ಅಮೆರಿಕದ ಅತ್ಯಂತ ಹಿರಿಯ ಅಧ್ಯಕ್ಷ ಎಂಬ ಹಿರಿಮೆಗೆ ಡೊನಾಲ್ಡ್ ಟ್ರಂಪ್ ಪಾತ್ರರಾಗಿದ್ದಾರೆ. ಇವರ ಈಗಿನ ವಯಸ್ಸು78 ವರ್ಷ. ಅಮೆರಿಕದ 47ನೇ ಅಧ್ಯಕ್ಷರಾಗಿರುವ ಇವರು ಜೂನ್ 4, 1946ರಲ್ಲಿ ಜನಿಸಿದರು. ಅಧ್ಯಕ್ಷ ಪಟ್ಟ ಅಲಂಕರಿಸುವ 20, ಜನವರಿ 2025ಕ್ಕೆ ಇವರ ವಯಸ್ಸು78 ವರ್ಷ 7 ತಿಂಗಳಾಗಲಿದೆ.
ಈ ಹಿಂದೆ ಜೋ ಬೈಡನ್ ಅಧ್ಯಕ್ಷ ಪಟ್ಟಕ್ಕೆ ಏರಿದಾಗ ಅವರ ವಯಸ್ಸು78 ವರ್ಷ 2 ತಿಂಗಳಾಗಿತ್ತು. ಚುನಾವಣಾ ಪ್ರಚಾರದ ಸಂದರ್ಭದಲಿ ಎಲ್ಲರೂ ಇವರ ವಯಸ್ಸನ್ನು ಹಿಡಿದು ಟೀಕಿಸುತ್ತಿದ್ದರು. ಆದರೆ ಟ್ರಂಪ್ ಅವರು ನಾನು ಸದೃಢನಾಗಿದ್ದೇನೆ. ನನಗೆ ಶಕ್ತಿ ಇದೆ ಎಂದು ಬಲವಾಗಿ ಪ್ರತಿಪಾದಿಸುತಿದ್ದರು. ನನಗೆ ಇತರರಿಗಿಂತ ಹೆಚ್ಚು ಶಕ್ತಿ ಇದೆ ಮತ್ತು ನಾನು ಅತ್ಯುತ್ತಮ ಎಂದು ಹೇಳಿಕೊಳ್ಳುತ್ತಿದ್ದರು.
ಟ್ರಂಪ್ ಪತ್ನಿ ಮಲೆನಿಯಾ. ಇಬ್ಬರಿಗೂ 24 ವರ್ಷಗಳ ಅಂತರವಿದೆ. ಇವರಿಗೆ ಬ್ಯಾರನ್ ಎಂಬ ಮಗನಿದ್ದಾನೆ. ಮೆಲಾನಿಜಾ ಕನಾವ್ ಇವರ ಮೊದಲ ಹೆಸರು. ಇವರು ಸ್ಲೊವೆನಿಯಾದಲ್ಲಿ ಜನಿಸಿದರು. 16ನೇ ವಯಸ್ಸಿಗೆ ಫ್ಯಾಷನ್ ಜಗತ್ತು ಪ್ರವೇಶ ಮಾಡೆಲ್ ಆಗಿ ಗಮನ ಸೆಳೆದಿದ್ದರು. ಟ್ರಂಪ್ ಮತ್ತು ಮಲೆನಿಯಾ ಇಬ್ಬರಿಗೂ 1998ರಲ್ಲಿ ಇವರಿಬ್ಬರ ಪರಿಚಯವಾಗುತ್ತದೆ. 2005 ರಲ್ಲಿ ಮದುವೆಯಾಗುತ್ತಾರೆ. ಈ ಹಿಂದೆ ಟ್ರಂಪ್ ಅಧ್ಯಕ್ಷರಾಗಿದ್ದ 2017ರಿಂದ 2021ರ ಅವಧಿಯಲ್ಲಿ ಇವರು ಪ್ರಥಮ ಮಹಿಳೆಯಾಗಿದ್ದರು.