ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ಆರೋಪ; ಚುನಾವಣಾ ಆಯೋಗಕ್ಕೆ ಕೆಎಸ್​​ ಈಶ್ವರಪ್ಪ ದೂರು

Most read

ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ, ಪೆನ್​ಡ್ರೈವ್ ಸಮೇತ ಅಕ್ರಮದ ಕುರಿತು ಇಂದು(ಮೇ.14) ಬೆಂಗಳೂರಿನ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ಖುದ್ದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ​ ದೂರು ನೀಡಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ನನ್ನನ್ನು ಬಿಜೆಪಿಯಿಂದ ತಾತ್ಕಾಲಿಕವಾಗಿ ಹೊರ ಹಾಕಿದ್ದಾರೆ. ಈ ಹಿಂದೆ ಜಗದೀಶ್ ಶೆಟ್ಟರ್​​ ಅವರನ್ನು ಆರು ವರ್ಷ ಹೊರ ಹಾಕಿದ್ದರು. ಯಡಿಯೂರಪ್ಪ ಹೋಗಿ ಕಾಲು ಹಿಡಿದು ಮತ್ತೆ ಕರೆತಂದರು. ನಾನು ಈ ಅಮಾನತನ್ನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ನಾನು ಚುನಾವಣೆ ಗೆಲ್ಲುತ್ತೇನೆ, ಮೋದಿ ಪರ ಕೈ ಎತ್ತುತ್ತೇನೆ ಎಂದು ಹೇಳಿದರು.

More articles

Latest article