ವಿಜಯೇಂದ್ರಗೆ ಐಡಿಯಾಲಜಿ ಇಲ್ಲ: ರಮೇಶ್ ಜಾರಕಿಹೊಳಿ ವಾಗ್ದಾಳಿ

Most read

ಚಿಕ್ಕೋಡಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಯ ಬಿ.ವೈ.ವಿಜಯೇಂದ್ರ ವಿರುದ್ಧ ಭಿನ್ನಮತೀಯ ನಾಯಕರು ವಾಗ್ದಾಳಿ ಮುಂದುವರೆಸಿದ್ದು, ರಮೇಶ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕೋಡಿಯಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಬಿ.ವೈ. ವಿಜಯೇಂದ್ರಗೆ ಐಡಿಯಾಲಜಿ ಇಲ್ಲ ಎಂದು ಟೀಕಿಸಿದ್ದಾರೆ.

ವಿಜಯೇಂದ್ರ ನಮ್ಮ ಪಕ್ಷದ ನಾಯಕರಲ್ಲ. ಯಡಿಯೂರಪ್ಪ ಬಗ್ಗೆ ತುಂಬಾ ಗೌರವ ಇದೆ. ನಾವು ಯಡಿಯೂರಪ್ಪ ವಿರೋಧಿಯಲ್ಲ. ಆದ್ರೆ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮುಂದುವರೆಯುವುದಕ್ಕೆ ನಮ್ಮ ವಿರೋಧ ಇದೆ ಎಂದು ಅವರು ಹೇಳಿದರು.

ಬಿಜೆಪಿಯಲ್ಲಿ ವಿಜಯೇಂದ್ರ ಜ್ಯೂನಿಯರ್, ಅವರಿಗೆ ಐಡಿಯಾಲಜಿ ಇಲ್ಲ ಎಂದು ಅವರು ಹೇಳಿದರು.

More articles

Latest article