80 ಮಿ.ಮೀ ಮಳೆ, ಕನಿಷ್ಠ 10 ಡಿಗ್ರಿ ಸೆಲ್ಸಿಯಸ್‌ ಮಟ್ಟಕ್ಕೆ ಇಳಿದಿದ್ದ ಬೆಂಗಳೂರು!

ಬೆಂಗಳೂರು: ಕೇವಲ ಒಂದು ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ ಗುಡುಗು ಸಹಿತ ಭಾರಿ   ಆಲಿಕಲ್ಲು ಮಳೆಯಾಗಿದೆ.  ಭಾರತ ಹವಾಮಾನ ಇಲಾಖೆಯ (ಐಎಂಡಿ) ನಗರ ವೀಕ್ಷಣಾಲಯವು ಬೆಂಗಳೂರಿನಾದ್ಯಂತ ಸರಾಸರಿ 80 ಮಿಮೀ ಮಳೆ ಮತ್ತು ಗಂಟೆಗೆ 75 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಿದೆ ಎಂದು ದಾಖಲಿಸಿದೆ.

ಎಚ್‌ಎಎಲ್ ವಿಮಾನ ನಿಲ್ದಾಣ ವೀಕ್ಷಣಾಲಯವು ಸಂಜೆ 5.30 ರವರೆಗೆ 24.7 ಮಿಮೀ ಮಳೆಯನ್ನು ದಾಖಲಿಸಿದರೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು “ಟ್ರೇಸ್ ಮಳೆ” (0.1 ಮಿಮೀ ವರೆಗೆ) ದಾಖಲಿಸಿದೆ.

 ಬಿರು ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರನ್ನು ನಿನ್ನೆಯ ಮಳೆ 10 ಡಿಗ್ರಿ ಸೆಲ್ಸಿಯಸ್ ಇಳಿಸಿತ್ತು.   ಇದು  ಆಶ್ಚರ್ಯ ಕೂಡ ಉಂಟುಮಾಡಿದೆ. ಹಲವರು ಆಲಿಕಲ್ಲು  ಆಲಿಕಲ್ಲು ಮಳೆಯಿಂದ ರಕ್ಷಣೆ ಪಡೆಯಲು ಓಡಿದ್ದಾರೆ. ಬೆಂಗಳೂರು ಅಕ್ಷರಶಃ ಕಾಶ್ಮೀರದಂತಾಗಿತ್ತು. 

ಮೊನ್ನೆ ಐಎಂಡಿ ಯೆಲ್ಲೋ ಅಲರ್ಟ್‌ ನೀಡಿತ್ತು,  ಬಿರುಗಾಳಿ, ಆಲಿಕಲ್ಲು ಮಳೆ ಮತ್ತು ಗುಡುಗು ಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿತು. ಬೆಂಗಳೂರು ನಗರ ಮತ್ತು ಗ್ರಾಮೀಣ, ಚಿಕ್ಕಬಳ್ಳಾಪುರ ಮತ್ತು ಕೋಲಾರಕ್ಕೆ ಎಚ್ಚರಿಕೆಯನ್ನು ನೀಡಲಾಗಿತ್ತು.  ಬುಧವಾರ ನಗರದಲ್ಲಿ ಇತ್ತೀಚೆಗೆ ಸುರಿದ ಮೂರನೇ ಮತ್ತು ಅತಿ ಹೆಚ್ಚು ಆಲಿಕಲ್ಲು ಮಳೆಯಾಗಿದೆ ಎಂದು ಐಎಂಡಿ-ಬೆಂಗಳೂರಿನ ಉಸ್ತುವಾರಿ ನಿರ್ದೇಶಕ ಎನ್. ಪುವಿಯರಸನ್ ಹೇಳಿದ್ದಾರೆ. 

ಮತ್ತೆರೆಡು ದಿನ ಮಳೆ : ಮುಂದಿನ ಎರಡು ದಿನಗಳವರೆಗೆ ಬೆಂಗಳೂರು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ತುಮಕೂರು, ಹಾಸನ ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಆಲಿಕಲ್ಲು ಸಹಿತ ಮಳೆಯಾಗಲಿದೆ ಎಂದು ಪುವಿಯರಸನ್ ಎಚ್ಚರಿಕೆ ನೀಡಿದ್ದಾರೆ. ಅದರ ನಂತರ, ಗರಿಷ್ಠ ತಾಪಮಾನವು 1-2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.

ಭಾರೀ ಮಳೆ ಮತ್ತು ಆಲಿಕಲ್ಲು ಮಳೆಯಾಗುವ ನಿಖರವಾದ ಸ್ಥಳಗಳನ್ನು ಊಹಿಸುವುದು ಕಷ್ಟ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಮ ಮಳೆ ಮತ್ತು ಗಂಟೆಗೆ 40-50 ಕಿ.ಮೀ ವೇಗದ ಗಾಳಿಗೆ ಮುನ್ಸೂಚನೆ ನೀಡಲಾಗಿದ್ದರೂ, ಮಧ್ಯ ಬೆಂಗಳೂರಿನಲ್ಲಿ ಗಾಳಿಯ ವೇಗ ದುಪ್ಪಟ್ಟಾಗಿತ್ತು.

More articles

Latest article

Most read