ಐಶ್ವರ್ಯಾ ರೈ ಮಗಳ ಕೆಲಸಕ್ಕೆ ಸೈ ಎಂದ ನೆಟ್ಟಿಗರು: ಅಮ್ಮನಿಗೆ ಮಾಡಿದ ಸಹಾಯವೇನು ಗೊತ್ತಾ..?

Most read

ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿ ಸಾಕಷ್ಟು ಬಾರಿ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ಅದೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅವರ ಮಗಳು ಆರಾದ್ಯ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಮೇ 17ರಿಂದ 25ರವರೆಗೆ ಕೇನ್ಸ್ 77ನೇ ವಾರ್ಷಿಕೋತ್ಸವ ನಡೆಯುತ್ತಿದೆ. ಇದರಲ್ಲಿ ಭಾಗಿಯಾಗಲು ಐಶ್ವರ್ಯಾ ರೈ ಫ್ರಾನ್ಸ್ ಗೆ ತೆರಳಿದ್ದಾರೆ. ತಮ್ಮ ಹೊಸ ಲುಕ್ ನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಮಗಳು ಆರಾಧ್ಯ ಬಚ್ಚನ್ ಕೂಡ ಗಮ‌ನ ಸೆಳೆದಿದ್ದಾರೆ.

ಐಶ್ ಈ ಬಾರಿ ವಿಭಿನ್ನವಾದ, ಆಕರ್ಷಣೆ ಮಾಡುವಂತಹ ಗೌನ್ ತೊಟ್ಟಿದ್ದಾರೆ. ಈ ಗೌನ್ ನಲ್ಲಿ ಚಿನ್ನದ ಹೂಗಳ ಡಿಸೈನ್ ಇದ್ದು, ಎಲ್ಲರನ್ನು ಆಕರ್ಷಿಸುತ್ತಿದೆ. ಈ ಗೌನ್ ಅನ್ನು ಪಲ್ಗುಣಿ ಹಾಗೂ ಶೇನ್ ವಿನ್ಯಾಸಗೊಳಿಸಿದ್ದಾರೆ. ಇವರ ಡ್ರೆಸ್, ಜ್ಯುವೆಲ್ಲರಿ ಎಲ್ಲವು ರೆಟ್ರೋ ಫೀಲ್ ಕೊಡುತ್ತಿದೆ. ಈ ಕೇನ್ಸ್ ಉತ್ಸವದಲ್ಲಿ ಮಗಳು ಆರಾಧ್ಯಳನ್ನು ಕರೆದುಕೊಂಡು ಬಂದಿದ್ದಾರೆ. ಈ ಉತ್ಸವದಲ್ಲಿ ಮಗಳ ನಡವಳಿಕೆಯೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಐಶ್ವರ್ಯಾ ರೈಗೆ ಕೈ ಗಾಯವಾಗಿದೆ. ಇದು ನೋವಿದ್ದರು ಕೇನ್ಸ್ ಉತ್ಸವದಲ್ಲಿ ಐಶ್ವರ್ಯಾ ಭಾಗಿಯಾಗಿದ್ದಾರೆ. ಸಿಕ್ಕಾಪಟ್ಟೆ ದೊಡ್ಡ ಗೌನ್, ತೂಕವಿರುವ ಗೌನ್ ಇದಾಗಿದ್ದು, ಅದನ್ನು ಹಿಡಿಯಲು ಮಗಳು ಆರಾಧ್ಯ ಸಹಾಯ ಮಾಡಿದ್ದಾರೆ. ರೆಡ್ ಕಾರ್ಪೆಟ್ ತನಕ ಹಿಡಿದುಕೊಂಡು ಬಂದಿದ್ದಾರೆ. ಅಮ್ಮನಿಗೆ ಕ್ಯಾಟ್ ವಾಕ್ ಮಾಡಲು ಸಹಾಯ ಮಾಡಿದ್ದಾರೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆರಾಧ್ಯ ಬಚ್ಚನ್ ಗೆ ಉಘೆ ಉಘೆ ಎಂದಿದ್ದಾರೆ. ಮಕ್ಕಳು ಹೀಗಿರಬೇಕೆಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ ಆರಾಧ್ಯರ ಪ್ರಬುದ್ಧತೆಗೆ ಶಬ್ಬಾಶ್ ಹೇಳಿದ್ದಾರೆ.

More articles

Latest article