ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಹೌದು, ಪತ್ನಿ ಸಾಯಿರಾ ಪತಿಯಿಂದ ದೂರ ಇರುವ ಬಗ್ಗೆ ಘೋಷಣೆ ಮಾಡಿದ್ದು, ಅವರ ವಕೀಲಕರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಪತಿ ಹಾಗೂ ಪತ್ನಿ ನಡುವೆ ಪ್ರೀತಿ ಇದ್ದರೂ ಇಬ್ಬರ ನಡುವೆ ಸುಧಾರಿಸಲಾಗದಷ್ಟು ಬಿರುಕು ಮೂಡಿದೆ. ಹೀಗಾಗಿ, ರೆಹಮಾನ್ ಅವರಿಂದ ದೂರ ಇರಲು ನನ್ನ ಕಕ್ಷಿದಾರರರಾಗಿರು ಸಾಯಿರಾ ಬಯಸಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಒತ್ತಡ ಮತ್ತು ತೊಂದರೆಗಳು ತಮ್ಮ ನಡುವೆ ಸರಿಪಡಿಸಲಾಗದ ಅಂತರ ಸೃಷ್ಟಿಸಿವೆ ಎಂದು ವಿಚ್ಛೇದನ ಪಡೆಯಲು ನಿರ್ಧರಿಸಲಾಗಿದೆ. ಈ ಸವಾಲಿನ ಸಮಯದಲ್ಲಿ ಸಾರ್ವಜನಿಕರಿಂದ ಗೌಪ್ಯತೆ ಮತ್ತು ತಿಳುವಳಿಕೆಗಾಗಿ ತಾನು ಮನವಿ ಮಾಡಿದ್ದೇನೆ ಎಂದು ಸೈರಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿ ಆಗಿದೆ.
ಕುಟುಂಬ ಸಮ್ಮುಖದಲ್ಲಿ 1995 ಮಾ.12ರಂದು ಎ.ಆರ್ ರಹಮಾನ್ ಮತ್ತು ಸಾಯಿರಾ ಇಬ್ಬರ ವಿವಾಹವಾಗಿತ್ತು. ಅವರಿಗೆ ಖತೀಜಾ, ರಹೀಮಾ, ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ.