ಇವತ್ತು ಕಣಕ್ಕೆ ಇಳಿಯಲಿದ್ದಾರೆಯೇ ಆ ವಿಸ್ಪೋಟಕ RCB ದಾಂಡಿಗ? MI ವಿರುದ್ಧ ಪಂದ್ಯಕ್ಕೆ ಎರಡು ಬದಲಾವಣೆ ನಿಶ್ಚಿತ

ರಾಯಪುರ: ಇಂದು IPL 2026ರ ಬಹು ನಿರೀಕ್ಷಿತ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಮುಂಬೈ ಇಂಡಿಯನ್ಸ್ (MI) ನಡುವೆ ಭರ್ಜರಿ ಸೆಣೆಸಾಟ ನಡೆಯಲಿದೆ. ಸತತ ಎರಡು ಸೋಲಿನಿಂದ ಕಂಗೆಟ್ಟಿರುವ RCB ತಂಡದಲ್ಲಿ ಎರಡು ಬದಲಾವಣೆ ಆಗುವುದು ನಿಶ್ಚಿತ.

ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜಿತೇಶ್ ಶರ್ಮಾ ಕಳೆದ ಸೀಸನ್ ನ ಚಾರ್ಮ್ ಕಳೆದುಕೊಂಡಿದ್ದಾರೆ. ಅವರ ಬ್ಯಾಟ್ ಸದ್ದು ಮಾಡದೆ ಇರುವುದು RCB ಕ್ಯಾಂಪ್ ನಲ್ಲಿ ಕಳವಳಕ್ಕೆ ಕಾರಣವಾಗಿದೆ.

ಈ ಸೀಸನ್‌ನಲ್ಲಿ ಜಿತೇಶ್ ಶರ್ಮಾ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿರುವ ಹಿನ್ನೆಲೆಯಲ್ಲಿ ತಂಡದ ನಿರ್ವಹಣೆ ಹೊಸ ಆಯ್ಕೆ ಕಡೆ ತಿರುಗಿದೆ. ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಮತ್ತು ವೇಗದ ರನ್‌ಗಳಿಗಾಗಿ ಹೆಸರುವಾಸಿಯಾಗಿರುವ ಜೋರ್ಡಾನ್ ಕಾಕ್ಸ್ ಅವರನ್ನು ಇಂದು ಪ್ಲೇಯಿಂಗ್ XIಗೆ ಸೇರಿಸುವ ಸಾಧ್ಯತೆ ಬಹಳ ಹೆಚ್ಚು ಎನ್ನಲಾಗಿದೆ.

25 ವರ್ಷದ ಇಂಗ್ಲೀಷ್ ದಾಂಡಿಗ ಜೋರ್ಡಾನ್ ಕಾಕ್ಸ್ ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ಆಡುವ ಕ್ಷಮತೆ ಹೊಂದಿದ್ದಾರೆ.

ಇನ್ನು ಫಿಲ್ ಸಾಲ್ಟ್ ಅನುಪಸ್ಥಿತಿಯಲ್ಲಿ ಆರಂಭಿಕ ಆಟಗಾರ ಜಾಕೋಬ್ ಬೆಥೆಲ್ ನಾಲ್ಕು ಪಂದ್ಯಗಳಲ್ಲಿ ಉತ್ತಮ ಆರಂಭ ಒದಗಿಸಲು ವಿಫಲರಾಗಿದ್ದಾರೆ. ಈ ಈ ಹಿನ್ನೆಲೆಯಲ್ಲಿ ವೆಂಕಟೇಶ್ ಐಯ್ಯರ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ವೆಂಕಟೇಶ್ ಐಯ್ಯರ್ ಮತ್ತು ದೇವದತ್ ಪಡಿಕ್ಕಲ್ ಇಬ್ಬರಲ್ಲಿ ಒಬ್ಬರು ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.

RCB ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೇಗಿದೆ.

