ಮಾಲೂರು ಶಾಸಕ ಕೆ ವೈ ನಂಜೇಗೈಡ ಅವರ ಮೇಲೆ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಹಾಲು ಒಕ್ಕೂಟ (ಕೋಚಿಮುಲ್) ನೇಮಕಾತಿ ಅಕ್ರಮ ಆರೋಪ ಕೇಳಿ ಬಂದ ಬೆನ್ನಲ್ಲೇ ಕೋಚಿಮುಲ್ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್ ಶಾಸಕ ಕೆ ವೈ ನಂಜೇಗೈಡ ಮತ್ತು ಅವರ ಆಪ್ತರ ಮನೆಗಳ ಮೇಲೆ ಮೇಲೆ ಸೋಮವಾರ ಬೆಳಗ್ಗೆ ಜಾರಿ ನಿರ್ದೇಶನಾಲಯ( ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶಾಸಕ ನಂಜೇಗೌಡ ಅವರ ಆಪ್ತ ಸಹಾಯಕರಾಗಿರುವ ಹರೀಶ್ ಅವರ ಮಾಲೂರು ತಾಲೂಕಿನ ಕೊಮ್ಮನಹಳ್ಳಿಯ ಮನೆ, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ(MD) ಗೋಪಾಲ್ ಮೂರ್ತಿ ಅವರ ಮನೆ, ಕೋಚಿಮುಲ್ ಆಡಳಿತಾತ್ಮಕ ನಿರ್ದೇಶಕ ನಾಗೇಶ್ ಅವರ ಮನೆ, ಬೆಂಗಳೂರು ರಾಮಮೂರ್ತಿ ನಗರದಲ್ಲಿರುವ ಮನೆ, ಮಾಲೂರು ಕೋಚಿಮುಲ್ ಕಚೇರಿ, ಶಾಸಕರ ಬೆಂಗಳೂರಿನ ನಿವಾಸ ಸೇರಿ ಒಟ್ಟು 15ಕ್ಕೂ ಅಧಿಕ ಕಡೆ ಜಾರಿ ನಿರ್ದೇಶಾನಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಕೋಚಿಮುಲ್ ನೇಮಕಾತಿ ವಿಚಾರದಲ್ಲಿ ಸಾಕಷ್ಟು ಅವ್ಯವಹಾರದ ಸದ್ದು ಮಾಡಿತ್ತು. ನೇಮಕಾತಿ ವೇಳೆ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿರುವ ಅರೋಪ ಕೇಳಿ ಬಂದಿತ್ತು.
ಅಂತಿಮ ನೇಮಕಾತಿ ಆದೇಶ ಪಟ್ಟಿ ಪ್ರಕಟವಾಗುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ನೇಮಕಾತಿ ಪಟ್ಟಿ ಹರಿದಾಡಿತ್ತು. ಅಭ್ಯರ್ಥಿಗಳ ಹೆಸರಿನ ಮುಂದೆ ಶಿಪಾರಸು ಮಾಡಿದವರ ಹೆಸರೂ ಇದ್ದಿದ್ದು ತೀವ್ರ ಅಸಾಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆವೆಯಲ್ಲಿ ಇಡಿ ದಾಳಿ ನಡೆದಿರಬಹುದು ಎಂದು ಹೇಳಲಾಗಿದೆ. ಆದರೆ ಸರಿಯಾದ ಕಾರಣ ಏನು ಎಂದು ಈವರೆಗೂ ಮಾಹಿತಿ ಲಭಿಸಿಲ್ಲ.