17 ವರ್ಷದ ಬಾಲಕಿ ಏಳು ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ

Most read

ನವದೆಹಲಿ : ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ 17 ವರ್ಷದ ಬಾಲಕಿ ದೆಹಲಿಯ ಓಖ್ಲಾ ಮಾರುಕಟ್ಟೆಯಲ್ಲಿನ ಏಳು ಅಂತಸ್ತಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಎಎನ್‌ಐ ವರದಿ ಮಾಡಿದೆ.

ಇದೇ ವರ್ಷ ಪಿಯುಸಿಯನ್ನು ಪೂರ್ಣಗೊಳಿಸಿರುವ ಬಾಲಕಿ ಜೆಇಇ ಪರೀಕ್ಷೆಯ ಅಧ್ಯಯನದಿಂದಾಗುತ್ತಿರುವ ಒತ್ತಡದಿಂದ ಮನನೊಂದು ಈ ನಿರ್ಧಾರವನ್ನು ತೆಗೆದುಕೊಂಡೆ ಎಂದು ಡೆತ್‌ ನೋಟ್‌ ಬರೆದಿಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ದೆಹಲಿಯ ಜಾಮಿಯಾ ನಗರ ಠಾಣೆಯ ಪೊಲೀಸರಿಗೆ ಬೆಳಗ್ಗೆ 11:25ಕ್ಕೆ ಪಿಸಿಆರ್‌ ಗೆ ಕರೆ ಬಂದಿದೆ. ಪೊಲೀಸರು ಪರಿಸ್ಥಿತಿಯನ್ನು ಮತ್ತಷ್ಟು ತನಿಖೆ ನಡೆಸಲು BNSS ಕಾಯಿದೆಯ ಸೆಕ್ಷನ್ 194 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

More articles

Latest article