ಕೋಲಾರ : ಗೃಹ ಸಚಿವ ಪ್ರಿಯಾಂಕ ಖರ್ಗೆ ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬೆದರಿಕೆ ಹಾಕುತ್ತಿರುವ ಕಿಡಿಗೇಡಿಗಳ ವಿರುದ್ಧ ತಕ್ಷಣವೇ ಕಠಿಣ ಕೈಗೊಳ್ಳಬೇಕೆಂದು ಅಂತಹ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಹಾಗೂ ಖರ್ಗೆ ರವರಿಗೆ ಜೆಡ್ ಪ್ಲಸ್ ಭದ್ರತೆ ನೀಡುವಂತೆ ಕೋಲಾರ ಜಿಲ್ಲಾ ಸಂವಿಧಾನ ರಕ್ಷಣಾ ಪಡೆ ಪ್ರತಿಭಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ದಲಿತ ಮುಖಂಡ ಚಂದ್ರಮೌಳಿ ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಸಂವಿಧಾನ ರಕ್ಷಣಾ ಪಡೆಯ ಕಾರ್ಯಕರ್ತರು ಗೃಹ ಸಚಿವ ಖರ್ಗೆ ರವರು ಸಚಿವರು ಆರ್‌ಎಸ್‌ಎಸ್ ನ ಸರ ಸಂಚಾಲಕರಾದ ಮೋಹನ್ ಭಾಗವತ್ ರಿಗೆ ಸಾಂವಿಧಾನಿಕವಾಗಿ ಹನ್ನೆರಡು ಪ್ರಶ್ನೆಗಳನ್ನು ಕೇಳಿದ ತಕ್ಷಣ ಅದಕ್ಕೆ ಸಾಂವಿಧಾನಿಕವಾಗಿಯೇ ಉತ್ತರ ನೀಡಬೇಕು. ಅದನ್ನು ಬಿಟ್ಟು ಹತಾಶರಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕಾ ಖರ್ಗೆ ರವರನ್ನು ತೇಜೋವಧೆ ಮಾಡಲಾಗುತ್ತಿದೆ.
ಬಿಜೆಪಿ ಮುಖಂಡರು ಮಾತನಾಡುತ್ತಿದ್ದಾರಲ್ಲದೆ, ಮುಖಂಡರ ಹಿಂಬಾಲಕರು ಅವರಿಗೆ ಕೊಲೆ ಬೆದರಿಕೆ ಹಾಕುತ್ತಿರುವುದನ್ನು ಸಂವಿಧಾನ ರಕ್ಷಣೆ ಪಡೆ ತೀವ್ರವಾಗಿ ಖಂಡಿಸುತ್ತಿದೆ ಎಂದು ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರವು ಪ್ರಿಯಾಂಕ ಖರ್ಗೆ ರವರಿಗೆ ಜೆಡ್ ಪ್ಲಸ್ ಭದ್ರತೆ ನೀಡುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳವರಿಗೆ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಶ್ರೀಕೃಷ್ಣ, ಸ್ಪೆಕ್ಸ್ ನಾರಾಯಣಸ್ವಾಮಿ, ಕಾಜಿಕಲ್ಲಹಳ್ಳಿ ನಾರಾಯಣಸ್ವಾಮಿ, ಸ್ಟುಡಿಯೋ ಮಣಿ ಮಾತನಾಡಿದ ಅಲ್ಲದೆ ಪತ್ರಕರ್ತ ಸಿಎಂ ಶಂಕರ್, ಪಾರೆ ಹೊಸಹಳ್ಳಿ ನಾರಾಯಣಸ್ವಾಮಿ, ಸಿ.ಕೆ. ರವೀಂದ್ರನಾಥ್, ಎಚ್.ವಿ. ನಾರಾಯಣಸ್ವಾಮಿ, ಬಿ. ಶ್ರೀರಂಗ ಮತ್ತಿತರೆ ಲಲಿತ ಮುಖಂಡರು ಪಾಲ್ಗೊಂಡಿದ್ದು ಈ ನೆಲ ಈ ಜಲ ವೆಂಕಟಾಚಲಪತಿ’ ಕ್ರಾಂತಿ ಗೀತೆಯನ್ನು ಹಾಡಿದರು. ಅಪರ ಜಿಲ್ಲಾಧಿಕಾರಿಗಳು ಮನವಿ ಪತ್ರ ಸ್ವೀಕರಿಸಿದರು.

