ಯುಎಸ್ ಮೂಲದ ಹಿಂಡೆನ್ಬರ್ಗ್ ರಿಸರ್ಚ್ ಸಂಸ್ಥೆ, ಎಕ್ಸ್ನಲ್ಲಿ ಟ್ವೀಟ್ವೊಂದನ್ನು ಹಂಚಿಕೊಂಡಿದೆ. Something big soon India (ಸದ್ಯದಲ್ಲಿಯೇ ಭಾರತದಲ್ಲಿ ಮತ್ತೊಂದು ದೊಡ್ಡದು ನಡೆಯಲಿದೆ) ಎಂಬ ಸೂಚನೆಯೊಂದನ್ನು ನೀಡಿದೆ.
ಇನ್ನು ಈ ಟ್ವೀಟ್ ಎಲ್ಲ ಕಡೆ ಭಾರೀ ವೈರಲ್ ಆಗುತ್ತಿದ್ದು, ಚರ್ಚೆ ಕೂಡ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವಾಗಿ ಟ್ರೆಂಡ್ ಆಗುತ್ತಿದೆ. ಹಿಂಡೆನ್ಬರ್ಗ್ ಈ ಹಿಂದೆ ಭಾರತ ಮೇಲೆ ಇಂತಹ ಸಂಶೋಧನೆಯನ್ನು ಮಾಡಿ ಸುದ್ದಿಯಾಗಿತ್ತು. ಇದೀಗ ಮತ್ತೆ ಭಾರತಕ್ಕೆ ಏನೋ ಕಾದಿದೆ ಎಂಬುದರ ಕುರಿತು ಪೋಸ್ಟ್ ಮಾಡಿದೆ.
ಈ ಹಿಂದೆ ಭಾರತದ ಅದಾನಿ ಗ್ರೂಪ್ ಕಂಪನಿಯನ್ನು ಟಾರ್ಗೆಟ್ ಮಾಡಿ ಒಂದು ಸಂಶೋಧನೆಯ ವರದಿಯನ್ನು ನೀಡಿತ್ತು. ಈ ಬಗ್ಗೆ ಸಂಸತ್ ಸಭೆಯಲ್ಲೂ ಭಾರೀ ಚರ್ಚೆಗೆ ಕಾರಣವಾಗಿತ್ತು. ನಂತರ ಅದಾನಿ ಗ್ರೂಪ್ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡಿತ್ತು.
ಹಿಂಡೆನ್ಬರ್ಗ್ ವರದಿಯಲ್ಲಿ ಮಾಡಿದ ಎಲ್ಲಾ ಆರೋಪಗಳನ್ನು ಅದಾನಿ ಗ್ರೂಪ್ ನಿರಾಕರಿಸಿದೆ. ಆಧಾರರಹಿತವಾದ ಆರೋಪಗಳನ್ನು ಮಾಡಲಾಗಿದೆ ಎಂದು ಗೌತಮ್ ಅದಾನಿ ಹೇಳಿತ್ತು.