ಮಹಿಳೆಯಿಂದ ಮೋಸ : ಕೋರ್ಟ್ ಮೆಟ್ಟಿಲೇರಿದ ಜ್ಯೂ. NTR..!

Most read

ಎಷ್ಟೋ ಸಲ ಗೊತ್ತಿದ್ದು ಗೊತ್ತಿದ್ದು ತಪ್ಪು ಮಾಡುತ್ತೇವೆ.. ವಿದ್ಯಾವಂತರಾದರೂ ದಡ್ಡರ ಥರ ಮೋಸ ಹೋಗ್ತೀವಿ. ಇದು ಎಷ್ಟೋ ಸಲ ಸರ್ವೇ ಸಾಮಾನ್ಯವಾದ ಸಂಗತಿಯಾಗಿರುತ್ತದೆ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಜ್ಯೂ. NTR ಆಸ್ತಿಯೊಂದನ್ನು ಖರೀದಿಸಿ, ಈಗ ಅದರಿಂದ ಮೋಸ ಹೋಗಿರುವುದು ತಿಳಿದು, ಕೋರ್ಟ್ ಮೊರೆ ಹೋಗಿದ್ದಾರೆ.

ಜ್ಯೂ. NTR, ಆರ್ ಆರ್ ಆರ್ ಸಿನಿಮಾ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದವರು. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡವರು. ಈ ಸಿನಿಮಾದಲ್ಲಿ ಖ್ಯಾತಿ ಪಡೆದ ಮೇಲೆ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ. ಜೊತೆಗೆ ಬೇರೆ ಬೇರೆ ಪ್ರಾಪರ್ಟಿ ಮೇಲೆ ಹಣ ಹೂಡಿಕೆ ಮಾಡುವ ಮೂಲಕ ಉಳಿತಾಯವನ್ನು ಮಾಡುತ್ತಿದ್ದಾರೆ. ಆದ್ರೆ 2003ರಲ್ಲಿ ಜ್ಯುಬಿಲಿ ಹಿಲ್ಸ್ ಪ್ರದೇಶದಲ್ಲಿ ಒಂದು ಸೈಟ್ ಖರೀದಿ ಮಾಡಿದ್ದರು. ಆ ಸೈಟ್ ವಿಚಾರಕ್ಕೆ ಈಗ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಸಂಕು ಗೀತಾ ಎಂಬುವವರಿಂದ 680 ಚದುರ ಗಜ ಭೂಮಿ ಖರೀದಿಸಿದ್ದರು. ಆದರೆ ಆ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಲವು ಬ್ಯಾಂಕ್ ಗಳು ಮುಂದಾಗಿವೆ. ಆ ಮಹಿಳೆ ನಕಲಿ ದಾಖಲೆಯನ್ನು ನೀಡಿ, ಜ್ಯೂ. ಎನ್ ಟಿ ಆರ್ ಗೆ ಭೂಮಿ ಮಾರಾಟ ಮಾಡಿದ್ದಾಳೆ. ಆ ಜಾಗವನ್ನು ಶ್ಯೂರಿಟಿಯಾಗಿಟ್ಟು ಹಲವು ಬ್ಯಾಂಕ್ ಗಳಲ್ಲಿ ಆ ಮಹಿಳೆ ಸಾಲ ಪಡೆದಿದ್ದಾಳೆ. ಸಾಲ ಇತ್ಯರ್ಥವಾಗದ ಕಾರಣ ಸಾಲ ಕೊಟ್ಟ ಬ್ಯಾಂಕ್ ಗಳು ಸಾಲ ವಸೂಲಾತಿ ನ್ಯಾಯಮಂಡಳಿ ಮೊರೆ ಹೋಗಿದ್ದವು. ಇದರೊಂದಿಗೆ ನ್ಯಾಯಾಧೀಕರಣವು ಬ್ಯಾಂಕ್ ಗಳಿಗೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಅವಕಾಶ ನೀಡಿತ್ತು. ಹಲವು ವರ್ಷಗಳಿಂದ ಈ ವಿವಾದ ಬಗೆ ಹರಿದಿಲ್ಲ. ಹೀಗಾಗಿ ಈ ಕೇಸ್ ಈಗ ಜ್ಯೂ.ಎನ್‌ಟಿಆರ್ ಗೆ ಸಂಕಷ್ಟ ತಂದೊಡ್ಡಿದ್ದು, ಗೀತಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.

More articles

Latest article