ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಕಂದಕಕ್ಕೆ ಉರುಳಿದ ವಾಹನ ; 8 ಮಂದಿ ಸಾವು, ಹಲವರಿಗೆ ಗಾಯ

ಕೋಟಾ: ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿರುವ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಹನ್ನೆರಡಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಈ ಘಟನೆಯು ಬೆಳಿಗ್ಗೆ 7 ಗಂಟೆ ಸುಮಾರಿಗೆ ಸೀಮ್ಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಧ್ಯಪ್ರದೇಶದಿಂದ ಜೈಪುರಕ್ಕೆ ತೆರಳುತ್ತಿದ್ದ ‘ಟೆಂಪೋ ಟ್ರಾವೆಲರ್’ ವಾಹನವೊಂದು ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ, ಕಲ್ವರ್ಟ್‌ನಿಂದ ಸುಮಾರು 20 ಅಡಿ ಕೆಳಗಿದ್ದ ಮಳೆನೀರಿನ ಕಾಲುವೆಗೆ ಬಿದ್ದಿದೆ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಜಖಂಗೊಂಡ ವಾಹನದಿಂದ ಗಾಯಾಳುಗಳನ್ನು ಮತ್ತು ಮೃತದೇಹಗಳನ್ನು ಹೊರತೆಗೆದರು. ಗಾಯಗೊಂಡವರನ್ನು ಮೆಡಿಕಲ್ ಕಾಲೇಜ್ ನ್ಯೂ ಹಾಸ್ಪಿಟಲ್ ಮತ್ತು ಎಂಬಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೀಮ್ಲಿಯಾ ಪೊಲೀಸ್ ಠಾಣೆಯ ಉಸ್ತುವಾರಿ ನಂದ್ ಸಿಂಗ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ವಾಹನವು ಕರಾಡಿಯಾ ಟೋಲ್ ಪ್ಲಾಜಾವನ್ನು ದಾಟಿ ಸುಲ್ತಾನ್‌ಪುರದ ಕಡೆಗೆ ಸಾಗುತ್ತಿದ್ದಾಗ, ಚಾಲಕನಿಗೆ ನಿದ್ರೆ ಮಂಪರು ಆವರಿಸಿ ವಾಹನದ ಮೇಲಿನ ನಿಯಂತ್ರಣ ತಪ್ಪಿರಬಹುದು ಎಂದು ತಿಳಿಸಿದ್ದಾರೆ. ವಾಹನವು ಅತಿ ವೇಗದಲ್ಲಿದ್ದ ಕಾರಣ ಡಿವೈಡರ್‌ಗೆ ಡಿಕ್ಕಿ ಹೊಡೆದು, ಕಲ್ವರ್ಟ್‌ನ ಮಧ್ಯಭಾಗದಿಂದ ನೇರವಾಗಿ ಕಾಲುವೆಯೊಳಗೆ ಬಿದ್ದಿದೆ ಎಂದುವಿವರಿಸಿದ್ದಾರೆ.

More articles

Latest article

Most read