Saturday, July 27, 2024

ಲೋಕ ಚುನಾವಣೆ 2024: ಮೊದಲ ಪಟ್ಟಿಯಲ್ಲಿಲ್ಲ ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳ ಹೆಸರು: ಯಾಕೆ ಗೊತ್ತೇ?

Most read

ಲೋಕಸಭಾ ಚುನಾವಣೆ 2024 ರಂಗೇರಿದೆ. ಗೆಲುವಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಜನರ ಬಳಿ ಸಾಲು ಸಾಲು ಭರವಸೆಗಳನ್ನು ನೀಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಜೆಪಿ (BJP) ಬಿಡುಗಡೆ ಮಾಡಿದೆ. ಅಭ್ಯರ್ಥಿಗಳ ಪಟ್ಟಿಯಲ್ಲಿ ಕರ್ನಾಟಕದ (Karnataka) ಯಾವ ಕ್ಷೇತ್ರದ ಹೆಸರು ಅಂತಿಮವಾಗಿಲ್ಲ ಎಂಬುದೇ ಹಾಟ್ ಟಾಪಿಕ್ ಆಗಿದೆ.

ಹೌದು, ಮೊದಲನೇ ಪಟ್ಟಿಯಲ್ಲಂತು ಕರ್ನಾಟಕದಿಂದ ಯಾರು ಸ್ಪರ್ಧಿಸುತ್ತಿದ್ದಾರೆ ಎಂಬುದನ್ನು ತಿಳಿಸಿಲ್ಲ. ಎರಡನೇ ಪಟ್ಟಿಯಲ್ಲಿ ಕರ್ನಾಟದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟವಾಗುವ ಸಾಧ್ಯತೆಗಳಿವೆ. ರಾಜ್ಯದಲ್ಲಿ ಜೆಡಿಎಸ್ ಜೊತೆ ಬಿಜೆಪಿ (BJP JDS Alliance) ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ. ಆದರೆ ಈವರೆಗೂ ಎರಡೂ ಪಕ್ಷಗಳ ನಡುವೆ ಕ್ಷೇತ್ರ ಹಂಚಿಕೆಯಾಗಿಲ್ಲ. ಜೆಡಿಎಸ್ ನಾಲ್ಕರಿಂದ ಆರು ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದು, ಇನ್ನು ಯಾವುದೇ ಅಂತಿಮವಾಗಿಲ್ಲ. ಈ ಹಿನ್ನೆಲೆ ಕರ್ನಾಟಕ ಲೋಕಸಭಾ ಕ್ಷೇತ್ರದ (Loksabha Election) ಅಭ್ಯರ್ಥಿಗಳ ಹೆಸರು ಅಂತಿಮವಾಗಿಲ್ಲ ಎಂದು ಹೇಳಲಾಗುತ್ತಿದೆ.

ಹಾಲಿ ಬಿಜೆಪಿ ಸಂಸದರಾದ ಬಿಎನ್ ಬಚ್ಚೇಗೌಡ, ಶಿವಕುಮಾರ್ ಉದಾಸಿ​, ಶ್ರೀನಿವಾಸ್ ಪ್ರಸಾದ್ ಮತ್ತು ಡಿವಿ ಸದಾನಂದ ಗೌಡ ಚುನಾವಣಾ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಈ ಕ್ಷೇತ್ರಗಳಲ್ಲಿ ಆಕ್ಟಿವ್ ಅಭ್ಯರ್ಥಿಗಳ ಹುಡುಕಾಟದಲ್ಲಿ ಬಿಜೆಪಿ ತೊಡಗಿದೆ ಆದರೆ ಈ ಎಲ್ಲಾ ಕ್ಷೇತ್ರಗಳಿಗೂ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ.

ಮತ್ತೊಂದೆಡೆ ವಿಧಾನಸಭಾ ಚುನಾವಣೆಯಲ್ಲಿ ಸೋತ ಮಾಜಿ ಸಚಿವರು, ಶಾಸಕರು ಲೋಕಸಭಾ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತ ಕೆಲವು ಹಾಲಿ ಸಂಸದರ ವಿರುದ್ಧ ವಿರೋಧಿ ಅಲೆ ಸಹ ಎದ್ದಿದ್ದು, ಗೋ ಬ್ಯಾಕ್ ಕ್ಯಾಂಪೇನ್​ಗಳು ಶುರುವಾಗಿವೆ. ಸಿಟಿ ರವಿ ಕೂಡ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿನ್ನೆಲೆ ಸದ್ಯ ಕೇವಲ 195 ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದೆ. ಎರಡನೇ ಪಟ್ಟಿಯಲ್ಲಿ ಕರ್ನಾಟಕದ 10-15 ಕ್ಷೇತ್ರಗಳ ಹೆಸರು ಅಂತಿಮವಾಗುವ ಸಾಧ್ಯತೆಗಳಿವೆ. ಉಳಿದ ಕ್ಷೇತ್ರಗಳ ಪಟ್ಟಿ ಬಿಡುಗಡೆಯಾಗುವಷ್ಟರಲ್ಲಿ ಬಿಜೆಪಿಯಲ್ಲಿ ಭಿನ್ನಮತ ಶುರುವಾಗಬಹುದು ಎಂಬ ರಾಜಕೀಯ ಚರ್ಚೆಗಳ ಅಂದಾಜು‌.

More articles

Latest article