ಸದ್ಯಕ್ಕೆ ಸಿಎಂ ಸೀಟು ಖಾಲಿ ಇಲ್ಲ, ಬದಲಾವಣೆ ಪ್ರಶ್ನೆಯೇ ಬರಲ್ಲ: ಲಕ್ಷ್ಮಣ ಸವದಿ

Most read

ಸಿಎಂ ಸೀಟು ಸಧ್ಯಕ್ಕೆ ಖಾಲಿ ಇಲ್ಲ. ಸಿಎಂ ಬದಲಾವಣೆ ಪ್ರಶ್ನೆಯೇ ಬರಲ್ಲ. ಸಿಎಂ ಸಿದ್ದರಾಮಯ್ಯ ಅವರು ಮೇಲಿನ ಆರೋಪ ನಿರಾಧಾರ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಲಿತರು ಸಿಎಂ ಆಗಬೇಕು ಎನ್ನುವ ವಿಚಾರದ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವಕಾಶವಿದೆ. ಯಾರ ಬೇಕಾದರೂ ಸಿಎಂ ಆಗಬಹುದು. ಸಿಎಂ ಆಗಬಾರದು ಅಂತ ಸಂವಿಧಾನದಲ್ಲಿ ಬರೆದಿಲ್ಲ. ಸಂವಿಧಾನದಲ್ಲಿ ಎಲ್ಲರಿಗೂ ಸಿಎಂ ಆಗುವ ಅವಕಾಶವಿದೆ ಅಂತ ಇದೆ. ಮತದಾರರಿಗೂ ಗದ್ದುಗೆಗೆ ಹೋಗುವ ಅವಕಾಶ ಇದೆ. ಸಂದರ್ಭಕ್ಕೆ ತಕ್ಕಂತೆ ಬದಲಾವಣೆ ಆಗುತ್ತವೆ ಚರ್ಚೆ ಮಾಡುವುದು ಅನಾವಶ್ಯಕ ಎಂದು ಶಾಸಕ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

More articles

Latest article