ನೀಡಲು ಟ್ರಂಪ್ ಅವರು ಈ ಅವಕಾಶವನ್ನು ಬಳಸಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಭಾರತದ ನೆಮ್ಮದಿ ಕೆಡಿಸಲು ಪಾಕಿಸ್ತಾನ ನೆಲದಲ್ಲಿ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದು, ಶಸ್ತ್ರಾಸ್ತ್ರ ಒದಗಿಸುವುದು, ತರಬೇತಿ ನೀಡುವುದನ್ನು ನಿಲ್ಲಿಸುವಂತೆ ಟ್ರಂಪ್‌ ಎಚ್ಚರಿಕೆ ನೀಡಿರುತ್ತಾರೆ ಎಂದು ನಿರೀಕ್ಷಿಸುತ್ತೇನೆ ಎಂದು ಹೇಳಿದ್ದಾರೆ.

More articles

Latest article

Most read