ರೇವಣ್ಣ ವಿರುದ್ದ ಕಿಡ್ನ್ಯಾಪ್‌  ಕೇಸಲ್ಲಿ ತಮ್ಮ ಹೆಸರು  ಎಳೆತಂದಿದ್ದಕ್ಕೆ ಶಾಸಕ ರವಿಶಂಕರ್ ಕಿಡಿಕಿಡಿ

Most read

ಬೆಂಗಳೂರು: ಸಂಸದ, NDA ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿರುವುದಾಗಿ ದೂರಿರುವ ಸಂತ್ರಸ್ಥೆಯ ಕಿಡ್ನಾಪ್ ಪ್ರಕರಣದಲ್ಲಿ ವಿನಾಕಾರಣ ತಮ್ಮ ಹೆಸರು ಎಳೆದು ತಂದಿರುವುದಕ್ಕೆ ಕೆ.ಆರ್.ನಗರ ಶಾಸಕ ಡಿ. ರವಿಶಂಕರ್ ಕಿಡಿಕಾರಿದ್ದಾರೆ.

 ಕಿಡ್ನ್ಯಾಪ್‌ ಕೇಸ್‌ ಗೂ ನನಗೂ ಯಾವುದೇ ಸಂಬಂಧವಿಲ್ಲ. ವಿನಾಕರಣ ನನ್ನ ಹೆಸರನ್ನು ಎಳೆದು ತರುತ್ತಿದ್ದಾರೆ. ನನ್ನ ಹೆಸರು ಎಳೆತಂದವರ ಮೇಲೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಅವರು ಗುಡುಗಿದ್ದಾರೆ.

ಮೇ 2ರಂದು ನಾನು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದೆ. ಆಗಿರುವ ಬೆಳವಣಿಗೆಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‌ದೂರು ನೀಡಿದ ವ್ಯಕ್ತಿ, ಸಂತ್ರಸ್ತೆ ನನಗೆ ಪರಿಚಯವೇ ಇಲ್ಲ. ಅವರ ಜತೆ ನೇರವಾಗಿ ಅಥವಾ ಕರೆ ಮಾಡಿಯೂ ಮಾತಾಡಿಲ್ಲ. ವಿನಾಕರಣ ನನ್ನ ಹೆಸರು ತಂದು ನೋವುಂಟು ಮಾಡಿದ್ದಾರೆ. ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ರವಿಶಂಕರ್ ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ‌.

More articles

Latest article