ಗ್ಯಾರಂಟಿ ಯೋಜನೆಗಳು ದುರುಪಯೋಗ ಆಗಬಾರದು: ಮಧು ಬಂಗಾರಪ್ಪ

ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡುವ ವಿಚಾರದ ಬಗ್ಗೆ ನಾನು ಮಾತನಾಡೊಲ್ಲ. ಯೋಜನೆಗಳು ದುರುಪಯೋಗ ಆಗಬಾರದು ಅಷ್ಟೇ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡುವ ವಿಚಾರ ಸಂಬಂಧ ಮಾಧ್ಯಮಗಳು ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕೆಲವರು ಎರಡು ಮೂರು ಕಡೆ ಅನುಕೂಲ ಪಡೆಯುತ್ತಿದ್ದಾರೆ. ಆ ರೀತಿಯ ದುರುಪಯೋಗ ಆಗಬಾರದು. ಪರಿಷ್ಕರಣೆ ಬಗ್ಗೆ ಸಚಿವರು ಮಾತನಾಡಿದ್ದರೆ ಅದು ಅವರ ವೈಯಕ್ತಿಕ ಅಭಿಪ್ರಾಯ. ನಾನು ಗ್ಯಾರಂಟಿ ಯೋಜನೆಗಳು ದುರುಪಯೋಗ ಆಗಬಾರದು ಎಂದು ಮಾತ್ರ ಹೇಳುತ್ತೇನೆ. ದೆಹಲಿ ಮಟ್ಟದಲ್ಲಿ ಪರಿಷ್ಕರಣೆ ಕುರಿತು ಏನೇ ತೀರ್ಮಾನ ಮಾಡಿದ್ರೂ ನಮ್ಮ ಸರ್ಕಾರ ಮಾಡುತ್ತದೆ ಎಂದು ಹೇಳಿದ್ದಾರೆ.

More articles

Latest article

Most read