ಬಿಜೆಪಿ ರವಿ ಅವಾಚ್ಯ ಪದ ಬಳಸಿದ್ದು ಸತ್ಯ: ಸಿಎಂ ಸಿದ್ದರಾಮಯ್ಯ

Most read

ಮಂಡ್ಯ: ಸಾಮಾನ್ಯವಾಗಿ ಹೆಣ್ಣುಮಕ್ಕಳು ಇಂತಹ ಆರೋಪಗಳ ಬಗ್ಗೆ  ಸುಳ್ಳು ದೂರು ಕೊಡಲು ಸಾಧ್ಯವಿಲ್ಲ. ಅವಾಚ್ಯ ಪದ ಬಳಕೆ ಆರೋಪ ಸುಳ್ಳಾಗಿದ್ದರೆ  ಸಿ.ಟಿ.ರವಿಯವರ ಬಂಧನವೇಕಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು. ಸಿ.ಟಿ.ರವಿ ಬಂಧನ ವಿರೋಧಿಸಿ ಬಿಜೆಪಿರು ಪ್ರತಿಭಟನೆ ನಡೆಸಲಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

 ಹೆಣ್ಣುಮಕ್ಕಳಿಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ಅವರು ಬೆಂಬಲಿಸುತ್ತಿದ್ದಾರೆ. ಸಿ.ಟಿ.ರವಿಯವರು ಕೀಳುಭಾಷೆ ಬಳಸಿದ್ದು ಸುಳ್ಳಾದರೆ, ಅವರ ಬಂಧನವೇಕಾಯಿತು ? ಸಾಮಾನ್ಯವಾಗಿ ಇಂತಹ ಆರೋಪಗಳ ಬಗ್ಗೆ  ಹೆಣ್ಣುಮಕ್ಕಳು ಸುಳ್ಳು ದೂರು ಕೊಡಲು ಸಾಧ್ಯವಿಲ್ಲ. ರವಿ ಅವಾಚ್ಯ ಪದ ಏಕೆ ಬಳಸಿದರೆಂದು ನನಗೆ ತಿಳಿದಿಲ್ಲ. ಇದೊಂದು ಅಪರಾಧ ಎಂದರು.

, ಸಿ.ಟಿ.ರವಿ ತಾನು ‘ಪ್ರಸ್ಟ್ರೇಷನ್’ ಪದ ಬಳಸಿರುವುದಾಗಿ ತಿಳಿಸಿದ್ದಾರೆ . ಆದರೆ   ಅವಾಚ್ಯ ಪದ ಬಳಸಿರುವುದು ನಿಜವೆಂದು ಸಚಿವರು ಹೇಳಿದ್ದಾರೆ. ಪದಬಳಕೆಯನ್ನು ಕೇಳಿರುವುದಾಗಿ ಇತರ ಸದಸ್ಯರೂ ಹೇಳಿದ್ದಾರೆ. ಸಭಾಪತಿಯವರು ಪೀಠದಿಂದ ಹೊರನಡೆದ ನಂತರ ನಡೆದಿರುವ ಘಟನೆ ಬಗ್ಗೆ ಆಡಿಯೋ ಮತ್ತು ವಿಡಿಯೋ ಇದೆ ಎಂದೂ ಹಲವರು ಹೇಳುತ್ತಿದ್ದು , ಪದಬಳಕೆಯಾಗಿರುವುದು ಸತ್ಯ ಎಂದರು.

ಸಿಟಿ ರವಿಯವರು ತನಗೆ ಜೀವಬೆದರಿಕೆಯಿದ್ದು, ಅದಕ್ಕೆ ಸರ್ಕಾರವೇ ಹೊಣೆ ಎಂದು ಹೇಳಿಕೊಂಡಿರುವ ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿ, ಕಾನೂನಿನ ಕ್ರಮ ಮಾಡಲೇಬೇಕಾಗುತ್ತದೆ.  ಬೆಳಗಾವಿಯಲ್ಲಿ ಜನರ ಆಕ್ರೋಶದಿಂದ ಸಿ.ಟಿ.ರವಿಯವರನ್ನು ರಕ್ಷಿಸಲು ಖಾನಾಪುರಕ್ಕೆ ಅವರನ್ನು ಕರೆತರಲಾಗಿತ್ತು ಎಂದರು.

ಮಂಡ್ಯದಲ್ಲಿ ನಡೆಯುತ್ತಿರುವ 87 ನೇ ಅಖಿಲ ಭಾರತ ಸಾಹಿತ್ಯ ಸಮ್ಮೆಳನದ ಉದ್್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದೇನೆ. ಅಪ್ಪಟ ಕನ್ನಡ ನೆಲ ಪ್ರದೇಶ ಮಂಡ್ಯ. ಮಂಡ್ಯಕ್ಕೆ ಬರುವ ಪರಭಾಷಿಕರು ಸಹ ಕನ್ನಡವನ್ನು ಕಲಿಯುತ್ತಾರೆ.  ಕನ್ನಡ ನಾಡಿನ ಭಾಷೆ ,ರಾಜ್ಯಭಾಷೆ ಆಗಿದೆ ಎಂದರು.

More articles

Latest article