  1. ವಿರಾಟ್ ಕೊಹ್ಲಿ
  2. ವೆಂಕಟೇಶ್ ಅಯ್ಯರ್
  3. ದೇವದತ್ತ ಪಡಿಕ್ಕಲ್
  4. ರಜತ್ ಪಟೀದಾರ್ (ಕ್ಯಾಪ್ಟನ್)
  5. ಜಾರ್ಡನ್ ಕಾಕ್ಸ್ (ವಿಕೆಟ್ ಕೀಪರ್)
  6. ಟಿಮ್ ಡೇವಿಡ್
  7. ರೊಮಾರಿಯೋ ಶೆಫರ್ಡ್
  8. ಕ್ರುನಾಲ್ ಪಾಂಡ್ಯ
  9. ಭುವನೇಶ್ವರ್ ಕುಮಾರ್
  10. ಜೋಶ್ ಹೇಜಲ್‌ವುಡ್
  11. ಸುಯಶ್ ಶರ್ಮಾ
    ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಗಳು: ಜೇಕಬ್ ಬೆಥೆಲ್, ರಸಿಖ್ ದಾರ್, ಮಂಗೇಶ್ ಯಾದವ್.

ತಂಡದಲ್ಲಿ ಒಟ್ಟು 8 ಬ್ಯಾಟಿಂಗ್ ಆಯ್ಕೆಗಳು ಇರುವುದರಿಂದ ಯಾವುದೇ ಸಮಯದಲ್ಲೂ ಕಂಬ್ಯಾಕ್ ಮಾಡುವ ಶಕ್ತಿ ಇದೆ. ಜಾರ್ಡನ್ ಕಾಕ್ಸ್ ಆಗಮನದಿಂದ ಮಧ್ಯ ಕ್ರಮಾಂಕ ಹೆಚ್ಚು ಆಕ್ರಮಣಕಾರಿ ಆಗಬಹುದು.

ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್‌ವುಡ್ ಹೊಸ ಚೆಂಡಿನಲ್ಲಿ ಅಪಾಯಕಾರಿ ಸ್ವಿಂಗ್ ನೀಡಬಲ್ಲರು. ಕ್ರುನಾಲ್ ಪಾಂಡ್ಯ ಮತ್ತು ಸುಯಶ್ ಶರ್ಮಾ ಸ್ಪಿನ್ ಮೂಲಕ ಮಧ್ಯ ಓವರ್‌ಗಳಲ್ಲಿ ನಿಯಂತ್ರಣ ತರುವ ಸಾಮರ್ಥ್ಯ ಹೊಂದಿದ್ದಾರೆ.

ಎಡ-ಬಲ ಕೈ ಬ್ಯಾಟರ್‌ಗಳ ಮಿಶ್ರಣದಿಂದ ಮುಂಬೈ ಇಂಡಿಯನ್ಸ್ ಬೌಲರ್‌ಗಳಿಗೆ ದೊಡ್ಡ ಸವಾಲು ಎದುರಾಗಬಹುದು. ರಾಯಪುರ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಅನುಕೂಲಕರವಾಗಿರುತ್ತದೆ. ಡ್ಯೂ ಪರಿಣಾಮದಿಂದ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಸುಲಭವಾಗುವ ಸಾಧ್ಯತೆ ಇದೆ. ಇಂದು 180–200 ರನ್‌ಗಳ ಹೈ-ಸ್ಕೋರಿಂಗ್ ಪಂದ್ಯ ನಡೆಯುವ ಸಾಧ್ಯತೆ ಜಾಸ್ತಿ.

ಟಾಸ್ ರಾತ್ರಿ 7:00ಕ್ಕೆ ನಡೆಯಲಿದೆ. ಪಂದ್ಯ ರಾತ್ರಿ 7:30ಕ್ಕೆ ಆರಂಭವಾಗಲಿದೆ.

More articles

Latest article

Most read