ಸಂಜಯ್ ಲೀಲಾ ಬನ್ಸಾಲಿ ಬಾಲಿವುಡ್ ನ ಫೇಮಸ್ ನಿರ್ದೇಶಕ. ಹಲವು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ದೀಪಿಕಾ ಪಡುಕೋಣೆಗೆ ಹಿಟ್ ಸಿನಿಮಾಗಳನ್ನು ಮಾಡಿದವರು ಬನ್ಸಾಲಿ. ಆದರೆ ಅವರ ಬಹುತೇಕ ಸಿನಿಮಾಗಳಲ್ಲಿ ವೇಶ್ಯಾವಾಟಿಕೆಯ ಗಾಳಿ ಬೀಸುತ್ತದೆ. ದೇವದಾಸ್, ಗಂಗೂಬಾಯಿ ಕಾಠಿವಾಡ, ಬಾಜಿರಾವ್ ಮಸ್ತಾನಿ ಈಗ ರಿಲೀಸ್ ಆಗಿರುವ ಹೀರಾಮಂಡಿಯಲ್ಲಿಯೂ ಇದೆ. ಯಾಕಿರಬಹದೂ ಎಂಬ ಕುತೂಹಲ ಸಹಜವಾಗಿಯೇ ಮೂಡುತ್ತದೆ.
ಸದ್ಯ ಬನ್ಸಾಲಿ ಅವರ ಹೀರಾಮಂಡಿ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿದೆ. ಈ ಸಿನಿಮಾದಲ್ಲಿ ಕಂಪ್ಲೀಟ್ ವೇಶ್ಯೆಯರ ಜೀವನವನ್ನೇ ತೋರಿಸಲಾಗಿದೆ. ಈ ವೆಬ್ ಸರಣಿಯೂ ಡೈಮಂಡ್ ಬಜಾರ್ ವೇಶ್ಯೆಯರ ಪಾತ್ರಗಳನ್ನು ಒಳಗೊಂಡಿದೆ. ಲಾಹೋರ್ ನ ಹೀರಾಮಂಡಿ ಪ್ರದೇಶವನ್ನು ಆಧರಿಸಿದ ಸೀರಿಸ್ ಆಗಿದೆ.
ಬನ್ಸಾಲಿಯವರ ಸಿನಿಮಾಗಳೆಂದರೇನೆ ಅಲ್ಲೊಂದು ಬ್ಯೂಟಿಫುಲ್ ಲೋಕ ಕಟ್ಟಿಕೊಳ್ಳುತ್ತದೆ. ಅದ್ದೂರಿ ಸೆಟ್, ಅದ್ದೂರಿ ಕಾಸ್ಟ್ಯೂಮ್ ಹೀಗೆ ಎಲ್ಲದರ ಮೇಲೂ ಒಂದು ಕುತೂಹಲ ಹುಟ್ಟುವುದಲ್ಲದೆ ಸಿನಿಮಾದ ಮೇಲೆ ನಿರೀಕ್ಷೆ ಜಾಸ್ತಿಯಾಗುತ್ತದೆ. ಅಷ್ಟಕ್ಕೂ ಸಂಜಯ್ ಲೀಲಾ ಬನ್ಸಾಲಿ ಅವರ ಸಿನಿಮಾಗಳಲ್ಲಿ ಯಾಕೆ ರೆಡ್ ಲೈಟ್ ಏರಿಯಾ, ವೇಶ್ಯೆಯರ ಬದುಕನ್ನೇ ತೋರಿಸಲಾಗುತ್ತದೆ ಎಂಬುದಕ್ಕೆ ಅವರೇ ಸಂದರ್ಶನವೊಂದರಲ್ಲಿ ಉತ್ತರಿಸಿದ್ದಾರೆ.
‘ಮುಂಬೈನ ರೆಡ್ ಲೈಟ್ ಏರಿಯಾವಿರುವ ಕಾಮಾಟಿಪುರದ ಬಳಿ ಇದ್ದ ಮನೆಯಲ್ಲಿ ನಾನು ಬೆಳೆದೆ. ಚಾವಾಡಿಯಲ್ಲಿರುವಾಗ ಬಹಳ ಹತ್ತಿರದಿಂದ ವೇಶ್ಯೆಯರ ಬದುಕನ್ನು ನೋಡಿದ್ದೇನೆ. ಇಲ್ಲಿ ವೇಶ್ಯೆಯರು ಸ್ವಲ್ಪವೇ ಹಣಕ್ಕಾಗಿ ತಮ್ಮನ್ನು ತಾವು ಹೇಗೆ ಮಾರಿಕೊಳ್ಳುತ್ತಾರೆ ಎಂಬುದನ್ನು ಬಾಲ್ಯದಿಂದ ನೋಡಿರುವುದರಿಂದ ಆ ವಿಚಾರಗಳು ಮನದಲ್ಲಿಯೇ ನೆಲೆಗೊಂಡಿವೆ. ದುಃಖದಿಂದ ತುಂಬಿರುವ ದೇಹವನ್ನು ವೇಶ್ಯೆಯರು ಮೇಕಪ್ ನಿಂದ ಮರೆಮಾಚುತ್ತಿದ್ದರು ಎಂದಿದ್ದಾರೆ.